ಹಾಲಾಪೂರ: ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಮಸ್ಕಿ ತಹಶೀಲ್ದಾರ ಮಂಜುನಾಥ
ಭೊಗವತಿ ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷಾ ನಡೆಯುವ ಎಲ್ಲಾ ಕೊಠಡಿಗಳನ್ನು, ಸಿಸಿ ಕ್ಯಾಮೆರಾ ಇನ್ನಿತರ ವೀಕ್ಷಿಸಿ ನಂತರ ಮಾತನಾಡಿ ಪರೀಕ್ಷೆಯು ಎಲ್ಲಾ ರೀತಿಯಿಂದ ಸುಸೂತ್ರವಾಗಿ ನಡೆಯಬೇಕು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವುದೇ ಭಯ ತೊಂದರೆ ಒಳಪಡದೆ ನಿರ್ಭೀತಿಯಿಂದ ಪರೀಕ್ಷೆಯನ್ನು ಎದುರಿಸಬೇಕೆಂದು ಹೇಳಿದರು. ಈ ವೇಳೆಯಲ್ಲಿ ಮುಖ್ಯಗುರು ಸುಭಾಷ್ ಸಿಂಗ್ ಹಜಾರೆ, ಗ್ರಾಮ ಲೆಕ್ಕಾಧಿಕಾರಿಗಳಾದ ಕೃಷ್ಣಪ್ಪ, ಮಹಾಂತೇಶ ಹಾಗೂ ಶಾಲೆಯ ಶಿಕ್ಷಕ ವೃಂದ, ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *