ಸಿಂಧನೂರು- ನಗರದ ಎಪಿಎಂಸಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿ ಸಿಂಧನೂರು ವತಿಯಿಂದ ಹಮ್ಮಿಕೊಂಡಿದ್ದ ಮೊದಲನೇ “ಭಕ್ತಿ ಸುಧೆ” ಕಾರ್ಯಕ್ರಮವನ್ನು ಸಂಸ್ಕಾರ ಭಾರತಿ ಅಧ್ಯಕ್ಷರಾದ ವೆಂಕಣ್ಣ ಜೋಶಿ ಇವರು ಉದ್ಘಾಟಿಸಿ ಮಾತನಾಡಿ ಸಂಗೀತ ಮನಸ್ಸಿಗೆ ಮಾನಸಿಕ ನೆಮ್ಮದಿ ನೀಡುತ್ತದೆ, ಜೊತೆಗೆ ನಮ್ಮ ದೇಶದ ಪರಂಪರೆ, ಸಂಸ್ಕೃತಿಯ ಕುರುಹಾದ ಸಂಗೀತವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆಯೆಂದರು.
ಸಿಂಧನೂರಿನ ಸಂಗೀತಗಾರದ ವಿಜಯಕುಮಾರ ಜಿ ಹಿರೇಮಠ್ ಇವರು ಧಾರವಾಡದಲ್ಲಿ 7 ವರ್ಷಗಳ ಕಾಲ ಸಂಗೀತ ಅಧ್ಯಯನ ಮಾಡಿ ಪ್ರಸ್ತುತ ಸಿಂಧನೂರಿನಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿಯನ್ನು ಪ್ರಾರಂಭಿಸಿ ಸಂಗೀತ ತರಗತಿ ನಡೆಸುವುದರ ಮೂಲಕ ಬಾಲ ಸಂಗೀತ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ…ತಮ್ಮಲ್ಲಿ ತರಬೇತಿ ಪಡೆದ ಮಕ್ಕಳಿಗೆ ಒಂದು ಉತ್ತಮ ವೇದಿಕೆ ನಿರ್ಮಾಣ ಮಾಡುವ ಸಲುವಾಗಿ ಸತಃ ಇವರೇ ಪ್ರತಿ ತಿಂಗಳು ಒಂದು ದೇವಸ್ಥಾನದಲ್ಲಿ ಭಕ್ತಿ ಸುಧೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ, ಈ ಕಾರ್ಯಕ್ರಮದಲ್ಲಿ ಮಕ್ಕಳೇ ಅಧ್ಭುತವಾಗಿ ಹಾಡುಗಳನ್ನು ಹಾಡುತ್ತಾರೆ, ನಂತರ ವಿಜಯಕುಮಾರ ಹಿರೇಮಠ ಇವರು ಹಾಡುತ್ತಾರೆ.. ಇವರ ಈ ಕಾರ್ಯಕ್ಕೆ ಎಲ್ಲಾ ಪೋಷಕರು ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ….
ಸ್ವರ, ಅನಿರುದ್ಧ, ರಿತಿಕಾ, ಸಾನ್ವಿ, ನಿಸರ್ಗ ಮುದ್ದು ಪುಟಾಣಿಗಳು ತಮ್ಮ ಕಂಠ ಸಿರಿಯಿಂದ ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರ ಮನ ಗೆದ್ದರು..
ನಂತರ ಹಾಡಿದ ವಿಜಯಕುಮಾರ ಹಿರೇಮಠ್ ಇವರಿಗೆ ವಿರಾಟ್ ಬದಿ ಕೊಳಲು ವಾದನ ಸಾಥ್, ಮಹಾಂತಯ್ಯ ಗೊನವಾರ ಹಾರ್ಮೋನಿಯಂ ಸಾಥ್, ಗಣಪತಿ ಪೂಜಾರ್ ದಿನ್ನಿ ರಾಯಚೂರು ಇವರು ತಬಲಾ ಸಾಥ್ ನೀಡಿದರು..
ಸಂಗೀತ ಕಾರ್ಯಕ್ರಮಗಳಿಗೆ ಅವಕಾಶಗಳು ತುಂಬಾ ಕಡಿಮೆ ಇರುವ ಸಿಂಧನೂರಲ್ಲಿ ಇಂಥಹ ಕಾರ್ಯಕ್ರಮ ಆಯೋಜಿಸಿರಿವುದು ಒಳ್ಳೆಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮಗಳಿಗೆ ಸಂಗೀತ ಅಭಿಮಾನಿಗಳು ಸಹಕಾರ ನೀಡಿ ಇಂಥಹ ಗಾಯಕರನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದದ್ದು ಅತೀ ಮಹತ್ವದ್ದು…
ಕಾರ್ಯಕ್ರಮದಲ್ಲಿ ಗವಿಸಿದ್ದಯ್ಯ ಹಿರೇಮಠ್, ವಿನಾಯಕ ದೇವಸ್ಥಾನದ ಅರ್ಚಕರಾದ ಶರಣಯ್ಯ ಸ್ವಾಮಿ, ಅಮರಯ್ಯ ಸ್ವಾಮಿ ಪಾಲಕರು ಪೋಷಕರು, ಸಾರ್ವಜನಿಕರು ಉಪಸ್ಥಿತರಿದ್ದರು..


