ಮಸ್ಕಿ: ತಾಲೂಕಿನ ಸಂತೆಕೆಲ್ಲೂರು ಗ್ರಾಮದವರಾದ ಶರಣಪ್ಪ ಅವರು ಇದೇ ಮೊದಲ ಬಾರಿಗೆ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಯಾವ ಮೋಹನ ಮುರಳಿ ಕರೆಯಿತು ಎಂಬ ಚಿತ್ರವೂ ಯಶಸ್ವಿ ಕಾಣಲಿ, ಜತೆಗೆ ಶರಣಪ್ಪರಿಗೆ ಸಿನಿ ಪ್ರಾಯಣದಲ್ಲಿ ಯಶಸ್ಸು ನಿರಂತರವಾಗಿ ಇರಲಿ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನಕಾರ್ಯದರ್ಶಿ ಆರ್.ಸಿದ್ದನಗೌಡ ತುರವಿಹಾಳ ಶುಭ ಹಾರೈಸಿದರು.
ಪಟ್ಟಣದ ಶರಣಬಸವೇಶ್ವರ ಚಿತ್ರಮಂದಿರಲ್ಲಿ ಶುಕ್ರವಾರ ಚಿತ್ರವನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರ ಯಾವ ಮೋಹನ ಮುರಳಿ ಕರೆಯಿತು ಎಂಬ ಚಿತ್ರವೂ ಒಂದು ಭಾವನಾತ್ಮಕ ಕಥೆಯ ಜೆತೆಗೆ ಸಸ್ಪೆನ್ಸ್ ಸ್ಟೋರಿಯೂ ಚಿತ್ರದಲ್ಲಿದೆ. ಶ್ವಾನ ಮತ್ತು ಬಾಲಕಿಯ ನಡುವಿನ ಮಧುರ ಬಾಂಧವ್ಯ ಚಿತ್ರದ ಉದ್ದಕ್ಕೂ ಸಾಗಲಿದ್ದು, ರಾಣಾ ಹಾಗೂ ರಾಕಿ ಎಂಬ ಶ್ವಾನ ಚಿತ್ರದ ಕೇಂದ್ರ ಬಿಂದುವಾಗಿದೆ. ಈ ಸಿನೆಮಾದಲ್ಲಿ ಒಂದು ಸುಂದರ ಕಥೆ ಇದೆ. ಅದು ಎಮೋಷನಲ್ ಆಗಿ ಮನಸ್ಸನ್ನು ಸೆಳೆಯುತ್ತದೆ. ಈ ಸಿನೆಮಾ ಪ್ರಾಣಿ ಪ್ರಿಯರಿಗೆ ಬೇಗ ಇಷ್ಟವಾಗುತ್ತದೆ. ಇದೊಂದು ಕುಟುಂಬ ಸಮೇತರಾಗಿ ನೋಡುವಂತಹ ಚಿತ್ರ. ಈ ಸಿನೆಮಾದಲ್ಲಿ ಎಲ್ಲ ನಟರು ಅಧ್ಬುತ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಎಲ್ಲಾರಿಗೂ ಅಭಿನಂದೆನಗಳು. ಶರಣಪ್ಪ ಅವರು ಮುಂದಿನ ದಿನಗಳಲ್ಲಿ ಇನ್ನೂ ಅದ್ಭುತ ಸಿನೆಮಾಗಳನ್ನು ನೀಡಲಿ. ಸಾಮಾಜಿಕ ಏಕತೆ ಮತ್ತು ಹೆಚ್ಚು ಸಮಾನತೆಯುಳ್ಳ ಸಿನಿಮಾಗಳನ್ನು ನಿರ್ಮಿಸುವತ್ತ ಅವರ ಪ್ರಯಾಣದಲ್ಲಿ ಯಶಸ್ಸು ನಿರಂತರವಾಗಿ ಇರಲಿ ಅಂತ ಹಾರೈಸುತ್ತೇನೆ ಅಂತ ತಿಳಿಸಿದರು.
ಈ ಸಂದರ್ಭದಲ್ಲಿ ಯಾವ ಮೋಹನ ಮುರಳಿ ಕರೆಯಿತು ಚಿತ್ರ ಅಂಡದೊಂದಿಗೆ , ಅಂದಾನಪ್ಪ ಗುಂಡಳ್ಳಿ, ಹೆಚ್.ಬಿ.ಮುರಾರಿ, ಹನುಮಂತಪ್ಪ ಮುದ್ದಾಪೂರು, ಮೈಬುಸಾಬ ಮುದ್ದಾಪೂರು, ಬಾಲಸ್ವಾಮಿ ಜಿನ್ನಾಪೂರ, ಅಶೋಕ ಮುರಾರಿ, ವಿಜಯಕುಮಾರ ಹೂವಿನಭಾವಿ, ಪೌಲರಾಜ ಯದ್ದಲದಿನ್ನಿ, ಮರಿಸ್ವಾಮಿ ಬೆನಕನಾಳ, ಸೇರಿದಂತೆ ಇನ್ನಿತರೆ ಸಿನೆಮಾಭಿಮಾನಿಗಳಿದ್ದರು

