ಸಿರವಾರ: ಒಂದು ರಾಷ್ಟ್ರ ಅಭಿವೃದ್ದಿಯಾಗಬೇಕಾದರೆ ಯುವಶಕ್ತಿ ಜಾಗೃತರಾದಾಗ ದೇಶ ಉತ್ತಮ ರಾಷ್ಟ್ರವಾಗುತ್ತದೆ ಎಂದು ಆಂಜನೇಯ ನಸಲಾಪುರ ಹೇಳಿದರು. ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ಸಿದ್ದಾರ್ಥ ಪದವಿ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ರಾಷ್ಟೀಯ ಸೇವಾ ಯೋಜನೆಯ 6ನೇ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ಆಂಜನೇಯ ನಸಲಾಪುರ ಮಾತನಾಡಿ ರಾಷ್ಟ್ರ ನಿರ್ಮಾಣ ಎನ್ನುವುದು ಜನರನ್ನು ಸಂಘಟಿಸಿ ಅವರಲ್ಲಿ ಸಾಮರಸ್ಯ ಮೂಡಿಸಿ, ಎಲ್ಲಾರು ಒಪ್ಪಿಕೊಳ್ಳುವ ವಿಶಾಲವಾಗಿ ನಿರ್ಮಿಸುವ ಪ್ರಕ್ರಿಯೆಯನ್ನು ರಾಷ್ಟ್ರ ನಿರ್ಮಾಣ ಎನ್ನುವರು. ಸ್ವಾಮಿ ವಿವೇಕಾನಂದರು ಕಬ್ಬಿಣದ ಮಾಂಸ ಖಂಡಗಳುಳ್ಳ, ಉಕ್ಕಿನ ನರ ಮಂಡಳಗಳುಳ್ಳ ಯಾರು ನನ್ನ ದೇಶ ದೇಶ ಎನ್ನುವ ಪರಿಕಲ್ಪನೆಯುಳ್ಳ ಯುವಕರು ಬೇಕು ಎಂದು ಹೇಳಿದ್ದಾರೆ. ದೇಶ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನು ಏನು ಮಾಡಿದೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶ ಮೌಲ್ಯಗಳು ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಲಿ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸುಜಾತಾ ಮಾತನಾಡಿ ಇಂದಿನ ಯುವಕರು ಯಾವುದೇ ದುಃಶ್ಚಗಳಿಗೆ ಬಲಿಯಾಗದೆ ನಿಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಲ್ಲಬೇಕೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಮಾರಯ್ಯ ಆರೋಲಿ, ಶಾಂತ ಮೂರ್ತಿ ಪ್ರಾಚಾರ್ಯರು, ಉಪನ್ಯಾಸಕರಾದ ರವಿ ಸುಂಕನೂರು, ಹನುಮಂತ ಬೈಲ್ ಮರ್ಚೆಡ, ಹನುಮಂತ ಚಿಕ್ಕೋಟ್ನೆಕಲ್, ದೇವೇಂದ್ರಪ್ಪ, ಬಾಗಯ್ಯ ನಾಯಕ ಕರಡಿಗುಡ್ಡ ಹಾಗೂ ಶಿಬಿರಾರ್ಥಿಗಳು, ಊರಿನ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಶ್ವರ್ಯ ನಿರೂಪಿಸಿದರು ಸೃಷ್ಟಿ ಸ್ವಾಗತಿಸಿದರು., ಗೀತಾ ವಂದಿಸಿದರು.

Leave a Reply

Your email address will not be published. Required fields are marked *