ಕವಿತಾಳ:-
ಇಂದು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ೧೧೯ನೇ ಜನ್ಮದಿನೋತ್ಸವದ ಪ್ರಯುಕ್ತ ಶ್ರೀ ಮಠದ ಹಳೆಯ ವಿದ್ಯಾರ್ಥಿಗಳಿಂದ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು, ಹಾಲು ವಿತರಣೆ ಮಾಡು ಮೂಲಕ ಶ್ರೀಗಳ ಜನ್ಮದಿನೋತ್ಸವವನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಹಳೆಯ ವಿದಾರ್ಥಿ ವೆಂಕಟೇಶ ಶಂಕ್ರಿ ದೇವತಗಲ್ ಮಾತನಾಡಿ `ನಮ್ಮಂತಹ ಎಷ್ಟೋ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಿ ತಮ್ಮ ಜೀವನವನ್ನೆ ನಮ್ಮಂತಹ ಬಡ ವಿದ್ಯಾರ್ಥಿಗಳಿಗಾಗಿ ಮುಡುಪಾಗಿಟ್ಟಿದ್ದ ಅಜ್ಜನವರ ಆಶಿರ್ವಾದ ಸದಾ ನಮ್ಮ ಮೇಲಿರಲಿ ಮತ್ತು ಅವರ ಆದರ್ಶಪ್ರಾಯವಾದ ಜೀವನವನ್ನು ನೋಡಿ ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಾವುಗಳು ಸಾಗುವ ಪ್ರಯತ್ನವನ್ನು ಮಾಡಬೇಕು ನಮ್ಮ ಜೀವನದ ದಾರಿಯನ್ನು ತೊರಿಸಿಕೊಟ್ಟಿರುವ ಶ್ರೀಮಠ ಹಾಗೂ ಶ್ರೀಗಳನ್ನು ನಮ್ಮ ಜೀವನದಲ್ಲಿ ಎಂದು ಮರೆಯದೆ ಸಮಾಜದಲ್ಲಿ ಆದರ್ಶಪ್ರಾಯವಾದ ಜೀವನ ನಡೆಸುವ ಮೂಲಕ ಅವರಿಗೆ ಗೌರವವನ್ನು ತರೋಣ’ ಎಂದರು.
ಈ ಸಂದರ್ಭದಲ್ಲಿ ನಾಗರಾಜ ಸಾಹುಕಾರ್ ಕಲಂಗೇರಾ, ದೇವರಾಜ್ ದೇವತಗಲ್, ಹನುಮೇಶ, ಮೌನೇಶ್, ಮಹೇಶ್, ವಿನೋದ್, ಸಂತೋಷ್ ಕಲ್‌ಶೆಟ್ಟಿ,ಗೌಸ್, ಹುಸೇನಿ,ಅಜ್ಮೀರ್, ನಿರುಪಾದಿ, ರಾಘವೇಂದ್ರ ಸೇರಿದಂತೆ ಶ್ರೀ ಮಠದ ಹಳೆಯ ವಿದ್ಯಾರ್ಥಿಗಳು ವೈದ್ಯಾಧಿಕಾರಿ ಪ್ರವಿಣ ಮತ್ತಿತರರು ಉಪಸ್ಥಿತರಿದ್ದರು.


