ದೇವದುರ್ಗ : ಮಾ 24 ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಗೆ ಅಭ್ಯರ್ಥಿಗಳು ಇಂದು ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ಪ್ರಾರಂಭಿಸಿದರು.

ಇಂದು ಬೆಳಿಗ್ಗೆ ದೇವದುರ್ಗ ತಾಲೂಕಿನ ವಿರುಗೋಟ್ ಗ್ರಾಮದ ಶ್ರೀ ಅಡಿವಿ ಲಿಂಗ ಮಹಾರಾಜರವರ ಶ್ರೀ ಮೌನೇಶ್ವರ ಆಸನದಲ್ಲಿ ವೀರಗುಟ್ ತಾತನವರ ಆಶೀರ್ವಾದದೊಂದಿಗೆ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಸಾಮೂಹಿಕ ನಾಯಕತ್ವದಲ್ಲಿ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದು, ಈ ಸಂದರ್ಭದಲ್ಲಿ ಅಡಿವಿ ಲಿಂಗ ಮಹಾರಾಜರು ಮಾತನಾಡಿ, ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಇರಬೇಕು. ಗೆಲುವಿನ ಬಳಿಕ ಬಡವರು ಮತ್ತು ರೈತರ ಸೇವೆಗೆ ಆದ್ಯತೆ ನೀಡಬೇಕು ಎಂದು ಹಿತವಚನ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸರ್ಕಾರದಿಂದ ರೈತರ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವುದರಿಂದ, ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಹಾಗೂ ರೈತರಿಗೆ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಮುಖಂಡರಾದ ಅಮರೇಗೌಡ ಕಮಲದಿನ್ನಿ, ಭೀಮಣ್ಣ ಗುಮ್ಮದಾರ್, ರಂಗಣ್ಣ ಕೋಲ್ಕಾರ್, ರಂಗಪ್ಪ ತೊಗರಿ, ಹನುಮಂತ ಮಡಿವಾಳ, ಗಿರಿಯಪ್ಪ ಪೂಜಾರಿ, ಡಾ. ಬಸವರಾಜ್ ಚಿಂಚೋಳಿ, ಅಯ್ಯಪ್ಪ (ಬಂಕಲ್ ದೊಡ್ಡಿ), ಚಿದಾನಂದ, ಸಾಗರ್ ನಾಯಕ್, ಸಾಬಣ್ಣ ಪೂಜಾರಿ, ಶರಣಗೌಡ ಕಮಲದಿನ್ನಿ ಉಪಸ್ಥಿತರಿದ್ದರು.

ಪ್ರಚಾರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಾದ ಚಂದ್ರಶೇಖರ್ ನಾಡಗೌಡ, ನೂರು ಮಹಮ್ಮದ್ ಬಳಿಗಾರ, ಬಸವರಾಜ ಯಾದವ್, ವಿಜಯಕುಮಾರ್ ಹಿರೇಮಠ, ಶಿವಬಸಪ್ಪ ರಾಮ್ ಪಾಳಿ, ರಾಮಪ್ಪ, ಮೌನೇಶ್ ಹೆಚ್ ಸಿದ್ದಾಪುರ, ಭೀಮಣ್ಣ ಡೆಂಗಿ, ಬಸನಗೌಡ ಮದಿನಪೂರ್, ಶಿವಮ್ಮ ಬೀಸಲ್, ಹುಸೇನ್ ನಾಸಿ ಭಾಗವಹಿಸಿದರು.

👉 ಚುನಾವಣೆಯು ಭಾರಿ ಪೈಪೋಟಿಯಿಂದ ಕೂಡಿದ್ದು, ಗ್ರಾಮದಲ್ಲಿ ರಾಜಕೀಯ ಚಟುವಟಿಕೆಗಳು ದಿನೇ ದಿನೇ ಚುರುಕುಗೊಳ್ಳುತ್ತಿವೆ.

Leave a Reply

Your email address will not be published. Required fields are marked *