ಸಿಂಧನೂರು – ಗ್ಯಾರಂಟಿ ಅನುಷ್ಠಾನಗಳ ಸಮಿತಿ ಸಿಂಧನೂರು ತಾಲೂಕ ಸದಸ್ಯರಾದ ಹಾಗೂ ಯುವ ಮುಖಂಡರಾದ ಅಸ್ಲಾಂ ಪಾಷ ಅವರ ಜನ್ಮದಿನ ಸಮಾರಂಭ ಕಾರ್ಯಕ್ರಮವು ಅಸ್ಲಾಂ ಪಾಷ ಸ್ನೇಹ ಬಳಗದ ವತಿಯಿಂದ ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಹಾಲು ಹಣ್ಣು ಬ್ರೆಡ್ ಬಿಸ್ಕೆಟ್ ಗಳನ್ನು ವಿತರಿಸುವ ಮೂಲಕ ಅಪಾರ ಸ್ನೇಹ ಬಳಗದ ಸಮಕ್ಷಮದಲ್ಲಿ ಸರಳವಾಗಿ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ ಯುವ ಮುಖಂಡರಾದ ಅಸ್ಲಾಂ ಪಾಷ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ಶುಭ ಕೋರಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಯುವ ಮುಖಂಡರಾದ ಅಸ್ಲಾಂ ಪಾಷ ಮಾತನಾಡಿ ನನ್ನೆಲ್ಲಾ ಸ್ನೇಹಿತರು ಕಾರುಣ್ಯದಂತಹ ಕರುಣೆಯ ಕುಟುಂಬದಲ್ಲಿ ನನ್ನ ಜನ್ಮದಿನ ಹಮ್ಮಿಕೊಂಡು ಹಾರೈಸುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಈ ನಮ್ಮ ಕಾರುಣ್ಯಾಶ್ರಮದ ಸೇವೆಗೆ ಇಸ್ಲಾಂ ಧರ್ಮದ ನಮ್ಮೆಲ್ಲ ಯುವಕರು ಜೊತೆಗಿರುತ್ತೇವೆ. ಮತ್ತು ಆಶ್ರಮಕ್ಕೆ ಸ್ವಂತ ಜಾಗ ಇಲ್ಲದಿರುವುದು ಹಾಗೂ ಅನುದಾನ ಇಲ್ಲದಿರುವುದನ್ನು ನಮ್ಮ ಶಾಸಕರ ಗಮನಕ್ಕೆ ತಂದು ಸ್ವಂತ ಜಾಗ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತರಾದ ಖಾಜಾ ಬನ್ನಿಗನೂರು ಮಾತನಾಡಿ ನಮ್ಮ ಅಸ್ಲಾಂ ಪಾಷ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಸಿಂಧನೂರು ತಾಲೂಕಿನ ಸರ್ವಧರ್ಮದ ಪ್ರೀತಿ ವಿಶ್ವಾಸ ಗಳಿಸಿರುವಂತಹ ಇಂತಹ ಸ್ನೇಹಿತನ ಜನ್ಮದಿನ ಪವಿತ್ರ ಕಾರುಣ್ಯ ಕುಟುಂಬದಲ್ಲಿ ನೆರವೇರಿರುವುದು ಮಾನವೀಯತೆಗೆ ಸಂಪೂರ್ಣ ಅರ್ಥ ಕಲ್ಪಿಸಿ ಕೊಟ್ಟಂತಾಗಿದೆ. ಮನುಷ್ಯನಿಲ್ಲಿರುವ ಅಹಂಕಾರ ಗರ್ವ ಮದ ಮತ್ಸರಗಳು ಅಳಿಯಬೇಕಾದರೆ ಕಾರುಣ್ಯ ಆಶ್ರಮಕ್ಕೆ ಒಮ್ಮೆ ಭೇಟಿ ಕೊಡಿ ಎನ್ನುವ ವೈಯಕ್ತಿಕ ಅಂತರಾಳದ ಅನಿಸಿಕೆ ನನ್ನದು ನಾನು ಸುಮಾರು ವರ್ಷಗಳಿಂದ ಕಾರುಣ್ಯ ಆಶ್ರಮದ ಸತ್ಯ ಪ್ರಾಮಾಣಿಕ ಸೇವೆಯ ಜೊತೆಗಿದ್ದೇನೆ. ಇಂತಹ ಸೇವೆ ಮಾಡುವಾಗ ಸಮಾಜದಲ್ಲಿ ಹಲವಾರು ಟಿ ಕೆ ಟಿಪ್ಪಣಿ ಅವಮಾನ ಅಪಪ್ರಚಾರಗಳನ್ನು ಸಹಿಸಿಕೊಂಡು ನಮ್ಮ ಚನ್ನಬಸವ ಸ್ವಾಮಿಯವರು ಕಾರುಣ್ಯ ಕುಟುಂಬವನ್ನು ಪವಿತ್ರ ಕ್ಷೇತ್ರವನ್ನಾಗಿ ಮಾಡಿರುವುದು ನಮ್ಮ ಸಿಂಧನೂರಿಗೆ ತಂದ ಗೌರವವಾಗಿದೆ. ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ ನಿಮ್ಮ ಸೇವೆಯು ನಮ್ಮೆಲ್ಲರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುನ್ನಾ ಜೆ.ಡಿ.ಎಸ್. ಮುಖಂಡರು. ಫಯಾಜ್ ಪೀರಾ ಅಧ್ಯಕ್ಷರು ಸಿಂಧನೂರು ತಾಲೂಕ ಮುಸ್ಲಿಂ ಸಂಘ. ಅಲ್ತಾಫ್ ಖಾನ್ ಮುಖಂಡರು. ಬಂದೇನವಾಜ್. ರಹೀಂ. ಜಿಲಾನಿ.ಇಮ್ರಾನ್. ಸಲೀಂ. ಅಜರ್ ಖಾನ್. ಫಯಾಜ್.ಶಾಬಾಜ್ ಬೇಗ್ ಅಧ್ಯಕ್ಷರು ಯುವ ಕಾಂಗ್ರೆಸ್ ಸಮಿತಿ. ನಗರ ಘಟಕ ಸಿಂಧನೂರು. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ.ಮರಿಯಪ್ಪ. ಜ್ಯೋತಿ. ಮೀನಾಕ್ಷಮ್ಮ. ಲಕ್ಷ್ಮಿ. ಸೇರಿದಂತೆ ಹಲವಾರು ಅಸ್ಲಾಂ ಪಾಷ ಸ್ನೇಹಿತರುಗಳು ಉಪಸ್ಥಿತರಿದ್ದರು



