ಲಿಂಗಸಗೂರು.ಮಾ. 29 ಬಸವಸಾಗರ ಜಲಾಶಯದಿಂದ ಬಲದಂಡೆ ಮತ್ತು ರಾಂಪೂರ ಏತ ನೀರಾವರಿ ಯೋಜನೆಯ ನಾಲೆಗಳಿಗೆ ಏಪ್ರಿಲ್ 20 ರವರೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘ (ವಾಸುದೇವ ಮೇಟಿ ) ಬಣದ ಮುಖಂಡರು ಕೆಬಿಜೆಎನ್‌ಎಲ್ ಕಾರ್ಯನಿರ್ವಾಹ ಅಭಿಯಂತರ ಸುರೇಂದ್ರ ರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಆಲಮಟ್ಟಿಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಏ.3 ರವರೆಗೆ ನೀರು ಹರಿಸುವ ನಿರ್ಧಾರ ಕೈಗೊಂಡಿರುವುದು ಅವೈಜ್ಞಾನಿಕವಾಗಿದೆ.
ಇದರಿಂದ ಹಿಂಗಾರಿ ಹಂಗಾಮಿನಲ್ಲಿ ರೈತರು ಬೆಳೆದ ಬೆಳೆಗಳು ಹಾಳಾಗುವ ಸಾಧ್ಯತೆಗಳಿವೆ. ನಾಲೆಯ ಕೊನೆಯ ಭಾಗದ ರೈತರು ತೀವ್ರ ತೊಂದರೆ ಅನುಭವಿಸಲಿದ್ದಾರೆ . ಏ.20 ರವರೆಗೆ ನೀರು ಹರಿಸುವ ಮೂಲಕ ರೈತರ ಬೇಳೆ ರಕ್ಷಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಸಂಗನಗೌಡ ಹೊಸೂರು, ಮುಖಂಡರಾದ ಬಸನಗೌಡ, ಸಹದೇವಪ್ಪ ಈಚನಾಳ, ಸಗರಪ್ಪ ಮೇಟಿ, ಶರಣಗೌಡ, ದುರುಗಪ್ಪ ಗುರಿಕಾರ, ಪ್ರದೀಪ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *