ಮಾನ್ವಿ : ಬೇಸಿಗೆ ಕಾಲದ ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ ಎಚ್. ಶಿವರಾಮೇಗೌಡ ಬಣ ಕನ್ನಡ ಪರ ಸಂಘಟನೆಗಳ ಒಕ್ಕೂಟ ತಾಲೂಕು ಘಟಕ ಮಾನ್ವಿ ವತಿಯಿಂದ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಲಾಯಿತು. ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ನರಸಿಂಹ ಎನ್.ಹೆಚ್.ಪಿ., ಬೇಸಿಗೆ ಅವಧಿಯಲ್ಲಿ ಸಾರ್ವಜನಿಕರಿಗೆ ತಂಪು ನೀಡುವ ಉದ್ದೇಶದಿಂದ ವಾರದಲ್ಲಿ ಒಂದು ದಿನ ಮಜ್ಜಿಗೆ ವಿತರಣೆ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನ್ವಿ ಪಿಐ ಸೋಮಶೇಖರ್ ಕೆಂಚರೆಡ್ಡಿ ಮತ್ತು ಇಂಡಿಯನ್ ಪೆಟ್ರೋಲ್ ಬಂಕ್ ಮಾಲಕರಾದ ಸಂತೋಷ್ ಕುಮಾರ್ ಜೈನ್ ಸಮಾಜದಲ್ಲಿ ಸಾರ್ವಜನಿಕ ಸೇವೆ ಅತ್ಯಂತ ಮಹತ್ತರ ಕಾರ್ಯವಾಗಿದ್ದು, ಈ ರೀತಿಯ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಕನ್ನಡ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ನಗರ ಘಟಕ ಗೌರವ ಅಧ್ಯಕ್ಷ ಶಾಂತಕುಮಾರ್ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಗೌರವಾಧ್ಯಕ್ಷ ಎಲ್ಲಪ್ಪ ನೆಲಗಲ್, ವಿ.ಎಸ್.ಎಚ್.ಪಿ ವಿಜಯಕುಮಾರ್, ಇಬ್ರಾಂಪುರ್ ಬಸನಗೌಡ ಆಲ್ದಾಳ, ಚೇತನ್ ಕುಮಾರ್, ಚಂದ್ರ ಮುದ್ಲಾಪುರ್, ರವಿ ಮದ್ಲಾಪುರ್, ಶಿವಕುಮಾರ್, ಆನಂದ್ ಸ್ವಾಮಿ, ಅನಿಲ್ ಕುಮಾರ್, ವಿನಯ ಕುಮಾರ್ ಬಿ.ಎಂ., ಸನಂತ್ ಕುಮಾರ್, ಹರೀಶ್ ಕಾತ್ರಿಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

