ಮಸ್ಕಿ: ಹೋಳಿ ಮತ್ತು ರಂಜಾನ್ ಹಬ್ಬಗಳು ಬಂದಿದ್ದು. ಈ ಎರಡು ಹಬ್ಬಗಳನ್ನು ಹಿಂದೂ-ಮುಸ್ಲಿಂ ಬಾಂಧವರು ಸೇರಿಕೊಂಡು ಶಾಂತಿಯುತವಾಗಿ ಸಡಗರ ಸಂಭ್ರಮದಿAದ ಆಚರಿಸಲು ಎಲ್ಲರೂ ಸಹಕರಿಸಬೇಕೆಂದು ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್ ಹೇಳಿದರು.
ಸ್ಥಳಿಯ ಪೋಲಿಸ್ ಠಾಣೆ ಅಂಗಳದಲ್ಲಿ ಪೋಲಿಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಹೋಳಿ ಮತ್ತು ರಂಜಾನ್ ಹಬ್ಬಗಳ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಂತತೆ ಕಾಪಾಡಿಕೊಂಡು ಹಬ್ಬ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು. ತಾಲೂಕಾಧ್ಯಂತ ಹಲವು ವರ್ಷಗಳಿಂದ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ. ಈ ಬಾರಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲ ಸಮಾಜದವರು, ಸಾರ್ವಜನಿಕರು ಮುಂದಾಗಬೇಕು. ಈಗಾಗಲೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಬೇಕಾಬಿಟ್ಟಿಯಾಗಿ ಬಣ್ಣ ಎರಚಿ ಕುಡಿದ ಅಮಲಿನಲ್ಲಿ ಬೇಕಾಬಿಟ್ಟಿ ಬೈಕ್ ಓಡಿಸಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ರಸಾಯನಿಕ ಮುಕ್ತ ಬಣ್ಣ ಖರೀದಿಸಿ ಬಣ್ಣದಾಟ ಆಚರಿಸಿ. ಅಂತಹದ್ದೇನು ಅಹಿತಕರ ಘಟನೆ ಕಂಡುಬAದರೆ ಸೂಕ್ತ ಕಾನುನೂ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಸಿಪಿಐ ರಾಮಣ್ಣ ಜಲಿಗೇರಿ ಮಾತನಾಡಿ ಮಸ್ಕಿ ಪಟ್ಟಣವು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಹಿಂದಿನಿAದಲೂ ಎಲ್ಲ ಸಮಾಜದ ಹಿರಿಯರು ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ. ಅದೇ ರೀತಿಯಾಗಿ ಈ ವರ್ಷವೂ ಹೋಳಿ ಮತ್ತು ರಂಜಾನ್ ಹಬ್ಬವು ಬಹುತೇಕ ಶುಕ್ರವಾರ ನಡೆಯಲಿದ್ದು, ನಾವೆಲ್ಲರೂ ಒಂದೇ ಎಂಬ ಭಾವೈಕ್ಯೆತೆಯಿಂದ ಶಾಂತಿಯುತವಾಗಿ ಹಬ್ಬ ಆಚರಿಸುವುದರಿಂದ ನಮ್ಮೆಲ್ಲರಿಗೂ ಒಳ್ಳೆಯದು ಎಂದರು.
ಹಿರಿಯ ಮುಖಂಡ ಮಹಾದೇಪ್ಪಗೌಡ ಪಾಟೀಲ್, ಬಸನಗೌಡ ಪಾಟೀಲ್ ಪುರಸಭೆ ಮಾಜಿ ಅಧ್ಯಕ್ಷರಾದ ಮೌನೇಶ ಮುರಾರಿ, ಮಲ್ಲಯ್ಯ.ಕೆ. ಅಂಬಾಡಿ, ಜಿಲಾನಿ ಖಾಜಿ, ಸರಪ್ಪ ಬಂಗಾಲಿ ಮಾತನಾಡಿದರು.
ಪರವಾನಿಗೆ ಕಡ್ಡಾಯ: ಪಟ್ಟಣದಲ್ಲಿ ಬ್ಯಾನರ್ ಪ್ಲೇಕ್ಸ್ ಅಳವಡಿಸಲು ಪುರಸಭೆಯಿಂದ ಕಡ್ಡಾಯ ಪರವಾನಿಗೆ ಪಡೆದುಕೊಳ್ಳಬೇಕು. ಪರವಾನಿಗೆ ಅವಧಿ ಮುಗಿದ ಕೂಡಲೇ ತೆರವುಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ರವಿಗೌಡ ಪಾಟೀಲ್, ಚೇತನ ಪಾಟೀಲ್, ದೊಡ್ಡಕರಿಯಪ್ಪ, ಮೌನೇಶ ನಾಯಕ, ಮಸೂದಪಾಷ, ಅಶೋಕ ಮುರಾರಿ, ಆರ್.ಕೆ.ನಾಯಕ, ಬಸವರಾಜ ಬುಕ್ಕಣ್ಣ, ಭರತ್‌ಕುಮಾರ, ಡಾ.ಸಂತೋಷ ಪತ್ತಾರ್, ನೂರ್‌ಅಹ್ಮದ್, ನಿಸಾರ ಆಹ್ಮದ್, ಹುಸೇನ ಶೆಡ್ಮಿ, ಕಿರಣ ಮುರಾರಿ ಸೇರಿದಂತೆ ಹಿಂದೂ-ಮುಸ್ಲಿಂ ಸಮಾಜ ಮುಖಂಡರು ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳಿದ್ದರು.
ಪಟ್ಟಣದಲ್ಲಿ ಫ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಬೇಕಾದರೆ ಕಡ್ಡಾಯವಾಗಿ ಪುರಸಭೆಯಿಂದ ಪರವಾನಿಗೆ ಪಡೆದುಕೊಂಡು ಅಳವಡಿಸಿ ನಿಗದಿತ ಅವಧಿಯೊಳಗೆ ತೆರವುಗೊಳಿಸಿ- ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ .

