ಸಿಂಧನೂರು : ಬೆಂಗಳೂರು- ರಾಜಧಾನಿಯ ಪ್ರತಿಷ್ಠಿತ ‘ದಿ ಚಾನ್ಸೆಲರ್ ಪೆವಿಲಿಯನ್ ಇಂಟರ್ ನ್ಯಾಷನಲ್’ ಹೋಟೆಲ್‌ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ವಿಶೇಷ ಸಮಾರಂಭದಲ್ಲಿ, ಸಿಂಧನೂರಿನ ಕರುಣೆಯ ಕಾರುಣ್ಯ ಆಶ್ರಮದ ಪ್ರಮುಖ ಸೇವಾಕರ್ತರಾದ ಶ್ರೀಮತಿ ಸುಜಾತ ಚನ್ನಬಸವ ಸ್ವಾಮಿ ಹಿರೇಮಠ (ಹರೇಟನೂರು) ಅವರಿಗೆ “ಎಕ್ಸ್ ಲೆಂಟ್ ಹಾನರ್ ಅಂತರಾಷ್ಟ್ರೀಯ ಮಹಿಳಾ ಸಾಧಕಿ” ಎನ್ನುವ ಶ್ರೇಷ್ಠ ಪ್ರಶಸ್ತಿಯಾನ್ನು ಕರ್ನಾಟಕ ಸರ್ಕಾರದ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಖ್ಯಾತ ನಟಿ ಮೇಘನಾ ಗಾಂವ್ಕರ್ ಇವರುಗಳ ಸಮಕ್ಷಮದಲ್ಲಿ ಗೌರವ ಪೂರ್ವಕವಾಗಿ ಪ್ರಶಸ್ತಿಯನ್ನು ವಿತರಿಸಿ ಗೌರವಿಸಲಾಯಿತು.
ಅನಾಥರು, ಹಿರಿಯ ನಾಗರಿಕರು ಹಾಗೂ ಸಮಾಜದ ಶೋಷಿತ ವರ್ಗದವರ ಪರವಾಗಿ ಅವರು ಕೈಗೊಂಡಿರುವ ನಿರಂತರ ಸಮಾಜಮುಖಿ ಮತ್ತು ನಿಸ್ವಾರ್ಥ ಸೇವಾ ಕಾರ್ಯಗಳನ್ನು ಗುರುತಿಸಿ ಈ ಪ್ರತಿಷ್ಠಿತ ಗೌರವವನ್ನು ಸಮರ್ಪಿಸಲಾಗಿದೆ.
ಕರ್ನಾಟಕ ಸರ್ಕಾರದ ಗೌರವಾನ್ವಿತ ಸಾರಿಗೆ ಹಾಗೂ ಮುಜರಾಯಿ ದತ್ತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ರಾಮಲಿಂಗಾರೆಡ್ಡಿ ಅವರು ಸುಜಾತ ಹಿರೇಮಠ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟಿ ಮೇಘನಾ ಗಾಂವ್ಕರ್ ಉಪಸ್ಥಿತರಿದ್ದು, ಸಾಧಕಿಯ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಸಿಂಧನೂರಿನ ಕರುಣೆಯ ಕಾರುಣ್ಯ ಆಶ್ರಮದ ಮೂಲಕ ನೂರಾರು ಅನಾಥರಿಗೆ ಆಸರೆಯಾಗಿರುವ ಸುಜಾತ ಹಿರೇಮಠ ಅವರು, ಕೇವಲ ಅನ್ನ-ಆಶ್ರಯ ನೀಡುವುದಷ್ಟೇ ಅಲ್ಲದೆ, ಅವರಿಗೆ ಪ್ರೀತಿ ಮತ್ತು ಘನತೆಯ ಬದುಕನ್ನು ಕಟ್ಟಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ.
ಗ್ರಾಮೀಣ ಭಾಗದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಮತ್ತು ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವ ಮೂಲಕ ಸುಜಾತ ಅವರು ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕೂಡ ಸೇವೆ ಸಲ್ಲಿಸಿ ಹರೇಟನೂರು ಗ್ರಾಮದಲ್ಲಿ ಅನೇಕ ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿರುವ ಇವರು ಗ್ರಾಮದ ಪ್ರತಿಯೊಬ್ಬ ಸಾರ್ವಜನಿಕರಿಗೆ ತಾಯಿಯಾಗಿ ಸಹೋದರಿಯಾಗಿ ಜನರ ಕಷ್ಟಗಳಲ್ಲಿ ಭಾಗಿಯಾಗುತ್ತಿದ್ದರು.
ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಹಗಲಿರುಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ಶ್ರಮಿಸುತ್ತಿರುವ ಇವರ ಕಾರ್ಯಕ್ಕೆ ಈ ಅಂತರಾಷ್ಟ್ರೀಯ ಮಟ್ಟದ ಮಹಿಳಾ ಸಾಧಕಿ ಪ್ರಶಸ್ತಿ ಮತ್ತಷ್ಟು ಬಲ ತುಂಬಿದೆ.
