ನಮ್ಮ ಕಾರುಣ್ಯಾಶ್ರಮವು ಗದುಗಿನ ಎರಡನೆಯ ವೀರೇಶ್ವರ ಪುಣ್ಯಾಶ್ರಮವಾಗಿದೆ – ಷ.ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು

ಸಿಂಧನೂರು – ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸ್ವಾಮಿ ಚಾರಿಟೇಬಲ್ ಟ್ರಸ್ಟ್ (ರಿ)ಕರಡಕಲ್. ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ)ಸಿಂಧನೂರು ಕೋಡಿಹಳ್ಳಿ ಕಲಾ ಸೇವಾ ಸಂಸ್ಥೆ (ರಿ)ತಿಳವಳ್ಳಿ ತಾ. ಹಾನಗಲ್ ಜಿ. ಹಾವೇರಿ ಇವರುಗಳ ವತಿಯಿಂದ ಕಾರುಣ್ಯ ಯುಗಾದಿ ಸಂಭ್ರಮದಲ್ಲಿ ಶ್ರೀಮದ್ ಜಗದ್ಗುರು ರಂಭಾಪುರಿ ಖಾಸಾ ಶಾಖಾಮಠ ಹಾಗೂ ಕನ್ನೂರಿನ ಮಠದ ಪೀಠಾಧಿಪತಿಗಳಾದ ಷ.ಬ್ರ.ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದ ಆಶೀರ್ವಾದದೊಂದಿಗೆ ಸುಮಾರು 11 ಜನ ವಿಶೇಷ ಸಾಧಕರಿಗೆ ” ಕರುನಾಡ ಸಿಂಧೂರ ಸೇವಾ ರತ್ನ” ಎನ್ನುವ ಶ್ರೇಷ್ಠ ರಾಜ್ಯ ಪ್ರಶಸ್ತಿಯನ್ನು ವಿತರಿಸಿ ಗೌರವಿಸಿ ಆಶೀರ್ವದಿಸಲಾಯಿತು. ಈ ಕಾರ್ಯಕ್ರಮದ ಕಾರುಣ್ಯ ಯುಗಾದಿ ಸಂಭ್ರಮದಲ್ಲಿ ವಿಶೇಷ ಸಾಧಕರುಗಳಾಗಿ ಸಿಂಧನೂರಿನ ಶ್ರೀ ಸಿದ್ದಲಿಂಗೇಶ್ವರ ಇಂಡೇನ್ ಗ್ಯಾಸ್ ನ ಮಾಲೀಕರಾದ ವೀರೇಶ ಗೌಡ ನೆಡೆಕಲ್. ಸರ್ಕಾರಿ ಪ್ರೌಢಶಾಲೆ ಗುಂಜಳ್ಳಿಯ ಶಿಕ್ಷಕರಾದ ಬಸವರಾಜ ಬೆಲ್ಲದ. ಅಲಬನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರವಿಕುಮಾರ. ಮಾನ್ವಿ ತಾಲೂಕಿನ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಜ್ಯೋತಿ ದೋತ್ರೆ ಸಫಾರ್. ಹಾಗೂ ಸಿಂಧನೂರಿನ ಸೇವಾ ಸಿರಿ ಚರಿಟಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಪ್ರದೀಪ್ ಪೂಜಾರಿ. ಇನ್ನುಳಿದಂತಹ ಸಾಧಕರುಗಳು “ಕರುನಾಡ ಸಿಂಧೂರ ಸೇವಾ ರತ್ನ ” ಪ್ರಶಸ್ತಿಯನ್ನು ಸ್ವೀಕರಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಕಾರ್ಯಕ್ರಮದಲ್ಲಿ ಗದುಗಿನ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯಂದಿರಾದ ಚಿದಾನಂದಪ್ಪ ಸಂಗೀತ ಮಾಸ್ತರ ಗೊರೆಬಾಳ ಇವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಷ. ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಯುಗಾದಿಯ ಸಂಭ್ರಮಾಚರಣೆಯನ್ನು ಬಹಳ ವಿಶೇಷವಾಗಿ ಕಾರುಣ್ಯ ಸಂಸ್ಥೆ ಹಮ್ಮಿಕೊಂಡಿರುವುದು ಮತ್ತು ವಿಶೇಷ ಸಾಧಕರುಗಳನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಅವರುಗಳಿಗೆ ಇನ್ನು ಹೆಚ್ಚಿನ ಸಾಮಾಜಿಕ ಜವಾಬ್ದಾರಿಯನ್ನು ವಹಿಸಿರೋದು ಅತ್ಯಂತ ಶ್ಲಾಘನೀಯ ಕಾರ್ಯ. ಈ ಕಾರುಣ್ಯ ಕುಟುಂಬವು ಹಲವಾರು ಸಮಾಜ ಸೇವಕರುಗಳಿಗೆ ಸ್ಪೂರ್ತಿಯಾಗಿ ಅರ್ಥಪೂರ್ಣವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವುದು ನಮ್ಮ ನಾಡಿನ ಎಲ್ಲಾ ಮಠಾಧೀಶರ ಪ್ರೀತಿಗೆ ಪಾತ್ರವಾಗಿದೆ. ಮತ್ತು ಸಮಾಜದಲ್ಲಿನ ಹಿರಿಯರನ್ನು ಗೌರವಿಸಿ ಪ್ರೀತಿಸಿ ಪೂಜಿಸಬೇಕು ಎನ್ನುವ ಹಲವಾರು ಅಭಿಯಾನಗಳು ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವಂತಹ ಸೇವಾ ಕಾರ್ಯಗಳಾಗಿವೆ. ಈ ಯುಗಾದಿ ಹಬ್ಬದ ಹೊಸ ವರ್ಷವು ಇಂದು ಪ್ರಶಸ್ತಿ ಸ್ವೀಕಾರ ಮಾಡಿರುವ ಸಾಧಕರುಗಳಿಗೆ ಮತ್ತು ನಾಡಿನ ಜನತೆಗೆ ಉತ್ತಮ ಆಯಸ್ಸು ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎನ್ನುವ ಆಶೀರ್ವಾದ ನಮ್ಮದಾಗಿರುತ್ತದೆ ಎಂದು ಆಶೀರ್ವಚನ ನೀಡಿದರು. ನಂತರ ಸಾನಿಧ್ಯ ವಹಿಸಿದ್ದ ಶ್ರೀ ಶಾಂಭವಿ ಪುಣ್ಯಾಶ್ರಮದ ವೇ.ಮೂ. ವೀರೇಶ ಯಡಿಯೂರು ಮಠ ಮಾತನಾಡಿ ಕಾರುಣ್ಯ ಆಶ್ರಮವು ಅದೆಷ್ಟೋ ಕಷ್ಟಗಳ ಮಧ್ಯೆ ಅನಾಥರಿಗೆ ನೊಂದವರಿಗೆ ಬದುಕು ಕಟ್ಟಿಕೊಟ್ಟು ಅವರ ಬಾಳಿಗೆ ಬೆಳಕಾಗಿದೆ. ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನಮಿಡಿತ ಸೇವಾ ಕೇಂದ್ರವಾಗಿ ಕಾರುಣ್ಯ ಕುಟುಂಬ ಹಲವಾರು ಸಾಧಕರಿಗೆ ಸ್ಪೂರ್ತಿಯಾಗಿರುವುದು ನಮ್ಮ ಸಿಂಧನೂರಿನ ಘನತೆ ಗೌರವವನ್ನು ಬರೀ ನಾಡಿಗಲ್ಲದೆ ದೇಶಕ್ಕೆ ತೋರಿಸಿಕೊಟ್ಟಿದೆ. ಮುಂದಿನ ದಿನಮಾನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಕಾರುಣ್ಯ ಸಂಸ್ಥೆ ಹಮ್ಮಿಕೊಳ್ಳಲಿ ಎನ್ನುವುದು ನಮ್ಮೆಲ್ಲರ ಅಭಿಪ್ರಾಯವಾಗಿದೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿದಾನಂದಪ್ಪ ಸಂಗೀತ ಮಾಸ್ತರ ಗೊರೆಬಾಳ. ಸಾಧಕರುಗಳಾದ ವೀರೇಶ ಗೌಡ ನೆಟೆಕಲ್. ಬಸವರಾಜ ಬೆಲ್ಲದ ಶಿಕ್ಷಕರು. ರವಿಕುಮಾರ ಉಪನ್ಯಾಸಕರು. ಜ್ಯೋತಿ ದೋತ್ರೆ ಸಫಾರ ಶಿಕ್ಷಕರು. ಪ್ರದೀಪ್ ಪೂಜಾರಿ ಸಮಾಜ ಸೇವಕರು. ಶಶಿಧರ ಸ್ವಾಮಿ. ದೊಡ್ಡಬಸವ. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ.ಮರಿಯಪ್ಪ. ಮೀನಾಕ್ಷಮ್ಮ.ಲಕ್ಷ್ಮಿ. ಹಾಗೂ ಹಲವಾರು ಸಾಧಕರು ಮತ್ತು ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *