ದೇವದುರ್ಗ : ತಾಲೂಕಿನ ಜಾಲಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ರಥೋತ್ಸವದ ಅಂಗವಾಗಿ ತ್ರಯೋದಶಿ ಗರುಡ ವಾಹನ ಸೇವೆ ಇಂದು ಭಕ್ತಿ ಭಾವದಿಂದ ಹಾಗೂ ಅದ್ದೂರಿಯಾಗಿ ಜರುಗಿತು.
ಸಾವಿರಾರು ಭಕ್ತರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ, ರಾತ್ರಿಯ ವೇಳೆ ಭಕ್ತರು ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ 5 ಗಂಟೆಗೆ ದೇವಾಲಯದ ಪೂಜಾರಿಗಳಾದ
ಸುರೇಶ್ ಪೂಜಾರಿ, ಗಂಗಾಧರ್ ಪೂಜಾರಿ, ಚಂದ್ರಹಾಸ್ ಪೂಜಾರಿ, ವೆಂಕಟೇಶ್ ಪೂಜಾರಿ ಅವರು ವರದಾಚಾರಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಉಚ್ಚಯ್ಯ ರಥದಲ್ಲಿ ಶ್ರೀ ದೇವರನ್ನು ಪ್ರತಿಷ್ಠಾಪಿಸಿದರು.
ಈ ಸಂದರ್ಭದಲ್ಲಿ ಊರಿನ ವತಂದಾರರು ಹಾಗೂ ರಾಜವಂಶಸ್ಥರಾದ
ರಾಜ ರಾಮ್ ಭದ್ರಪ್ಪ ನಾಯಕ್, ರಾಜ ವಾಸುದೇವ ನಾಯಕ್, ಹಾಗೂ ರಂಗಪ್ಪ ದೊರೆ ಊರಿನ ಎಲ್ಲಾ ವತಂದಾರರು ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಹಾಜರಿದ್ದರು.
ಪ್ರತಿವರ್ಷದಂತೆ ಈ ವರ್ಷವೂ ಗರುಡ ವಾಹನ ಸೇವೆಗೆ ಹಾರ-ತುರಾಯಿ ಸಮರ್ಪಣೆ ಮಾಡಿದ್ದು,
ಗೂಡ್ ಸಾಬ್ ದಂಡೋತಿ, ಯಾಸಿನ್ ಸಾಬ್ ಮುಲ್ಲಾ, ಯೂಸುಫ್ ಸಾಬ್ ಪೂಜಾರಿ, ಇಬ್ರಾಹಿಂ ಪೂಜಾರಿ ಅವರು ಭಕ್ತಿಭಾವದಿಂದ ಅರ್ಪಿಸಿದರು.
—
🚩 ಬೆಳಗಿನ ಕಾರ್ಯಕ್ರಮ ಜರುಗಿತು
ಬೆಳಗ್ಗೆ 8:30 ಗಂಟೆಗೆ, ಊರಿನ ವತಂದಾರರು, ರಾಜವಂಶಸ್ಥರು, ದೇಸಾಯಿ, ಕುಲಕರಣಿ, ಪೊಲೀಸ್ ಪಾಟೀಲ್, ಮಾಲಿಪಾಟೀಲ್ ಹಾಗೂ ಗ್ರಾಮಸ್ಥರು ಸೇರಿ ಸಕ್ಕರೆ ಸಮೇತ ಪೂಜೆ ನೆರವೇರಿಸಿದರು ಉಚ್ಚಯ್ಯ ರಥವನ್ನು ಎಳೆಯುವ ಕಾರ್ಯಕ್ರಮ ನಡೆಯಿತು .
ಈ ರಥವನ್ನು ಸಂಜೀವ್ ಮೂರ್ತಿ ಗುಡಿವರೆಗೆ ಎಳೆದು, ಅಲ್ಲಿ ಪೂಜೆ ಸಲ್ಲಿಸಿ ಶ್ರೀ ಲಕ್ಷ್ಮಿ ರಂಗನಾಥ ಗುಡಿಯ ಪೂಜಾರಿಗಳಾದ ಸುರೇಶ್ ಪೂಜಾರಿ, ಗಂಗಾಧರ್ ಪೂಜಾರಿ ಹಾಗೂ ವರದಚಾರ್ಯರು ಪೂಜೆ ನೆರವೇರಿಸಿದರು ನಂತರ ಮತ್ತೆ ತೇರಿನ ಹತ್ತಿರ ನಿಲ್ಲಿಸಲಾಯಿತು .
ಈ ಸಂದರ್ಭದಲ್ಲಿ
ಊರಿನ ವತಂದಾರರಾದ
ರಾಜವಂಶಸ್ಥರು, ದೊರೆಗಳು ದೇಸಾಯಿಯವರು, ಕುಲಕರಣಿಯವರು, ಪೊಲೀಸ್ ಪಾಟೀಲ್, ಮಾಲಿಪಾಟೀಲ್ ಹಾಗೂ ಭಕ್ತಾದಿಗಳು ಗೋವಿಂದ ಸಮಿತಿ ಮಾಲದಾರಿಗಳು ಎಲ್ಲಾ ಕಾರ್ಯಕ್ರಮ ನೆರವೇರಿಸಿದರು
ಈ ಸಂದರ್ಭದಲ್ಲಿ
ಮಾನ್ಯ ತಹಸಿಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯವರು ಹಾಜರಾಗಿದ್ದರು


