ಅರಕೇರಾ :
ಶಿಕ್ಷಣ ಎಂಬುದು ಮಕ್ಕಳ ಭವಿಷ್ಯಕ್ಕೆ ಆಸ್ತಿ ಆಗಿರುವ ಹಿನ್ನಲೆಯಲ್ಲಿ ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗುಳಿಸಬೇಡಿ ಎಂದು ವಲಯ ಸಂಪನ್ಮೂಲ ಅಧಿಕಾರಿ ಬಸಯ್ಯಸಾತಲ್ ನಾಯಕ ಹೇಳಿದರು.
ಅವರು ಬಿ. ಗಣೆಕಲ್ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಿರಿಯ ಪ್ರಾಥಮಿಕ ಶಾಲೆ ಮೂಕ ನಾಯಕ ತಾಂಡ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗಂಗನಾಯಕ್ ತಾಂಡ ಶಾಲೆಯ 5ನೇ ತರಗತಿ ಮಕ್ಕಳಿಗೆ ಬೀಳ್ಕೋಡಿಗೆ ಹಾಗೂ ವಾರ್ಷಿಕೋತ್ಸವದ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಶಾಲೆ ಈ ಎರಡು ಸರಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಚೆನ್ನಾಗಿ ಕಾಣುತ್ತದೆ ಮತ್ತು ಎರಡು ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ ಮಕ್ಕಳು ಮೊರಾರ್ಜಿ ಮತ್ತು ಆದರ್ಶ ಶಾಲೆಗಳಿಗೆ ಆಯ್ಕೆ
ಯಾಗುವ ಮೂಲಕ ಶಾಲೆಗೆ ಕಿರ್ತಿತಂದುಕೊಟ್ಟಿದ್ದಾರೆ.
ಮೂಕ ನಾಯಕ ತಾಂಡಾದಲ್ಲಿ ಆರು ಮಕ್ಕಳಲ್ಲಿ ನಾಲ್ಕು ಮಕ್ಕಳನ್ನು ಮುರಾರ್ಜಿಗೆ ಆಯ್ಕೆಯಾಗಿರುತ್ತಾರೆ ಮತ್ತು ಗಂಗನಾಯಕ್ ತಾಂಡಾ 10 ಮಕ್ಕಳಲ್ಲಿ ಆರು ಮಕ್ಕಳು ಮೊರಾರ್ಜಿ ಮತ್ತು ಆದರ್ಶ ಆಯ್ಕೆಯಾಗಿದ್ದಾರೆ ಆಯ್ಕೆಯಾಗಿದ್ದಾರೆ.
ಪಾಲಕರಲ್ಲಿ ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸಬೇಡಿ ತಾವು ಶಾಲೆಗೆ ಮಕ್ಕಳನ್ನು ಕಳಿಸಿಕೊಡಲು ಪಾಲಕರಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳು ಸದ್ದಾಮ್ ಹುಸೇನ್ ಶಿಕ್ಷಕರಾದ ಹನುಮಂತರಾಯ.ಮಂಜುನಾಥ ನಾಯಕ ಕ್ಯಾದಿಗ್ಗೇರಾ. ಬಸವರಾಜ ಕೆ ಕ್ಯಾದಿಗ್ಗೇರಾ. ರವಿ ನಾಯಕ್ ಜೆಡಿಎಸ್ ಮುಖಂಡರು ಗಂಗನಾಯ್ಕ ತಾಂಡಾ ಮಾನಪ್ಪ ಮೂಕ ನಾಯ್ಕ ತಾಂಡ ತಿರುಪತಿ ವಾಚನ ನಾಯ್ಕತಾಂಡ ಊರಿನ ಹಿರಿಯರು ಪಾಲಕರು ಮೌನೇಶ ಮತ್ತು ಶಿವಕುಮಾರ್ ಬೇರೆ ಅತಿಥಿ ಶಿಕ್ಷಕರು ಮತ್ತು ಬೂದಾನಿಗಳು ಮತ್ತು ಅಡಿಗೆ ಸಹಾಯಕರು ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಕಾರ್ಯಕ್ರಮ ನಿರೂಪಣೆ ನರಸಪ್ಪ ಅತಿಥಿ ಶಿಕ್ಷಕರು ಕೊನೆಯಲ್ಲಿ ರಾಜು ವಂದಸಿದರು.

