ಸಿಂಧನೂರು – ತಾಲೂಕ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ವರದಿಗಾರರಾದ ಚಂದ್ರಶೇಖರ ಬೆನ್ನೂರು ಅವರಿಗೆ 2026ನೇ ವರ್ಷದ ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಅವರ ಜನಪರ ಕಾಳಜಿಯ ವರದಿಗಳು ಮತ್ತು ಅವರ ಬರಹಗಳನ್ನಾಧರಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ” “ಅಭಿಮನ್ಯು” ಎನ್ನುವ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಿಂದ ಸನ್ಮಾನಿಸಿ ಗೌರವಿಸಿ ಶುಭ ಕೋರಿ ಆಶೀರ್ವದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಭಿಮನ್ಯು ಪ್ರಶಸ್ತಿ ಪುರಸ್ಕೃತರು ಪತ್ರಕರ್ತರಾದ ಚಂದ್ರಶೇಖರ ಬೆನ್ನೂರು ಗೌರವ ಸ್ವೀಕರಿಸಿ ಮಾತನಾಡಿ ಇಂದಿನ ಈ ಕರುಣೆಯ ಕಾರುಣ್ಯ ಕುಟುಂಬದ ಆಶೀರ್ವಾದ ನನ್ನ ಪತ್ರಿಕೋದ್ಯಮಕ್ಕೆ ಹೆಚ್ಚಿನ ಜವಾಬ್ದಾರಿ ವಹಿಸಿದೆ. ಈ ಪ್ರಶಸ್ತಿ ಲಭಿಸಿರುವುದು ನಮ್ಮ ಸಿಂಧನೂರು ತಾಲೂಕಿನ ಜನರ ಸಹಕಾರ ಮತ್ತು ನನ್ನ ಹೆತ್ತವರಿಗೆ ಮತ್ತು ನನ್ನ ಹಿತೈಷಿಗಳಿಗೆ ಈ ಪ್ರಶಸ್ತಿ ಅರ್ಪಣೆ. ಪತ್ರಿಕೋದ್ಯಮವು ಸಮಾಜದಲ್ಲಿ ವಿಶೇಷ ಅಂಗವಾಗಿ ಸಾಮಾಜಿಕ ಜವಾಬ್ದಾರಿಯನ್ನು ಮತ್ತು ನ್ಯಾಯಪರ ನಿಲುವುಗಳನ್ನು ಸಮಾಜಕ್ಕೆ ತೋರಿಸುವ ಅಂಗವಾಗಿದೆ. ಮತ್ತು ವಿಶೇಷವಾಗಿ ಕಾರುಣ್ಯ ಆಶ್ರಮದ ಸೇವೆಯು ಪ್ರಾಮಾಣಿಕತೆಯಿಂದ ನೆಲೆ ಇಲ್ಲದ ನೊಂದವರ ಬಾಳಿಗೆ ನಾಡಿಬಿಡಿತವಾಗಿ ನಡೆಯುತ್ತಿದೆ. ಕಾರುಣ್ಯ ಆಶ್ರಮದ ಸತ್ಯ ಪ್ರಮಾಣಿಕ ಸೇವೆಗೆ ಟೀಕೆಗಳು ಸಾಯುತ್ತವೆ. ಇದ್ಯಾವುದುಗಳಿಗೆ ಕಿವಿಗೊಡದೆ ಹರೇಟನೂರಿನ ಚನ್ನಬಸವ ಸ್ವಾಮಿಯವರು ಹಾಗೂ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ.ಅಶೋಕನಲ್ಲ. ಮತ್ತು ಇನ್ನಿತರ ಸ್ನೇಹ ಬಳಗದೊಂದಿಗೆ ಇಂತಹ ಕಾರ್ಯ ಭಗವಂತನಿಗೆ ಮೆಚ್ಚುವಂತಹ ಶ್ರೇಷ್ಠ ಕಾರ್ಯ ಇದಾಗಿದೆ. ಈ ಕಾರುಣ್ಯ ಕುಟುಂಬದ ಎಲ್ಲಾ ಕೂಸುಗಳ ಆಶೀರ್ವಾದ ನಿರಂತರವಾಗಿ ನಮ್ಮ ಮೇಲಿರಲಿ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪರಪ್ಪ ಚಂದ್ರಡ್ಡಿ ಸಾಹುಕಾರ ಬಾಗಲವಾಡ. ವೀರೇಶ ಕೋಟೆ ಶಿಕ್ಷಕರು. ಶಕೀಲ್ ಅಹಮದ್ ನಿವೃತ್ತ ಶಿಕ್ಷಕರು. ಬಸವರಾಜ ಮೈಲಾರ ನಿವೃತ್ತ ಶಿಕ್ಷಕರು. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಶ್ರೀ ಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಹಾಗೂ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ.ಜ್ಯೋತಿ. ಮೀನಾಕ್ಷಮ್ಮ ಲಕ್ಷ್ಮಿ. ಹಾಗೂ ಆಶ್ರಮದ ಆಶ್ರಯದಾತರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *