ಅರಕೇರಾ : ತಾಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಅತಿಕ್ರಮಣ ಮಾಡಿರುವ ಸರ್ಕಾರಿ ಗಾಯರಾಣು ಭೂಮಿಯನ್ನು ತೆರವುಗೊಳಿಸಿ ಗ್ರಾಮದ ಅಭಿವೃದ್ಧಿಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ತಹಸೀಲ್ ಕಚೇರಿ ಮುಂದೆ ಗ್ರಾಮದ ಪ್ರಮುಖರು ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಅಮರೇಶ ಬಿರಾದರ್‌ಗೆ ಶುಕ್ರವಾರ ಮನವಿ ಸಲ್ಲಿಸಿ, ಸುಮಾರು 50 ಎಕರೆ ಸರ್ಕಾರಿ ಗಾಯರಾಣು ಭೂಮಿ ಅಕ್ರಮವಾಗಿ ಕೆಲವು ಖಾಸಗಿ ವ್ಯಕ್ತಿಗಳಿಂದ ಅತಿಕ್ರಮಣಗೊಂಡಿದೆ. ಈ ಭೂಮಿಯನ್ನು ಅತಿಕ್ರಮಿಸಿಕೊಂಡಿರುವವರು ನಿರ್ಗತಿಕರು ಅಥವಾ ಭೂಹೀನರು ಅಲ್ಲ. ಇವರು ಆರ್ಥಿಕವಾಗಿ ಸ್ಥಿತಿವಂತರಾಗಿದ್ದು, ಈಗಾಗಲೇ ಸಾಕಷ್ಟು ಭೂಮಿ ಹಾಗೂ ಸ್ವಂತ ಮನೆಗಳನ್ನು ಹೊಂದಿದ್ದಾರೆ. ಆದರೂ, ಸರ್ಕಾರಿ ಭೂಮಿಯನ್ನು ಕಬಳಿಸಿಕೊಂಡು, ಸಾರ್ವಜನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಗ್ರಾಮಸ್ಥರು ಈ ಅಕ್ರಮವನ್ನು ಪ್ರಶ್ನಿಸಿದಾಗ, ಅತಿಕ್ರಮಣಕಾರರು ಬೆದರಿಕೆ ಹಾಕುವುದು. ಯಾರಿಗೆ ಬೇಕಾದರೂ ದೂರು ನೀಡಿ, ನಮಗೆ ಯಾವುದಕ್ಕೂ ಭಯವಿಲ್ಲ ಎಂಬ ರೀತಿಯಲ್ಲಿ ಅಹಂಕಾರ ತೋರಿಸುವುದು ನಡೆಯುತ್ತಿದೆ. ಇದೇ ವಿಚಾರವಾಗಿ ನಾವು ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇಂದಿನವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಬೇಸರ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ನಿರ್ಮಾಣವಾಗಬೇಕಿದ್ದ ಶಾಲಾ ಕಟ್ಟಡ, ಮಕ್ಕಳಿಗಾಗಿ ಆಟದ ಮೈದಾನ, ಸಾರ್ವಜನಿಕ ಉಪಯೋಗಕ್ಕಾಗಿ ರುದ್ರಭೂಮಿ, ಪಶುಗಳಿಗೆ ಅಗತ್ಯವಾದ ಗೋಮಾಳ ಭೂಮಿ, ಅಂಗನವಾಡಿ ಕೇಂದ್ರ, ಬಸ್ ನಿಲ್ದಾಣ ಸೇರಿದಂತೆ ಅನೇಕ ಸರ್ಕಾರಿ ಯೋಜನೆಗಳು ಅತಿಕ್ರಮಣದ ಕಾರಣದಿಂದ ನಿಂತು ಹೋಗಿವೆ. ಮಾನ್ಯ ದಯಾಳುಗಳಾದ ತಾವುಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅತಿಕ್ರಮಣಗೊಂಡಿರುವ ಸರ್ಕಾರಿ ಗಾಯರಾಣು ಭೂಮಿಯನ್ನು ತಕ್ಷಣ ಸರ್ವೇ ನಡೆಸಿ ಗುರುತಿಸಬೇಕು. ಅತಿಕ್ರಮಣಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅತಿಕ್ರಮಣವನ್ನು ತುರ್ತು ಆಧಾರದ ಮೇಲೆ ತೆರವುಗೊಳಿಸಬೇಕು. ಗ್ರಾಮದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ರಂಗಯ್ಯ ಮಾಲಿಗೌಡ, ಅಂಜಿನಯ್ಯ ಕಟ್ಟಿಮನಿ, ರವಿಚಂದ್ರ ನಾಯಕ, ಚಂದ್ರಶೇಖರ ನಾಯಕ, ಶಶಿಕುಮಾರ ನಾಯಕ, ಶಿವಲಿಂಗಪ್ಪ ನಾಯಕ, ರಾಮಕೃಷ್ಣ ನಾಯಕ, ಬಸವರಾಜ ಮಾಲಿಗೌಡ, ನಾಗರಾಜ ಗುತ್ತೆದಾರ, ಕನಕಪ್ಪ ನಾಯಕ, ಆಂಜಿನಯ್ಯ ನಾಯಕ, ಮೌನೇಶ ಗುತ್ತೇದಾರ, ರಂಗನಾಥ ನಾಯಕ, ಸುರೇಶ ನಾಯಕ, ನಾಗರಾಜ ಹರಿಜನ, ರಮೇಶ ನಾಯಕ, ಶಿದ್ದಲಿಂಗ ಗುತ್ತೆದಾರ, ಚಂದ್ರಶೇಖರ ಗುತ್ತೆದಾರ, ಲಚಮಣ್ಣ ಮಡಿವಾಳ, ಗೋಪಾಲ ನಾಯಕ, ಸುರೇಶ ಹೂಗಾರ, ರಾಮಸ್ವಾಮಿ ನಾಯಕ, ಹನುಮಂತ ನಾಯಕ, ಯಲ್ಲನಗೌಡ ನಾಯಕ, ರವಿ ಹರಿಜನ, ಬಿಕಪ್ಪ ನಾಯಕ, ಆಂಜಿನಯ್ಯ ನಾಯಕ, ರಮೇಶ ಗುತ್ತೆದಾರ, ಶ್ರೀಧರ ಗೊಲ್ಲರ ಇದ್ದರು.
27 ಅರಕೇರಾ 01 : ಅರಕೇರಾದಲ್ಲಿ ತಹಸೀಲ್ದಾರ್ ಅಮರೇಶ ಬೀರಾದರ್‌ಗೆ ಹಾಳ ಜಾಡಲದಿನ್ನಿ ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *