ದೇವದುರ್ಗ : ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ದಿನಾಂಕ 29-03-2026 ರಂದು (ರವಿವಾರ) ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಪಕ್ಷಾತೀತ ಪ್ರಗತಿಪರ ರೈತರ ಒಕ್ಕೂಟ ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿ ವಿಜೃಂಭಣೆಯ ವಿಜಯೋತ್ಸವವನ್ನು ಆಚರಿಸಲಾಯಿತು.
ಅಂಬೇಡ್ಕರ್ ವೃತ್ತದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ನಂತರ ಬಾಜಾ-ಭಜಂತ್ರಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಬಾಬು ಜಗಜೀವನ್ ರಾಮ್ ವೃತ್ತ ಹಾಗೂ ಭಗೀರಥ ವೃತ್ತಗಳಲ್ಲಿ ಮಾಲಾರ್ಪಣೆ ಮಾಡಲಾಯಿತು.
ಮುಂದಾಗಿ ಈಶ್ವರ ದೇವಸ್ಥಾನ ಹಾಗೂ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜೊತೆಗೆ ಮೊಹರಂ ಅಲೈದೇವರ ಮಸೀದಿಯಲ್ಲಿ ಫಾತಿಹ ನೆರವೇರಿಸಲಾಯಿತು. ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿ ಎಲ್ಲ ಅಭ್ಯರ್ಥಿಗಳು ಹಾಗೂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರೈತರ ಒಕ್ಕೂಟದ ಮುಖಂಡರಾದ ಚಂದಪ್ಪ ಬುದ್ದಿನ್ನಿ ಅವರು ಮಾತನಾಡಿ, “ನಮ್ಮ ಎಲ್ಲಾ ಸದಸ್ಯರು ರೈತರ ಪರವಾಗಿ ಕೆಲಸ ಮಾಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಹೆಸರು ತರುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ವೀರಣ್ಣ ಬಳೆ ಸಾಹುಕಾರ್ ಮಾತನಾಡಿ, “12 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗೆಲ್ಲಲು ರೈತರು ತೋರಿದ ಅಪಾರ ಬೆಂಬಲಕ್ಕೆ ನಾವು ಕೃತಜ್ಞರು” ಎಂದು ಹೇಳಿದರು. ಜೊತೆಗೆ ಈ ಗೆಲುವು ಎಲ್ಲ ಅಭ್ಯರ್ಥಿಗಳಿಗೆ ಹೆಚ್ಚಿದ ಜವಾಬ್ದಾರಿಯನ್ನು ನೀಡಿದೆ ಎಂದು ಅಭಿಪ್ರಾಯಪಟ್ಟರು.
✅ ಗೆಲುವು ಸಾಧಿಸಿದ ಅಭ್ಯರ್ಥಿಗಳು:
ಖುರಸಿದ್ ಪಟೇಲ್, ಗಿರೀಶ್ ಮಾಲಿಪಾಟೀಲ್, ನವೀನ್ ಪಾಟೀಲ್, ಈಶಣ್ಣ ಕಾಟಮಳ್ಳಿ, ಗೋವಿಂದಪ್ಪ ಹಲಗೇರಿ, ವೆಂಕೂಬ ಪೂಜಾರಿ, ಅಮರೆಗೌಡ ಪೊಲೀಸ್ ಪಾಟೀಲ್, ಶ್ರೀಮತಿ ಶಾಂತಮ್ಮ ಜಂಬಲದಿನ್ನಿ, ಶ್ರೀಮತಿ ಸರಸ್ವತಿ ನಾಡಗೌಡ, ವೆಂಕೋಬ ಯರಕಮಟ್ಟಿ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು
👥 ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದವರು:
ವೀರಣ್ಣ ಬಳೆ ಸಾಹುಕಾರ್, ಅಮರೇಶ್ ಪಾಟೀಲ್, ಶಿವು ಪಾಣಿ ಸಾಹುಕಾರ್, ರಾಮನಗೌಡ ಕರಡಿಗುಡ್ಡ, ಕೊಪರೇಶ್ ರಾವ್ ದೇಸಾಯಿ, ಶ್ರೀಧರ್ ದೇಸಾಯಿ, ಶಂಕರ್ ಗೌಡ ಮಾಲಿಪಾಟೀಲ್, ಚೆನ್ನಮ್ಮಮಠ ತಾತ, ರಂಗನಾಥ ಮಾಕಾಶಿ, ಚಂದಪ್ಪ ಬುದ್ದಿನ್ನಿ, ಗೌಡಪ್ಪ ವಡ್ಡರ್, ರಮೇಶ್ ಆನ್ವರಿ, ಗಂಗಪ್ಪ ತಗ್ಗಳ್ಳಿ, ಆನಂದ್ ಪಾಟೀಲ್, ಭೀಮಣ್ಣ ಅಂಜಳ, ಶಿವಲಿಂಗಪ್ಪ ಗೆಜ್ಜೆಬಾವಿ, ಲಕ್ಕಪ್ಪ ಚಿಂಚೋಡಿ, ರಂಗಪ್ಪ ಬಂಡಿ, ವೆಂಕುಬ ತೋಟದ, ಯಮನೂರಪ್ಪ ಬೊಮ್ಮನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೀರೇಶ ಅರಕೇರಿ ಹಾಗೂ ಸದಸ್ಯರಾದ ಸಲಭಣ್ಣ ಹಂಪರಗುಂದಿ, ಅಬ್ದುಲ್ ರಹಮಾನ್, ಬಸವರಾಜ ಗೋಪಾಲಪುರ್, ಮಲ್ಲು ಹಡಪದ ಉಪಸ್ಥಿತರಿದ್ದರು


