ಎಲೆಬಿಚ್ಚಾಲಿ: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (ಕ್ಯಾಂಪ್) 2025-26ನೇ ಸಾಲಿನ ನೂತನ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ರಚನಾ ಸಭೆಯು ಗುರುವಾರ ಯಶಸ್ವಿಯಾಗಿ ಜರುಗಿತು.
ಸಭೆಯಲ್ಲಿ ಒಟ್ಟು 18 ಜನ ಚುನಾಯಿತ ಪ್ರತಿನಿಧಿಗಳು, ಮೂವರು ನಾಮನಿರ್ದೇಶಿತ ಸದಸ್ಯರು ಹಾಗೂ ಮೂವರು ಪದನಿಮಿತ್ತ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅವಿರೋಧ ಆಯ್ಕೆ:
ನೂತನ ಸಮಿತಿಯ ಅಧ್ಯಕ್ಷರನ್ನಾಗಿ ಹುಲಿಗೆಪ್ಪ (ತಂದೆ ನಾಗೇಶ್) ಹಾಗೂ ಉಪಾಧ್ಯಕ್ಷರನ್ನಾಗಿ ಭೀಮರಾಯ (ತಂದೆ ಹನುಮಂತಪ್ಪ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಸದಸ್ಯರು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದರೊಂದಿಗೆ, ಶಾಲೆಯ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ನಿರ್ಗಮಿತ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಸಿ.ಆರ್.ಪಿ ಶಶಿಧರ ಕಟ್ಟಿಮನಿ, ಮುಖ್ಯ ಗುರುಗಳಾದ ಜಯಶ್ರೀ ಹಾಗೂ ಶಿಕ್ಷಕ ವೃಂದದವರು ನೂತನ ಪದಾಧಿಕಾರಿಗಳನ್ನು ಸ್ವಾಗತಿಸಿ, ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಾಬಣ್ಣ ಗಟ್ಟುಬಿಚ್ಚಾಲಿ, ಹಾಗೂ ಶಿಕ್ಷಣ ಪ್ರೇಮಿಗಳಾದ ನಾಗಪ್ಪ, ಭೀಮ, ಬಜಾರಪ್ಪ, ತಾಯಮ್ಮ, ಚಂದ್ರಮ್ಮ, ನರಸಮ್ಮ, ಶ್ವೇತಮ್ಮ, ಸುಜಾತ, ಮಹಾದೇವ, ರಾಮು, ಯೇಸುರಾಜ, ನರಸಿಂಹ, ಭೀಮೇಶ, ಕಂಬಯ್ಯ, ವಿಜಯಲಕ್ಷ್ಮಿ, ಸುಜಾತ ಎಸ್, ದಾದೆಮ್ಮ, ರಾಮಲಿಂಗಮ್ಮ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಪಾಲಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

