ಸಿಂಧನೂರು ನಗರದ ಬ್ರಾಹ್ಮಣರ ಓಣಿಯಲ್ಲಿರುವ ಪ್ರಸಿದ್ಧ ಹಾಗೂ ಪುರಾತನ ಶ್ರೀರಾಮ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಸೇವಾ ಟ್ರಸ್ಟ್ ನಿಂದ  ಶ್ರೀರಾಮ ನವಮಿ ಪ್ರಯುಕ್ತ ಶುಕ್ರವಾರದಂದು ಶ್ರೀರಾಮ ದೇವರ ರಥೋತ್ಸವವು ಅದ್ದೂರಿಯಾಗಿ ಜರುಗಿತು. ರಥೋತ್ಸವಕ್ಕೆ ಶಾಸಕರಾದ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು.

ಬೆಳಿಗ್ಗೆ 5 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾದವು. ತುಳಸಿ ಅರ್ಚನೆ, ಶ್ರೀಸೀತಾರಾಮ ಕಲ್ಯಾಣೋತ್ಸವ, ರಥೋತ್ಸವ, ಸೇವಾಕರ್ತರಿಗೆ ಸನ್ಮಾನ, ಪ್ರವಚನ, ಶ್ರೀರಾಮನ ಮಹಿಮೆ ನಾಟಕ ಪ್ರದರ್ಶನ ನಡೆದವು. ಶ್ರೀರಾಮ ದೇವರ ಉತ್ಸವ ಮೂರ್ತಿಯ ರಥೋತ್ಸವಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು. ನಂತರ ರಥೋತ್ಸವವು ಬ್ರಾಹ್ಮಣ ಬೀದಿಯಲ್ಲಿ ಮಹಿಳೆಯರ ಕೋಲಾಟ, ಪುರುಷರ ಭಜನೆ, ಮಕ್ಕಳ ನೃತ್ಯ, ಭಕ್ತಾಧಿಗಳು ಹಣ್ಣು, ಹೂ-ಕಾಯಿ, ಪಾನಕ, ಕೋಸಂಬರಿಯನ್ನು ಶ್ರೀರಾಮ ದೇವರಿಗೆ ಸಮರ್ಪಿಸಿ, ನಂತರ ಸಕಲ ಭಕ್ತಾಧಿಗಳಿಗೆ ನೀಡಿದರು.

ಈ ಸಂದರ್ಭದಲ್ಲಿ: ರಾಮಕೃಷ್ಣಾಚಾರ್ ಗೋನವಾರ, ನರಸಿಂಹಾಚಾರ್ ಮಠಾಧಿಕಾರ್, ಗೋವಿಂದರಾವ್ ಕುಲಕರ್ಣಿ, ಎಂ.ಕೆ.ಗೌರಕರ್, ಸುಬ್ಬಾಶಾಸ್ತ್ರೀ, ವೆಂಕಟೇಶಚಾರ್ ಕೆಂಗಲ್, ಹನುಮೇಶಾಚಾರ್ ಬಾದರ್ಲಿ, ನಾಗೇಂದ್ರ ಸಾಹುಕಾರ, ವೆಂಕಟೇಶ, ಬಸವರಾಜ ನಾಡಗೌಡ್ರು, ರಾಜು ಬಂಡಿ ವಕೀಲ್, ಮತ್ತು ಅಪಾರ ಭಕ್ತ ಸಮೂಹ ಪಾಲ್ಗೊಂಡಿದ್ದರು.

ನಗರದ ಛತ್ರಪತಿ ಶಿವಾಜಿ ಮಹಾರಾಜ ಸೇವಾ ಟ್ರಸ್ಟ್ ವತಿಯಿಂದ ನಗರದ ಗುರುಪ್ರಸಾದ ಹೊಟೇಲ್ ಹತ್ತಿರ ಶ್ರೀರಾಮ ನವಮಿಯ ನಿಮಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ ಬಂಗಾರಿ ಕ್ಯಾಂಪಿನ ಸದಾನಂದ ಶರಣರು ಚಾಲನೆ ನೀಡಿ ರಾಮನ ಗುಣಗಳನ್ನು ಪ್ರತಿಯೊಬ್ಬರು ಕೂಡ ಅಳವಡಿಸಿಕೊಳ್ಳಲು ಕರೆ ನೀಡಿದರು.

ಈ ಕಾಯಕ್ರಮದಲ್ಲಿ ಶ್ರೀರಾಮ ಭಕ್ತರಿಗೆ ಪಾನಕ, ಮಜ್ಜಿಗೆ, ಲಘು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ: ಬಿಜೆಪಿ ಮುಖಂಡ ಕೆ.ಕರಿಯಪ್ಪ ಹಾಗೂ ಟ್ರಸ್ಟ್ ಮುಖ್ಯಸ್ಥ ವಿಶ್ವನಾಥ ಚೌಧರಿ ಮತ್ತು ಅಮರಯ್ಯಸ್ವಾಮಿ ಅಲಬನೂರು, ಸುರೇಶ ನಕ್ಕಂಟಿ, ಅಜಯ ದಾಸರಿ, ಗುರುಸ್ವಾಮಿ ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *