ಕವಿತಾಳ : ಮಾ.2೦ ಲಕ್ಷ್ಮಣ ಭೋವಿ ಪಟ್ಟಣ ಸಮೀಪದ ಪಾತಾಪೂರು ಗ್ರಾಮದ ಗ್ರಾಮ ದೇವತೆಯಾದ ಶ್ರೀ ದುರ್ಗಾದೇವಿ ನೂತನ ಶಿಲಾ ಮಂಟಪ ಹಾಗೂ ದೇವಿಯ ಗುಡಿ ಪ್ರವೇಶ ಕಾರ್ಯಕ್ರಮ ವಿಶೇಷ ಪೂಜೆ ಪುರಾಸ್ಕಾರ ವಿಧಿ ವಿಧಾನಗಳ ಮೂಲಕ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ನೆರವೇರಿತು.

ದೇವರಿಗೆ ವಿವಿಧ ರೀತಿಯ ಪೂಜೆ ಪುರಸ್ಕಾರ ನೆರವೇರಿಸಿ ಗ್ರಾಮದ ಆಂಜಿನೆಯ್ಯ ಸ್ವಾಮಿ‌ ದೇವಸ್ಥಾನ ಅಗಸಿಯಿಂದ ಮೊದಲ್ಗೊಂಡು ಸುಮಂಗಲಿಯರು ಕುಂಬ ಕಳಸಗಳನ್ನೊತ್ತು ಸಾಗಿದರೆ , ಡೊಳ್ಳು ಬಾಜ ಬಜಂತ್ರಿಗಳೋಂದಿಗೆ ದೇವಿಯನ್ನು ತನು ಮನ ಭಕ್ತಿ ಭಾವದಿಂದ ರಥದಲ್ಲಿ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆ ತರಲಾಯಿತು . ನಂತರ ನೂತನ ಶಿಲಾ ಮಂಟಪ ದೇವಸ್ಥಾನದ ಗರ್ಭ ಗುಡಿಯ ಒಳಗಡೆ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಭವ್ಯವಾದ ನೂತನ ಶಿಲಾ ಮಂಟಪದ ದೇವಸ್ತಾನ ಉದ್ಘಾಟನೆಗೊಂಡಿತು .

ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಮಹಾ ಸ್ವಾಮಿಗಳು ದೇವಿಗೆ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ನೆರವೆಸಿಕೊಟ್ಟರು .

ಹೋಮ ಹವನ , ರುದ್ರಾಭಿಷೇಕ , ಮಹಾ ಮಂಗಳಾರತಿ  ,ಜೋಡಿ ದಂಪತಿಗಳಿಂದ ಪೂಜೆ ಅನ್ನ ದಾಸೋಹ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಶಾಸ್ತ್ರೋತ್ಸವವಾಗಿ ಮಾಡಲಾಯಿತು .

ಈ ಸಂಧರ್ಭದಲ್ಲಿ ಶ್ರೀ ಬಸವರಾಜಪ್ಪ ತಾತನವರು ಕಲ್ಲಂಗೇರಾ , ಶ್ರೀ ಅಯ್ಯಪ್ಪ ತಾತ ಹೀರಾ ( ‌ವಜ್ರ )

ಶ್ರೀ ಶಿವಶಂಕ್ರಪ್ಪ ಪೂಜಾರಿ ಪಾತಾಪೂರು ,

ಪ್ರದಾನ ಅರ್ಚಕರಾದ ಅಂಬಣ್ಣ ಪೂಜಾರಿ , ತಿಪ್ಪಣ್ಣ ಪೂಜಾರಿ , ಚನ್ನಯ್ಯ ಸ್ವಾಮಿ , ಶಿವಯ್ಯಸ್ವಾಮಿ ಬಂಗ್ಲಿ , ಚೇತನ ಸ್ವಾಮಿ , ಸಣ್ಣಯ್ಯಪ್ಪ ಸ್ವಾಮಿ , ಸಿದ್ದನಗೌಡ ಪೋ.ಪಾಟೀಲ್ , ಅಮರೇಗೌಡ ಪೋ.ಪಾಟೀಲ್ ,ಅಯ್ಯನಗೌಡ ಫೋ.ಪಾಟೀಲ್ , ,  ಶರಣಪ್ಪ ಕೌತಾಳ , ಅಮರೇಶ್ ಗೌಡ ಮಲ್ಲದಗುಡ್ಡ ,  ಶರಣಪ್ಪ ಎಲ್ಐಸಿ , ಪತ್ರಕರ್ತ ಲಕ್ಷ್ಮಣ ಭೋವಿ , ರಾಜಶೇಖರ ಪಾಟೀಲ್ , ಮಲ್ಲಯ್ಯ ಬೆವಿನಗಿಡ , ಮೌನೇಶ ಕುಮನೂರು , ನಿಂಗಪ್ಪ ಕುಮನೂರು , ರಾಯಪ್ಪ ಹೊಸಮನಿ ,  ದೆವಣ್ಣ ಹೊಸಮನಿ , , ಮಲ್ಲಯ್ಯ ಪೂಜಾರಿ , ಈರಣ್ಣ ರಬ್ಬೇಲಿ , ದೊಡ್ಡ ಹನುಮಂತ ರಬ್ಬೆಲಿ ,ಲಿಂಗಣ್ಣ ಅಗಸಿಹಾಳ , ಬಸವರಾಜ ಹಾಲಾಪೂರು , ಗುರುಲಿಂಗಪ್ಪ ಬಳಗಾನೂರ ,   ಅಮರೇಶ ಪೂಜಾರಿ , ದೆವಣ್ಣ ಹೊಸಮನಿ , ಮಲ್ಲಯ್ಯ ರಬ್ಬೇಲಿ , ಶಿವಶಂಕರ ದನಮರಡಿ , ಸಿದ್ದಪ್ಪ ಆಲ್ಕೋಡಿ , ಬಸವಲಿಂಗ ದನಮರಡಿ , ಶೇಕರಪ್ಪ ಕೌತಾಳ ,ರೆವಣ್ಣಸಿದ್ದಪ್ಪ ಅನ್ವಾರ , ನಾಗರಾಜ ಆರ್ , ಶ್ರೀಧರ ಆರ್ , ಬಾಡದಪ್ಪ ನಾಯಕ , ಗುರುಬಸವ ಆಲ್ಕೋಡಿ ,  ಉಮಾಶಂಕರ್ ಎಂ , ನರಸಪ್ಪ ನಾಯಕ , ಯಲ್ಲಪ್ಪ ಮಡಿವಾಳ , ಸಣ್ಣ ಶಿವಪ್ಪ , ಪರುಶುರಾಮ , ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *