ಮಸ್ಕಿ : ಭ್ರಮರಾಂಭ ಮಲ್ಲಿಕಾರ್ಜುನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೆಲವೇ ತಿಂಗಳುಗಳಲ್ಲಿ ಆರ್ಥಿಕಸ್ಥಿತಿ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದ್ದು, ಇದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೊಳಿಸಲು ನೂತನ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಆರ್.ಬಸನಗೌಡ ತುರವಿಹಾಳ ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆದ ಎಪಿಎಂಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ನಿರ್ದೇಶಕರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಎಪಿಎಂಸಿ ವ್ಯಾಪ್ತಿಯಲ್ಲಿ ಮಸ್ಕಿ, ಸಿಂಧನೂರು ಮತ್ತು ಲಿಂಗಸುಗೂರು ತಾಲೂಕುಗಳಿವೆ. ೩ ತಾಲೂಕಿನ ರೈತರ ಕಷ್ಟ-ನಷ್ಟಗಳಿಗೆ ಸಮಿತಿ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮತ್ತು ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಲು ಅವಕಾಶ ಮಾಡಿಕೊಡಬೇಕು. ದಲ್ಲಾಳಿಗಳಿಂದ ರೈತರಿಗೆ ಯಾವುದೇ ರೀತಿಯಲ್ಲೂ ನಷ್ಟವಾಗದಂತೆ ಎಚ್ಚರವಹಿಸಬೇಕು. ಹರಾಜು, ಮಾರಾಟ, ಹಣ ಸಂದಾಯ ಸೇರಿದಂತೆ ಪ್ರತಿ ಪ್ರಕ್ರಿಯೆಯೂ ಪಾರದರ್ಶಕವಾಗಿ ನಡೆಯಬೇಕು. ಯಾವ ರೈತರೂ ಮೋಸಕ್ಕೊಳಗಾಗದ ರೀತಿಯಲ್ಲಿ ಸಮಿತಿ ನಿಗಾವಹಿಸಿ ಕಾರ್ಯೋನ್ಮುಖವಾಗಬೇಕು ಎಂದರು.
ತಾಲೂಕು ಕೇಂದ್ರವಾಗಿದ್ದರೂ ಪೂರ್ಣ ಪ್ರಮಾಣದ ಕಚೇರಿಗಳು ಆರಂಭವಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸರಕಾರಿ ಕಚೇರಿಗಳು ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾನೊಬ್ಬ ರೈತನ ಮಗನಾಗಿ ರೈತರ ಪರವಾಗಿರುವ ಕೆಲಸ ಮಾಡಲು ಪ್ರಮಾಣಿಕ ವಾಗಿಶ್ರಮಿಸುವೆ. ಸರ್ಕಾರ ರೈತರಿಗೆ ಹಲವಾರು ಯೋಜನೆಗಳು ಜಾರಿಗೆ ತಂದಿದೆ ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸೇರಿದಂತೆ ಎಲ್ಲ ಚುನಾವಣೆಗಳನ್ನು ಗೆಲ್ಲಲ್ಲು ಶ್ರಮಿಸಬೇಕೆಂದು ಹೇಳಿದರು.
ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಕಾರ್ಯಕ್ರಮದಲ್ಲಿ ಮಾತನಾಡಿ ನೂತನ ಸಮಿತಿ ವ್ಯಾಪ್ತಿಗೆ ಒಳಪಡುವ ಎಲ್ಲ ತಾಲೂಕುಗಳ ರೈತರ ಹಿತ ಕಾಪಾಡುವುದು ಮೊದಲ ಆದ್ಯತೆಯಾಗಬೇಕು. ರೈತರ ಬೆಳೆಗಳಿಗೆ ಉತ್ತಮ ದರ ಸಿಗುವಂತೆ ಮಾರುಕಟ್ಟೆ ಸಮನ್ವಯತೆ ಕಾಪಾಡಲು ಪ್ರಾಧಾನ್ಯತೆ ನೀಡಬೇಕು. ಕೃಷಿಕರು ಮತ್ತು ಮಾರುಕಟ್ಟೆ ಕುರಿತ ಸಮಗ್ರ ಮಾಹಿತಿ ಮತ್ತು ಸಂಪರ್ಕ ಇರುವುದರಿಂದ ಸಮಿತಿಯನ್ನು ಮತ್ತಷ್ಟು ಸದೃಢವಾಗಿ ಕಟ್ಟಲು ಶ್ರಮಿಸಲಾಗುವುದು. ಎಲ್ಲ ಪದಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಹಭಾಗಿತ್ವದಲ್ಲಿ ಕೃಷಿಕ ಸ್ನೇಹಿ ಎಪಿಎಂಸಿಯಾಗಿ ಎಪಿಎಂಸಿಯನ್ನು ಅಭಿವೃದ್ಧಿ ಪಡಿಸಬೇಕೆಂದರು.
ಪದಗ್ರಹಣ: ಎಪಿಎಂಸಿಯ ನೂತನ ಅಧ್ಯಕ್ಷರಾಗಿ ಸಿದ್ದನಗೌಡ ಮಾಟೂರು, ಉಪಾಧ್ಯಕ್ಷರಾಗಿ ನಿಂಗಯ್ಯ ಮಲ್ಲದಗುಡ್ಡ, ನಿರ್ದೇಶಕರಾಗಿ ಪಂಪಣ್ಣ ಮಟ್ಟೂರು, ಅಮರೇಗೌಡ ಹಾಲಾಪೂರ, ಕುಸುಮಾ ಬಲವಂತರಾಯ ವಟಗಲ್, ದುರಗಪ್ಪ ಕ್ಯಾತ್ನಟ್ಟಿ, ಮೌಲಪ್ಪ ಹಂಪನಾಳ, ಮಾನಪ್ಪ ಅಡವಿಭಾವಿ ತಾಂಡ, ಪೂರ್ಣಿಮಾ ವೀರೇಶ ಪಾಟೀಲ್, ಹಿರೇ ಮೌಲಸಾಬ ಪರಾಪೂರ, ದುರಗಪ್ಪ ಕಟ್ಟಿಮನಿ, ಹಡಗಲಿ, ಮಲ್ಲರೆಡ್ಡೆಪ್ಪ ಜಕ್ಕೆರಮಡು, ಅಮರೇಶ ಗೋನವಾರ, ಹುಲಿಗೆಮ್ಮ ಗೊಲ್ಲರಹಟ್ಟಿ, ಸಂಗಣ್ಣ ಎಲಿಗಾರ ಪದಗ್ರಹಣ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರಾವ್, ಅಂದಾನಪ್ಪ ಗುಂಡಳ್ಳಿ, ಹನುಮಂತಪ್ಪ ಮುದ್ದಾಪೂರ, ಮಲ್ಲನಗೌಡ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.

ಮಸ್ಕಿ ಎಪಿಎಂಸಿ ವರ್ತಕರಿಂದ ಶಾಸಕ ಆರ್ ಬಸನಗೌಡರಿಗೆ ಸನ್ಮಾನ
ಮಸ್ಕಿ ಪಟ್ಟಣಕ್ಕೆ ಪೂರ್ಣ ಪ್ರಮಾಣದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಹಾಗೂ ನೂತನವಾಗಿ ಆಡಳಿತ ಮಂಡಳಿಯನ್ನು ರಚನೆ ಮಾಡಿರುವುದರಿಂದ ಇಲ್ಲಿನ ಎಪಿಎಂಸಿ ವರ್ತಕರ ಸಂಘದ ವತಿಯಿಂದ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್ ಬಸನಗೌಡ ತುರುವಿಹಾಳರಿಗೆ ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ವರ್ತಕರ ಸಂಘದ ಪದಾಧಿಕಾರಿಗಳು ಇದ್ದರು.

ಕೋರ್ಟ್ – ತಾಲೂಕು ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಕಚೇರಿಗಳನ್ನು ಆದಷ್ಟು ಬೇಗ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು, ಮಸ್ಕಿ ಪಟ್ಟಣವನ್ನು ಸುಂದರವನ್ನಾಗಿಸಲು ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. – ಶಾಸಕ ಆರ್ ಬಸನಗೌಡ ತುರುವಿಹಾಳ

Leave a Reply

Your email address will not be published. Required fields are marked *