ಅರಕೇರಾ:
ತಾಲೂಕಿನ ಬಿ.ಗಣೇಕಲ್ ಗ್ರಾಮದ ಶ್ರೀ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆಗೆ ಉತ್ತರ ಕರ್ನಾಟಕ ಸ್ನೇಹ ಲೋಕ ಟ್ರಸ್ಟ್ (ರಿ) ಬೆಂಗಳೂರು ವತಿಯಿಂದ 200 ಲೀಟರ್ ಸಾಮರ್ಥ್ಯವುಳ್ಳ ಕುಡಿಯುವ ನೀರಿನ ಸ್ಟೀಲ್ ಟ್ಯಾಂಕನ್ನು ಶಾಲೆಗೆ ದೇಣಿಗೆ ನೀಡಿದರು.

ಯುಕೆಎಸ್ ಎಲ್ ಟ್ರಸ್ಟ್ ನ ಕಾರ್ಯದರ್ಶಿಯಾದ ಪ್ರಕಾಶ ರಾಜಗೋಳಿ ರವರು ಇಂತಹ ಹಿಂದುಳಿದ ಪ್ರದೇಶದಲ್ಲಿ 20 ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಮಹತ್ವದ ಕಾರ್ಯವಾಗಿದ್ದು ಗ್ರಾಮೀಣ ಭಾಗದಲ್ಲಿ ಶಿಕ್ಷಣ ನೀಡುವುದು ಬಹಳ ಕಷ್ಟಕರ ಆದರೆ ಒಬ್ಬ ರೈತ ಅನಕ್ಷರಸ್ಥರಾದ ಹಂಪಣ್ಣ ಪಲ್ಲೇದ್ ಅವರು ತಮ್ಮ ಜೀವನವನ್ನು ಶಿಕ್ಷಣಕ್ಕಾಗಿ ಮುಡಿಪು ಇಟ್ಟಿದ್ದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಯುಕೆಎಸ್ಎಲ್ ಟ್ರಸ್ಟಿಗಳಾದ ದೀಪಕ್ ಆಲೂರ್ ರವರು ಮಕ್ಕಳಿಗೆ ನೋಟ್ ಬುಕ್ ಗಳು, ಪೆನ್ನು, ಪೆನ್ಸಿಲ್ ಗಳು ಹಾಗೂ ಸುಮಾರು ಹತ್ತು ಪುರಾಣ ಪುಸ್ತಕಗಳನ್ನು ತಮ್ಮ ವೈಯಕ್ತಿಕವಾಗಿ ಶಾಲೆಗೆ ಕೊಡುಗೆಯನ್ನು ನೀಡಿದರು
ನಂತರ ಶಾಲೆಯ ಅಧ್ಯಕ್ಷರಾದ ಹಂಪಣ್ಣ ಪಲ್ಲೇದ್ ರವರು ಹರ್ಷ ವ್ಯಕ್ತಪಡಿಸಿದ.

ಈ ಸಂದರ್ಭದಲ್ಲಿ ಯುಕೆಎಸ್ಎಲ್ ಟ್ರಸ್ಟ್ ನ ಪಧಾಧಿಕಾರಿಗಳಾದ ಮಹಾಂತೇಶ ವೀರಾಪುರ, ಸಂಜೀವ್ ಪಟ್ಟಾರಿ, ಶರಣು ಪಲ್ಲೇದ್, ಸ್ಥಳಿಯರಾದ ಅಯ್ಯಣ್ಣ ಕಟ್ಟಿಮನಿ, ಎಚ್.ಎಸ್.ನಾಯಕ ಮುಂತಾದವರು ಇದ್ದರು.

Leave a Reply

Your email address will not be published. Required fields are marked *