ತಾಳಿಕೋಟಿ: ಪಟ್ಟಣದ ಆರಾಧ್ಯ ದೇವರಾದ ಶ್ರೀ ಬಂಡಿ ಬಸವೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಥೋತ್ಸವ ಭಕ್ತಿ ಶ್ರದ್ಧೆ ಸಂಭ್ರಮಗಳಿಂದ ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತು. ಪಟ್ಟಣದ ಬಾಪುಗೌಡ ಸಂಗನಗೌಡ ಪಾಟೀಲ ಗೌಡಕಿ ಮನೆತನಕ್ಕೆ ಸೇರಿದ 216 ವರ್ಷಗಳ ಪುರಾತನ ದೇವಸ್ಥಾನವಾದ ಶ್ರೀ ಬಂಡಿ ಬಸವೇಶ್ವರರ ನೂತನ ರಥವನ್ನು ನಿರ್ಮಿಸಲಾಗಿತ್ತು, ಇದನ್ನು ವೇದಮೂರ್ತಿ ಮುರುಗೇಶ ವಿರಕ್ತಮಠ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ರಥಕ್ಕೆ ಪುಷ್ಪಾರ್ಚನೆ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಾದ ಬಿಎಸ್ ಪಾಟೀಲ ಯಾಳಗಿ, ಎಚ್ ಎಸ್ ಪಾಟೀಲ, ಸಿದ್ದನಗೌಡ ಪಾಟೀಲ ನಾವದಗಿ,ಮಡು ಸೌಕಾರ, ಕಾಶಿನಾಥ ಮುರಾಳ, ಡಿ ವಿ ಪಾಟೀಲ, ಶರಣಗೌಡ ಪಾಟೀಲ, ಅಶೋಕಗೌಡ ಪಾಟೀಲ, ರಾಜುಗೌಡ ಪಾಟೀಲ, ಪರುಶುರಾಮ ತಂಗಡಗಿ
ಮತ್ತಿತರರು ಇದ್ದರು. ಶನಿವಾರ ರಥೋತ್ಸವದ ಅಂಗವಾಗಿ ಪುರವಂತರ ಮೆರವಣಿಗೆಯೊಂದಿಗೆ ಬೆಳಗಿನ ಜಾವ 6:00 ಘಂಟೆಗೆ ಅಗಿ ತುಳಿಯುವ ಕಾರ್ಯಕ್ರಮ ನಡೆಯಿತು ನಂತರ 9:00 ಗಂಟೆಗೆ ಗಂಗಸ್ಥಳ ಕಾರ್ಯಕ್ರಮ ವಿವಿಧ ವಾದ್ಯ ಮೇಳ ವೈಭವಗಳೊಂದಿಗೆ ಜರುಗಿತು. ಬೆಳಗ್ಗೆಯಿಂದಲೇ ನೂರಾರು ಭಕ್ತಾದಿಗಳು ಶ್ರೀ ಬಂಡಿ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ನೈವೇದ್ಯ ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಭಾವ ಮೆರೆದರು. ಬಾಪುಗೌಡ ಸಂಗನಗೌಡ ಪಾಟೀಲ ಸಹೋದರರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 10 ದಿನಗಳಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭವ್ಯ ರಥೋತ್ಸವದೊಂದಿಗೆ ಸಂಪನ್ನಗೊಂಡವು.

Leave a Reply

Your email address will not be published. Required fields are marked *