ತಾಳಿಕೋಟಿ: ಅಸ್ಕಿ ಫೌಂಡೇಶನ್ ಕೊಣ್ಣೂರ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಮಾಜ ಸೇವಕರಾದ ಸಿ.ಬಿ.ಅಸ್ಕಿ ಅವರನ್ನು ಸ್ಥಳೀಯ ಮುಸ್ಲಿಂ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪವಿತ್ರ ರಮಜಾನ ಮಾಸದ ಅಂಗವಾಗಿ ಪಟ್ಟಣದಲ್ಲಿ ಇತ್ತೀಚಿಗೆ ಹಮ್ಮಿಕೊಂಡ ಸೌಹಾರ್ದ ಇಫ್ತಾರ ಕೂಟ ಕಾರ್ಯಕ್ರಮದಲ್ಲಿ ಅವರ ಸಮಾಜಮುಖಿ ಕಾರ್ಯಗಳಿಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖಂಡ ಸಿ.ಬಿ.ಅಸ್ಕಿ ಅವರು ನಿಮ್ಮೆಲ್ಲರ ಸಹಕಾರದಿಂದ ಕಳೆದ 8 ವರ್ಷಗಳಿಂದ ರಮಜಾನ ಮಾಸದಲ್ಲಿ ಸೌಹಾರ್ದ ಇಫ್ತಾರ ಕೂಟಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ. ಜಾತಿ ಮತ ಭೇದವಿಲ್ಲದೆ ಸಮಾಜದಲ್ಲಿರುವ ಎಲ್ಲ ಬಡವರ ಸೇವೆಯನ್ನು ನನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ಮಾಡುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹವೇ ಕಾರಣ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳಂತೆ ನಮಗೆ ಬಾಳಬೇಕಾಗಿದೆ ದೇಶ ಕಟ್ಟುವ ಕೆಲಸ ನಾವೆಲ್ಲರೂ ಕೂಡ ಮಾಡಬೇಕಾಗಿದೆ ಆದ್ದರಿಂದಲೇ ನಾನು ಎಲ್ಲ ಸಮಾಜದ ಜನರನ್ನು ಕೂಡಿಸಿಕೊಂಡು ಇಂತಹ ಸೌಹಾರ್ದ ಕೆಲಸವನ್ನು ಮಾಡುತ್ತಿದ್ದೇನೆ ಎಂದರು. ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗಣ್ಯರಾದ ಮಾಸೂಮಸಾಬ ಕೆಂಭಾವಿ,ಕೆ.ಐ.ಸಗರ,ಹಸನಸಾಬ ಮನಗೂಳಿ,ಕಾಶೀಮಪಟೇಲ ಪಾಟೀಲ, ಶಿವರಾಜ್ ಗುಂಡಕನಕಳ, ವೀರೇಶ ಬಾಗೇವಾಡಿ, ಇಬ್ರಾಹಿಂ ಮನ್ಸೂರ,ಶಮಶುದ್ದೀನ ನಾಲಬಂದ,ಸಿಕಂದರ ಡೋಣಿ,ಮೋದಿನಸಾ ನಗಾರ್ಚಿ,ಹುಸೇನಬಾಷಾ ಜಮಾದಾರ,ರವಿ ಕಟ್ಟಿಮನಿ,ವಿರೇಶ ಅಸ್ಕಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *