ಬೆಂಗಳೂರು: ಸಂಸ್ಕರಿಸಿದ ನೀರಿನಿಂದ ಬೆಂಗಳೂರು ಸುತ್ತಮುತ್ತಲಿನ ಬರ ಪೀಡಿತ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಜಾರಿ ಗೊಳಿಸಿರುವ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ನೀರಿನ ಗುಣಮಟ್ಟದ ಕುರಿತು ಇಂದು, ನನ್ನ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಕಚೇರಿಯಲ್ಲಿ, ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ, ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಂ.ಸಿ. ಸುಧಾಕರ್ ಅವರ ಸಮಕ್ಷಮದಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ (𝗜𝗜𝗦𝗰) ವಿಜ್ಞಾನಿಗಳು, ಜಲಮಂಡಳಿ ಅಧಿಕಾರಿಗಳೊಂದಿಗೆ ಸಂಸ್ಕರಿಸಿದ ನೀರಿನ ಗುಣಮಟ್ಟದ ಕುರಿತು ವಿಸ್ತೃತ ಚರ್ಚೆ ನಡೆಸಿದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪರಿಷತ್ತಿನ ಸಭಾ ನಾಯಕರಾದ ಶ್ರೀ ಎನ್ ಎಸ್ ಬೋಸರಾಜು ಜೀ ಅವರು.
ಸಭೆಯ ಮುಖ್ಯಾಂಶಗಳು
💧ಕೆಸಿ ವ್ಯಾಲಿ, ಹೆಚ್‌ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿಗಳ ಸಂಸ್ಕರಿಸಿದ ನೀರು ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸುದೀರ್ಘ ಸಂಶೋಧನೆಗಳಿಂದ ದೃಢಪಟ್ಟಿದೆ. ಹೀಗಾಗಿ, ಈ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ.
💧ಈ ಯೋಜನೆಗಳಿಂದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ವೃದ್ಧಿಸಿದೆ. ಹಿಂದೆ 1,500 ರಿಂದ 1,800 ಅಡಿಗಳವರೆಗೂ ಕುಸಿದಿದ್ದ ಅಂತರ್ಜಲ, ಈ ಯೋಜನೆಗಳ ಪರಿಣಾಮದಿಂದ . 200 ರಿಂದ 300 ಅಡಿಗೆ ಲಭ್ಯವಾಗುತ್ತಿದೆ.
💧ಸಂಸ್ಕರಿಸಿದ ನೀರಿನಿಂದ ಹೆಚ್ಚಾಗಿರುವ ಅಂತರ್ಜಲವು ಒಟ್ಟಾರೆ ಐದು ಹಂತಗಳಲ್ಲಿ ಶುದ್ಧೀಕರಣಗೊಳ್ಳುತ್ತಿರುವುದರಿಂದ ನೀರಿನ ಗುಣಮಟ್ಟ ಹೆಚ್ಚಿದೆ. ಬಹಳ ಮುಖ್ಯವಾಗಿ ಈ ನೀರನ್ನು ಬಳಕೆ ಮಾಡುತ್ತಿರುವ ಜನ ಹಾಗೂ ಜಾನುವಾರುಗಳ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬಂದಿಲ್ಲ. ಕೃಷಿ ಬೆಳೆಗಳ ಮೇಲೂ ಪ್ರತೀಕೂಲ ಪರಿಣಾಮ ಬೀರಿಲ್ಲ ಎಂದು 𝗜𝗜𝗦𝗰 ವರದಿ ದೃಢಪಡಿಸಿದೆ.
💧ಸಂಸ್ಕರಿತ ತ್ಯಾಜ್ಯ ನೀರಿನಿಂದ ಹೆಚ್ಚಾಗಿರುವ ಅಂತರ್ಜಲ ಬಳಕೆಯಿಂದಾಗಿ ಮಣ್ಣಿನ ಗುಣಮಟ್ಟವೂ ಸುಧಾರಿಸಿದ್ದು, ಮೆಂತ್ಯ, ಸೌತೆಕಾಯಿ, ಬೀಟ್ರೂಟ್, ಟೊಮೆಟೊ ಸೇರಿದಂತೆ ಇತರೆ ತರಕಾರಿ ಬೆಳೆಗಳನ್ನು ಈ ಭಾಗದ ರೈತರು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಇಷ್ಟಾದರೂ, ಮಣ್ಣಿನಲ್ಲಿ ನೈಟ್ರೋಜನ್ ಅಂಶ ಹೆಚ್ಚಿದೆ ಎಂಬ ಆರೋಪಗಳು ಶುದ್ದ ಸುಳ್ಳು ಎಂದು ವಿಜ್ಞಾನಿಗಳು ಸಭೆಯಲ್ಲಿ ವಿವರಿಸಿದರು.
💧𝗜𝗜𝗦𝗰 ವತಿಯಿಂದ 2019 ರಿಂದ ಸತತ ಆರು ವರ್ಷಗಳ ಕಾಲ ನಡೆಸಲಾದ ಸಂಶೋಧನೆಯಲ್ಲಿ, ನೀರಿನಲ್ಲಿ ಹಾಗೂ ಅಂತರ್ಜಲದಲ್ಲಿ ಯಾವುದೇ ಹಾನಿಕಾರಕ ಲೋಹಂಶಗಳು ಪತ್ತೆಯಾಗಿಲ್ಲ. ವಾಸನೆ ಮತ್ತು ಬಣ್ಣವಿಲ್ಲದ ಶುದ್ಧ ನೀರು ಲಭ್ಯವಾಗುತ್ತಿದೆ. ಜಾನುವಾರುಗಳ ಹಾಲು ಉತ್ಪಾದನೆಯೂ ಹೆಚ್ಚಿದೆ. ಈ ಯೋಜನೆಯನ್ನು ಇಡೀ ದೇಶವೇ ಅನುಸರಿಸಬೇಕು.
💧ಮೀನಿನ ಆರೋಗ್ಯ ಹಾಗೂ ಮಾಂಸದ ಗುಣಮಟ್ಟವನ್ನು ಆರು ತಿಂಗಳಿಗೊಮ್ಮೆ ಪರಿಶೀಲಿಸಲು ಹಾಗೂ 𝗜𝗜𝗦𝗰 ಸಂಶೋಧನೆಯನ್ನು ಮುಂದಿನ ಹತ್ತು ವರ್ಷಗಳವರೆಗೆ ಮುಂದುವರಿಸಲು IISc ಅಧ್ಯಯನ ತಂಡಕ್ಕೆ ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.
💧ಸಂಸ್ಕರಿಸಿದ ನೀರಿನ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಲು ಹಾಗೂ ಕೊಳಚೆ ನೀರು ಕೆರೆಗಳಿಗೆ ಸೇರುವುದನ್ನು ತಪ್ಪಿಸಲು ಸರ್ಕಾರದ ಮಟ್ಟದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭೆಗೆ ಭರವಸೆ ನೀಡಲಾಯಿತು.
ಸಭೆಯಲ್ಲಿ, IISc ಅಸೋಸಿಯೇಟ್ ಪ್ರೊಫೆಸರ್, ಲಕ್ಷ್ಮಿ ನಾರಾಯಣ ರಾವ್, ವ್ಯಾಲಿ ಯೋಜನೆಗಳ ಅಧ್ಯಯನ ತಂಡದ IISc ಸಂಸ್ಥೆಯ ಇತರೆ ಪ್ರಾಧ್ಯಾಪಕರು, ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಶ್ರೀ ಡಾ. ರಾಮ್ ಪ್ರಸಾತ್ ಮನೋಹರ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

