ಮಸ್ಕಿ: ತಾಲೂಕಿನ ಹಾಲಾಪೂರನ ಸರಕಾರಿ ಪ್ರೌಢಶಾಲೆಯಲ್ಲಿ 2021 – 22 ಸಾಲಿನ ನರೇಗಾ ಯೋಜನೆಯ ಅಡಿಯಲ್ಲಿ 12 ಲಕ್ಷ ರೂಪಾಯಿ ಮೊತ್ತದ ಭೋಜನಾಲಯ ಹಾಗೂ 6 ಲಕ್ಷ ರೂಪಾಯಿ ಮೊತ್ತದ ಹೈಟೆಕ್ ಶೌಚಾಲಯ ಕಾಮಗಾರಿ ಕೆಲಸ ಮುಗಿದು ಮೂರು ವರ್ಷ ಮುಗಿತಾ ಬಂದರು ಇನ್ನು ಯಾವುದೇ ಬಿಲ್ ಮಾಡಿಲ್ಲವೆಂದು ರವಿಕಾಂತ ದೇಸಾಯಿ ಮತ್ತು ಅಮರೇಶ ಶಂಕರನಗರಕ್ಯಾಂಪ ಭೋಜನಾಲಯಕ್ಕೆ ಬೀಗ ಹಾಕಿದ ಘಟನೆ ಜರುಗಿದ್ದು ವಿದ್ಯಾರ್ಥಿಗಳು ಬಯಲಿನಲಿ ಊಟ ಮಾಡುವ ಪ್ರಸಂಗ ಬಂತು

ಗುತ್ತಿಗೆದಾರರು ಪಿಡಿಒ ವಿಶ್ವನಾಥ ಹೂಗಾರ, ತಾಲೂಕ ಪಂಚಾಯತಿ ಇಒ ಅಮರೇಶ ಅವರಿಗೆ ಹತ್ತಾರು ಸಾರಿ ಹೇಳಿದರು ಮನವಿ ಮಾಡಿದರು ಇದುವರೆಗೂ ಒಂದು ರೂಪಾಯಿ ಬಿಲ್ಲು ಮಾಡಿಲ್ಲವೆಂದು ಇಂದು ಭೋಜನಾಲಯಕ್ಕೆ ಬೀಗ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭೋಜನಾಲಯಕ್ಕೆ ಬೀಗ ಹಾಕಿರುವುದರಿಂದ ವಿದ್ಯಾರ್ಥಿ ಗಳು ಬಯಲಿನಲ್ಲಿಯೆ ಊಟ ಮಾಡಿದರು

ಈ ಸಮಸ್ಯೆಯ ಕುರಿತು ಸ್ವತಃ ನೋವನ್ನು ಹಂಚಿಕೊಂಡಿದ್ದು ಸಾಕ್ಷಿಯಾಗಿದ್ದು ತೀವ್ರ ನಾಚಿಕೆಯ ಸಂಗತಿಯಾಗಿದೆ ಎಂದು ಗ್ರಾಮಸ್ಥರು ತೀವ್ರವಾಗಿ ಖಂಡಿಸಿದರು. ಈ ಬಗ್ಗೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕಾಂತ್ ದೇಸಾಯಿ ಮಾತನಾಡಿ ಪಿಡಿಒ ವಿಶ್ವನಾಥ ಹೂಗಾರ ಅವರಿಗೆ ಮತ್ತು ತಾಲೂಕು ಪಂಚಾಯತಿ ಇಓ ಅವರಿಗೆ ಬಿಲ್ ಕುರಿತು ನೂರು ಸಲ ಗಮನಕ್ಕೆ ತಂದರು ಕಿಂಚತ್ತು ಕಾಳಜಿ ವಹಿಸಲಿಲ್ಲ ನಾವು ಸಾಲ ಮಾಡಿ ಕೆಲಸ ಮಾಡಿಸಿದ್ದೇವೆ ಈಗ ಏನು ಮಾಡಬೇಕು ಎಂಬ ನೋವನ್ನು ಹೇಳಿದರು.

ಹಾಗೆ ತಾಲೂಕು ಪಂಚಾಯತಿ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಶಿವಾನಂದ ರೆಡ್ಡಿ ಮಾತನಾಡಿ ಈ ಎರಡು ಕಾಮಗಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ ಈ ಬಗ್ಗೆ ಪಿಡಿಒ ಅವರಿಗೆ ದಾಖಲೆಗಳನ್ನು ಕೊಡಿ ಎಂದು ಸ್ವತ ನಾನೇ ಹೇಳಿದ್ದು ಆದರೆ ಪಿಡಿಓ ನಿರ್ಲಕ್ಷ ಮಾಡುತ್ತಿದ್ದಾರೆ ಎಂದರು
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಉಮೇಶ ದೊಡ್ಡಮನಿ, ವೀರನಗೌಡ ಮಾಲಿಪಾಟೀಲ್, ಅಮರೇಶ್ ಮಲ್ಲಟ, ಚಂದಪ್ಪ ಬೋವಿ, ಲಕ್ಷ್ಮಣ್ ನಾಯಕ ಇನ್ನಿತರ ಇದ್ದರು.

Leave a Reply

Your email address will not be published. Required fields are marked *