ತಾಳಿಕೋಟೆ: ಪಟ್ಟಣದ ಗಣೇಶ ನಗರದಲ್ಲಿರುವ ಹೆಸ್ಕಾಂ ಉದ್ಯೋಗಿ ರವಿ ಕೋಳೂರ ಇವರ ಮನೆಯಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಸಿಲಿಂಡರ್ ಸ್ಪೋಟಗೊಂಡಿದ್ದು ಇಡೀ ಮನೆ ಜಖಂಗೊಂಡ ಘಟನೆ ಗುರುವಾರ ನಡೆದಿದೆ. ಪಟ್ಟಣದ ಗಣೇಶನಗರದಲ್ಲಿರುವ ಹೆಸ್ಕಾಂ ಉದ್ಯೋಗಿ ರವಿ ಕೋಳೂರ ಇವರ ಮನೆಯಲ್ಲಿ ಮಧ್ಯಾಹ್ನ 1-25 ಘಂಟೆ ಸಮೀಪದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು ಸ್ಪೋಟದ ಶಬ್ದ ಕೇಳಿ ಬಡಾವಣೆ ನಿವಾಸಿಗಳು ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ, ತಕ್ಷಣದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೀಗ ಹಾಕಿದ ಮನೆಯನ್ನು ತೆರೆದು ಒಳಗೆ ಪ್ರವೇಶಿಸಿ ಹಾನಿ ತಪ್ಪಿಸುವ ಕಾರ್ಯ ಮಾಡಿದ್ದಾರೆ. ಘಟನೆ ಸಂಭವಿಸಿದ ಸಮಯದಲ್ಲಿ ಮನೆಯ ಮಾಲೀಕ ರವಿ ಕೋಳೂರ,ಅವರ ಧರ್ಮಪತ್ನಿ ಹಾಗೂ ಮಕ್ಕಳು ಮನೆಯಲ್ಲಿ ಇಲ್ಲದೇ ಇರುವುದರಿಂದ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಪೋಟದ ತೀವ್ರತೆಯಿಂದಾಗಿ ಇಡೀ ಮನೆಯ ಗೋಡೆಗಳು ಬಿರುಕುಕೊಂಡಿವೆ ಮತ್ತು ಕೆಲವು ಗೋಡೆಗಳು ಅರ್ಧ ಭಾಗ ಬಿದ್ದಿರುತ್ತವೆ.ಸ್ಪೋಟದಿಂದಾಗಿ ಮನೆಯಲ್ಲಿದ್ದ 3.80 ಲಕ್ಷ ನಗದು ಹಣ ಮತ್ತು ಪ್ರಮುಖ ದಾಖಲೆ ಪತ್ರಗಳು ಸುಟ್ಟು ಕರಕ

ಲಾಗಿದ್ದು ಒಟ್ಟು ಐದು ಲಕ್ಷದಷ್ಟು ನಷ್ಟವಾಗಿದೆ ಎಂದು ಮನೆಯ ಮಾಲೀಕ ರವಿ ಕೋಳೂರ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಡಾ.ವಿನಯಾ ಹೂಗಾರ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಸ್ಥಳೀಯ ಠಾಣಾ ಪಿಎಸ್ಐ ಜ್ಯೋತಿ ಖೋತ್ ಅವರು ಸಿಬ್ಬಂದಿಯೊಂದಿಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *