ಲಿಂಗಸಗೂರು : ಮಾ 19 –
ತಾಲ್ಲೂಕಿನ ರೋಡಲಬಂಡ – ಜಾವೂರ ಹತ್ತಿರದ ನಾರಾಯಣಪುರ ಬಲದಂಡೆ ನಾಲೆಯಲಿ ಬಾಲಕ ಕಾಲುಜಾರಿ ಬಿದ್ದ ಘಟನೆ ಜರುಗಿದ್ದು ಅಗ್ನಿ ಶಾಮಕದಳದಿಂದ ಹುಡುಕಾಟ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ಬಾಲಕ ದಶರಥ ತಂದೆ ರಮೇಶ ಜವಳಗೇರಾ ವಯಸ್ಸು 9 ವರ್ಷ ದ ಬಾಲಕ ಜಾವೂರ ಹತ್ತಿರದ ಬಹಿರ್ದೇಶಗೆ ಹೋಗಿ ನಾಲೆಯಲಿ ಕೈಕಾಲು ತೊಳೆಯಲು ನಾಲೆಗೆ ಇಳಿದಾಗ ಕಾಲುಜಾರಿ ಬಿದ್ದಿದ್ದಾನೆಂದು ಹೇಳಲಾಗುತಿದ್ದು ನಾಲೆಯಲಿ ಮುಳುಗಿದ ಬಾಲಕನ ಶವದ ಹುಡುಕಾಟವನ್ನು ಅಗ್ನಿಶಾಮಕ ದಳದಿಂದ ನಡೆದಿದೆ . ಮೂಲತ ಬಾಲಕನ ಊರು ಸಿಂಧನೂರು ತಾಲೂಕಿನ ಜವಳಗೇರಾ ಎಂದು ಹೇಳಲಾಗುತಿದ್ದು ಕೆಲವೆ ದಿನದ ಹಿಂದೆ ಬಾಲಕನ ತಂದೆ ಮೃತಪಟ್ಟಿದ್ದು ತಾಯಿಯ ತವರುಮನೆಯಾದ ಜಾವೂರಗೆ ಬಂದಿದ್ದರೆಂದು ಹೇಳಲಾಗುತಿದ್ದು ಇಂದು ಬೆಳಗ್ಗೆ ಬಾಲಕ ಕಾಲುಜಾರಿ ನಾಲೆಗೆ ಬಿದ್ದ ಸುದ್ದಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ
ಘಟನೆ ನಡೆದ ಸ್ಥಳದಲಿ ಸಾಕಷ್ಟು ಜನಸೇರಿದ್ದು ಕಂಡುಬಂತು .

