ರಾಯಚೂರು: ಕಲ್ಯಾಣ ಕರ್ನಾಟಕದ ಜನತೆಯ ಬಹುದಿನದ ಕನಸು ನನಸಾಗಿದೆ. ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ: 16563 / 16564) ಇನ್ನೂ ಮುಂದೆ ನಿಯಮಿತವಾಗಿ ಸಂಚರಿಸಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 16563 ನಂಬರಿನ ಬೆಂಗಳೂರು ಕಂಟೋನ್ಮೆಂಟ್- ಕಲಬುರಗಿ ಎಕ್ಸಪ್ರೆಸ್ ರೈಲು ಬೆಂಗಳೂರು ಕಂಟೋನ್ಮೆಂಟ್ ನಿಂದ ಶನಿವಾರ ರಾತ್ರಿ 10 ಕ್ಕೆ ಹೊರಟು ಹೊರಟು ರಾತ್ರಿ 3ರಿಂದ 3-05 ಕ್ಕೆ ಧರ್ಮಾವರಂ, ಬೆಳಿಗ್ಗೆ 9.25 ರಿಂದ 9.30 ರ ವೇಳೆಗೆ ವಾಡಿ ಮೂಲಕ ಭಾನುವಾರ ಬೆಳಿಗ್ಗೆ 10.20ಕ್ಕೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.
16564 ಸಂಖ್ಯೆಯ ಕಲಬುರಗಿ → ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್ ರೈಲು ಭಾನುವಾರ ರಾತ್ರಿ 11.20ಕ್ಕೆ ಹೊರಟು ವಾಡಿಗೆ 11:55 / 12:00, ಧರ್ಮವರಂ: 19:30 / 19:35 ಮೂಲಕ ಹಾಯ್ದು ಬೆಂಗಳೂರು ಕಂಟೋನ್ಮೆಂಟ್ ನ್ನು ಬೆಳಿಗ್ಗೆ 11 ಗಂಟೆಗೆ ತಲುಪಲಿದೆ. ಯಲಹಂಕ, ಹಿಂದೂಪೂರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ, ಶಹಬಾದ್ ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ . ವಾರಕ್ಕೆ ಒಮ್ಮೆ ಬೆಂಗಳೂರುದಿಂದ: ಶನಿವಾರ ಕಲಬುರಗಿಯಿಂದ: ಭಾನುವಾರ ಈ ರೈಲು ನಿಯಮಿತವಾಗಿ ಸಂಚರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ ಎಸ್.ಎಂ.ವಿ ಟಿ ಬೆಂಗಳೂರು- ಬೀದರ್ ವಿಶೇಷ ರೈಲು ಈಗ ನಿಯಮಿತವಾಗಿ ಸಂಚರಿಸಲಿದ್ದು,
ಎಸ್.ಎಂ.ವಿ ಟಿ ಬೆಂಗಳೂರು- ಬೀದರ್ ವಿಶೇಷ ರೈಲು (ರೈಲು ಸಂಖ್ಯೆ: 16559 / 16560) ಬೆಂಗಳೂರಿನಿಂದ ಪ್ರತಿ ಶುಕ್ರವಾರ ಹಾಗೂ ಭಾನುವಾರ : ರಾತ್ರಿ 9.15 ಕ್ಕೆ ಹೊರಟು ಧರ್ಮವರಂ ಗೆ ರಾತ್ರಿ 12.20 ರಿಂದ 12.25 ರವರೆಗೆ ವಾಡಿಗೆ ಬೆಳಿಗ್ಗೆ 08:10 / 08:15 ನಂತರ ಬೆಳಿಗ್ಗೆ 9.10 ರಿಂದ 9.15 ಕಲಬುರಗಿ , ಮಧ್ಯಾಹ್ನ 12.15 ರ ವೇಳೆಗೆ ಬೀದರ ತಲುಪಲಿದೆ. ಹಾಗೇ ಶನಿವಾರ ಮತ್ತು ಸೋಮವಾರ
ಮಧ್ಯಾಹ್ನ 2 ಗಂಟೆಗೆ ಬೀದರಿನಿಂದ ಹೊರಡುವ ರೈಲು (ಸಂಖ್ಯೆ 16560) ಕಲಬುರಗಿಗೆ ಸಂಜೆ 5 ಗಂಟೆಗೆ, ಧರ್ಮಾವರಂಗೆ ರಾತ್ರಿ 12 ಗಂಟೆ 10 ಇಲ್ಲವೆ 15 ನಿಮಿಷಕ್ಕೆ ಬರಲಿದೆ. ಯಲಹಂಕ, ಧರ್ಮಾವರಂ, ಅನಂತಪುರ, ಗುಂತಗಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣ, ವಾಡಿ, ಶಹಾಬಾದ್, ಹುಮನಾಬಾದ್ ರೈಲುನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ವಾರಕ್ಕೆ ಎರಡು ಬಾರಿ ಬೆಂಗಳೂರುದಿಂದ: ಶುಕ್ರವಾರ & ಭಾನುವಾರ ಬೀದರ್ನಿಂದ ಶನಿವಾರ & ಸೋಮವಾರ ಈ ರೈಲು ಸಂಚರಿಸಲಿದೆ ಎಂದು ತಿಳಿಸಿದ್ದಾರೆ. ಈ ರೈಲು ಸಂಚಾರಕ್ಕೆ ಎರಡು ದಶಕಗಳಿಂದ ಈ ಭಾಗದ ಜನರ ಬೇಡಿಕೆಯಾಗಿತ್ತು. ಜನರ ಬೇಡಿಕೆಯಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣನವರ ಗಮನಕ್ಕೆ ತಂದು ಜನರ ಪರವಾಗಿ ಮನವಿ ಮಾಡಿಕೊಳ್ಳಲಾಗಿತ್ತು. ನಮ್ಮ ಮನವಿಗೆ ಹಾಗೂ ಜನರ ಆಶೋತ್ತರಕ್ಕೆ ಸ್ಪಂದಿಸಿರುವ ವಿ.ಸೋಮಣ್ಣನವರು ಅಭಿನಂದನಾರ್ಹರು ಎಂದು ಹೇಳಿದರು.