“ಸೇವೆ ಎನ್ನುವುದು ಕೇವಲ ಕೆಲಸವಲ್ಲ, ಅದು ಬದುಕಿನ ಧರ್ಮ. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ,” ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುಜಾತ ಹಿರೇಮಠ ತಮ್ಮ ಅನಿಸಿಕೆ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಲವಾರು ಮಹಿಳಾ ಸಾಧಕಿಯರು ಕಾರುಣ್ಯ ಆಶ್ರಮದ ಸಂಪೂರ್ಣ ಕರ್ತವ್ಯವನ್ನು ತಿಳಿದುಕೊಂಡು ಹ್lರೇಟನೂರು ಎನ್ನುವ ಗ್ರಾಮಕ್ಕೆ ಕೀರ್ತಿ ತಂದು ತಾವು ಕರುನಾಡಿನ ಕರುಣಾಮಯಿ ಗಳಾಗಿದ್ದೀರಿ ಎಂದು ಹಾರೈಕೆಗಳ ಮೂಲಕ ಸೇವೆಗೆ ಪ್ರೋತ್ಸಾಹಿಸಿದರು
ಈ ಸಂದರ್ಭದಲ್ಲಿ ಆಶ್ರಮದ ಹಿತೈಷಿಗಳು, ಅಭಿಮಾನಿಗಳು ಹಾಗೂ ಸಮಾಜದ ವಿವಿಧ ಗಣ್ಯರು ಸುಜಾತ ಚನ್ನಬಸವ ಸ್ವಾಮಿ ಹಿರೇಮಠ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ ಸದಸ್ಯರಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್. ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು. ಮತ್ತು ಸಲಹಾ ಸಮಿತಿಯ ಸದಸ್ಯರುಗಳಾದ ಅಣ್ಣಪ್ಪ ಗೌಡ ಮೇಟಿ ಗೌಡ್ರು. ರೇಣುಕಾ ಸ್ವಾಮಿ ಬಿಎಸ್ಎನ್ಎಲ್ ಇಲಾಖೆ, ಸಿಂಧನೂರು. ವೀರಭದ್ರಗೌಡ ಗಿಣಿವಾರ. ಸುಧಾ ವೀರಭದ್ರಗೌಡ ಗಿಣಿವಾರ. ಶರಣಪ್ಪ ನಾಯಕ ಕಸಬಾ ಲಿಂಗಸೂಗೂರು. ಅಂಬು ಪಾಟೀಲ್ ರೇಖಲಮರಡಿ.. ವೀರೇಶ ಫೋಟೋಗ್ರಾಫರ್. ವಿನಾಯಕ. ಬಸವ ಸ್ವಾಮಿ. ಹಾಗೂ ಅನೇಕರು ಉಪಸ್ಥಿತರಿದ್ದರು.
ನಮ್ಮ ಈ ಸಿಂಧನೂರಿನ ಕರುಣೆಯ ಕಾರುಣ್ಯ ಕುಟುಂಬದಿಂದ ಈ ಪ್ರಶಸ್ತಿ ಹಾಗೂ ಕಾರುಣ್ಯ ಆಶ್ರಮಕ್ಕೆ ಬಂದಿರುವ ಎಲ್ಲಾ ಪ್ರಶಸ್ತಿಗಳು ಆಶ್ರಮಕ್ಕೆ ಸಹಾಯ ಸಹಕಾರ ಮಾಡುವ ಮಹಾದಾನಿಗಳಿಗೆ ಅರ್ಪಣೆ ದಾನಿಗಳು ಮುಂದಿನ ದಿನಮಾನಗಳಲ್ಲಿ ಆಶ್ರಮಕ್ಕೆ ಸ್ವಂತ ಜಾಗ ಕೊಡಿಸಿದರೆ ಇಡೀ ನಮ್ಮ ಕಲ್ಯಾಣ ಕರ್ನಾಟಕದ ಕರುಣೆಯ ಮಂದಿರವನ್ನಾಗಿ ಮಾಡಲು ನಮ್ಮ ಈ ಕುಟುಂಬ ಮತ್ತು ನಮ್ಮ ಶ್ರೀಮಠ ಸೇವಾ ಟ್ರಸ್ಟ್ ಹರೇಟನೂರು ಕಂಕಣ ಬದ್ಧವಾಗಿ ನಿಂತಿದೆ. ದಾನಿಗಳಲ್ಲಿ ಕೈಮುಗಿದು ವಿನಂತಿಸಿಕೊಳ್ಳುತ್ತೇವೆ ನೀವುಗಳು ಇಟ್ಟಿರುವ ಪ್ರೀತಿ ವಿಶ್ವಾಸ ನಂಬಿಕೆಯನ್ನು ಉಳಿಸಿಕೊಂಡು ನಮ್ಮೆಲ್ಲರ ಮಾರ್ಗದರ್ಶನದಂತೆ ಕಾರುಣ್ಯ ಆಶ್ರಮದ ಕರ್ತವ್ಯ ನೆರವೇರುತ್ತದೆ — ಡಾ. ಚನ್ನಬಸವ ಸ್ವಾಮಿ ಹಿರೇಮಠ

