ಜಾಲಹಳ್ಳಿ : ಮಾ 21 ಗ್ರಾಮದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಎಲ್ಲಾ ಮುಸ್ಲಿಂ ಬಾಂಧವರು ಸೇರಿ ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಣೆ ಮಾಡಿದರು.
ಹಬ್ಬದ ಅಂಗವಾಗಿ ಗ್ರಾಮದಲ್ಲಿರುವ ಕಬ್ರ್ ಸ್ಥಾನದಲ್ಲಿನ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಆಶರಖಾನ್ ದಿಂದ ಎಲ್ಲಾ ಮುಸ್ಲಿಂ ಬಾಂಧವರು ಪಾದಯಾತ್ರೆ ಮೂಲಕ ತೆರಳಿ, ಬೆಳಿಗ್ಗೆ 9:30ಕ್ಕೆ ಈದ್ಗಾ ಮೈದಾನ ತಲುಪಿದರು. ನಂತರ ಮೌಲಾನಾ ಮುಮ್ತಾಜ್ ರಹಿ ಅವರ ನೇತೃತ್ವದಲ್ಲಿ ಸಮೂಹ ಪ್ರಾರ್ಥನೆ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮುಮ್ತಾಜ್ ರಹಿ ಅವರು,
ಸಮಾಜದಲ್ಲಿ ಎಲ್ಲರೂ ಪರಸ್ಪರ ಸಹಾನುಭೂತಿ ಮತ್ತು ಕರುಣೆಯಿಂದ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಬಡವರೊಂದಿಗೆ ಸಹಾನುಭೂತಿ ತೋರಿಸಿ, ಎಲ್ಲ ಸಮಾಜದ ಬಂಧುಗಳನ್ನು ಹಬ್ಬಕ್ಕೆ ಆಹ್ವಾನಿಸಿ ಊಟೋಪಚಾರ ನೀಡುವ ಮೂಲಕ ಸಾಮಾಜಿಕ ಐಕ್ಯತೆ ಕಾಪಾಡಬೇಕೆಂದು ತಿಳಿಸಿದರು. ಧರ್ಮವು ಬಡ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರನ್ನು ಒಂದೇ ಸಾಲಿನಲ್ಲಿ ನಿಲ್ಲಿಸುತ್ತದೆ ಎಂದು ಹೇಳಿದರು. ದಾನಧರ್ಮದ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂದು ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಬಾಬಾ ಮೆಡಿಕಲ್ ಅವರು ಯುವಕರಿಗೆ ಮೊಬೈಲ್ ಬಳಕೆಯಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕವಾಗಿ ಶೇರ್ ಮತ್ತು ಲೈಕ್ ಮಾಡುವುದನ್ನು ತಪ್ಪಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿ ಕಮಿಟಿ , ಖಬರ್ ಸ್ಥಾನ ಕಮಿಟಿ, ಟಿಪ್ಪು ಸುಲ್ತಾನ್ ಕಮಿಟಿ, ಶಾಹಿನ್ ಮಸೀದಿ ಕಮಿಟಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಜೊತೆಗೆ ಊರಿನ ಪ್ರಮುಖರಾದ ಮೈನುದ್ದೀನ್ ಗುತ್ತೇದಾರರು, ಹಾಜಿ ಮಲಿಕ್ ಹಮ್ಮದ್ ಸಾಬ್, ಬಾಬಾ ಮೆಡಿಕಲ್, ಯಾಸಿನ್ ಮುಲ್ಲಾ ನಸೀರ್ ಸಾಬ್ ಮುಲ್ಲಾ, ಶೇಖ್ ಮಹಿಬೂಬ್ ಸಾಬ್ ಕಂಟ್ರಾಕ್ಟರ್ , ಹೈದರಲಿಮುಲ್ಲಾ ರಾಜ್ ಮಹಮ್ಮದ್ ಕಲೆಗಾರ್ , ಖುರಸಿದ್ ಪಟೇಲ್, ಇಮಾಮ್ ಸಾಬ್ ಉದ್ದಾರ, ಅಲಿಬಾಬಾ ಪತ್ರಕರ್ತರು, ಶಬ್ಬೀರ್ ಸುಣ್ಣದಕಲ್, ಜಾಕಿರ್ ಹುಸೇನ ಆರ್ತಿ ಅಬ್ದುಲ್ಗಣಿಸಿತಾರಾ ಬೇಕರಿ, ಹುಸೇನ್ ಭಾಷ್ಆರ್ತಿ, ಹುಸೇನ್ ಬಾಷಾಡ್ರೈವರ್, ರಿಯಾಜ ಅರ್ತಿ, ಅಬ್ದುಲ್ ನಬಿಸಾಬ್, ಅಬ್ಬಾಸ್ ಅಲಿಸಾಬ್ ಹಾಗೂ
ಜಾಲಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಮಕತು ಪರಾಸಿ,ಅಬ್ದುಲ್ ರೆಹಮಾನ್ ಖುರೇಶಿ, ಹೈದರ್ ಉದ್ದಾರ ಹುಸೇನ ನಾಸಿ, ಬುಡನ್ ಸಾಬ್ ಮಾಸನೂರ್,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತಾ ವ್ಯವಸ್ಥೆ ಮಾಡಲಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಿಂದ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು. ಇದಕ್ಕಾಗಿ ಮುಸ್ಲಿಂ ಮುಖಂಡರು ಗ್ರಾಮ ಪಂಚಾಯತ್ ಮತ್ತು ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದರು.



