ರಾಯಚೂರು: ಸನ್ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್. ಬೋಸರಾಜು ಅವರು ದಿನಾಂಕ 21.03.2026 ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ:
1.ಬೆಳಿಗ್ಗೆ 09.00 ಗಂಟೆಗೆ: ರಾಯಚೂರು ನಗರದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಲಾದ ಕಾರ್ಯಕ್ರಮಗಳಲ್ಲಿ ಭಾಗಿ. (ಸ್ಥಳ: ರಾಯಚೂರು), 2. ಬೆಳಿಗ್ಗೆ 11.00 ಗಂಟೆಗೆ: ಮಾನ್ವಿ ಪಟ್ಟಣಕ್ಕೆ ಆಗಮನ, 3. ಬೆಳಿಗ್ಗೆ 11.00 ಗಂಟೆಗೆ: ಮಾನ್ವಿ ಪಟ್ಟಣಕ್ಕೆ ಆಗಮನ, 4. ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 12.30 ರವರೆಗೆ: ಮಾನ್ವಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಹಾಗೂ ರಂಜಾನ್ ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗಿ. (ಸ್ಥಳ: ಮಾನ್ವಿ, ಜಿಲ್ಲೆ: ರಾಯಚೂರು), 5. ಮಧ್ಯಾಹ್ನ 12.30 ಗಂಟೆಗೆ: ಮಾನ್ವಿಯಿಂದ ಬೆಂಗಳೂರಿಗೆ ಪ್ರಯಾಣ. (ಮಾರ್ಗ: ಸಿಂಧನೂರು, ಗಂಗಾವತಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಮೂಲಕ)., 6.ಸಂಜೆ 06.00 ಗಂಟೆಗೆ: ಬೆಂಗಳೂರಿಗೆ ತಲುಪಲಿದ್ದಾರೆ.
ಸಚಿವರ ಈ ಪ್ರವಾಸದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿರಬೇಕೆಂದು ಈ ಮೂಲಕ ತಿಳಿಸಲಾಗಿದೆ.

