ಕಾರುಣ್ಯಾಶ್ರಮಕ್ಕೆ ಡಾ. ರಾಜಕುಮಾರ ಕುಟುಂಬ ಭೇಟಿ ನೀಡುವ ಸಾಧ್ಯತೆ ಇದೆ -ಡಾ. ಚನ್ನಬಸವ ಸ್ವಾಮಿ ಹಿರೇಮಠ
ಕರುನಾಡಿನ ಕಾರುಣ್ಯ ಮೂರ್ತಿಯಾಗಿದ್ದರು ಡಾ. ಪುನೀತ್ ರಾಜಕುಮಾರ್ ಅವರು – ಡಾ. ಚನ್ನಬಸವ ಸ್ವಾಮಿ ಹಿರೇಮಠ
ಸಿಂಧನೂರು – ಕರ್ನಾಟಕ ರತ್ನ ದಿ.ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ಶ್ರೀ ಸದ್ಗುರು ತಿಪ್ಪಯ್ಯ ಆಶ್ರಮ ಕೂಸನೂರ. ಕೋಡಿಹಳ್ಳಿ ಕಲಾ ಸೇವಾ ಸಂಸ್ಥೆ (ರಿ)ತಿಳವಳ್ಳಿ ತಾ. ಹಾನಗಲ್ ಜಿ. ಹಾವೇರಿ ಹಾಗೂ ಶ್ರೀ ವರಸಿದ್ಧಿ ವಿನಾಯಕ ಯುವ ಕಲಾ ಸಂಘ (ರಿ) ಕಾಲ್ವೆ ಕಲ್ಲಾಪುರ ಮತ್ತು ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ (ರಿ) ಸುಕ್ಷೇತ್ರ ಮೈಲಾರ ತಾ. ಹೂವಿನಹಡಗಲಿ ಜಿ. ವಿಜಯನಗರ ಮಾತೋಶ್ರೀ ಶ್ರೀ ಲಿಂಗೈಕ್ಯ ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ್ ಬೆಳಗಾಲಪೇಟೆ. ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ)ಸಿಂಧನೂರು. ಸ್ವಾಮಿ ಚಾರಿಟೇಬಲ್ ಟ್ರಸ್ಟ್ (ರಿ) ಕರಡಕಲ್ ಲಿಂಗಸೂಗೂರು ಹಾಗೂ ಅಪ್ಪು ಅಭಿಮಾನಿಗಳು ಸಿಂಧನೂರು ಇವರುಗಳ ಸಯುಕ್ತಾಶ್ರಯದಲ್ಲಿ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಿಂಧನೂರು ತಾಲೂಕ ಉಮಲೂಟಿ ಗ್ರಾಮದ ಜಾಗೀರ್ ದಾರ ಕುಟುಂಬದಿಂದ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸಿ ಆಶ್ರಮದ ಆಶ್ರಯದಾತರುಗಳ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿಯ ಕೋಡಿಹಳ್ಳಿ ಕಲಾ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಪುಟ್ಟರಾಜ ಕೋಡಿಹಳ್ಳಿ ಮಾತನಾಡಿ ಅಪ್ಪು ಅವರು ನಮ್ಮ ನಾಡು ಕಂಡಂತಹ ಕರುಣೆಯ ಮೂರ್ತಿಗಳಾಗಿದ್ದರು. ಇವರ ಆದರ್ಶ ಸಮಾಜದಲ್ಲಿ ಹಲವಾರು ಯುವಕರು ಮೈಗೂಡಿಸಿಕೊಂಡು ಅನೇಕ ಜನ ಪರ ಕಾರ್ಯಗಳನ್ನು ಮಾಡುತ್ತಿರುವುದು ಮಾನವೀಯತೆಗೆ ಮೆರಗು ತಂದಿದೆ ಎಂದು ಮಾತನಾಡಿದರು. ನಂತರ ಆಶ್ರಮದ ಕಾರ್ಯಧ್ಯಕ್ಷರಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಇಂದು ನಮ್ಮ ಕರುಣೆಯ ಕಾರುಣ್ಯ ಕುಟುಂಬದಲ್ಲಿ ಅಪ್ಪು ಅವರ ಜನ್ಮದಿನ ಕಾರುಣ್ಯ ಕುಟುಂಬದ ಹಬ್ಬದಂತಿದೆ ಕರುನಾಡಿನ ಕಾರುಣ್ಯ ಮೂರ್ತಿಯಾಗಿದ್ದರು ಡಾ. ಪುನೀತ್ ರಾಜಕುಮಾರ್ ಅವರು ಅವರ ಆದರ್ಶ ವ್ಯಕ್ತಿತ್ವವನ್ನು ನಾವು ಮೈಗೂಡಿಸಿಕೊಂಡು ನಮಗಾದಷ್ಟು ನಾವು ಸಮಾಜಕ್ಕೆ ಸೇವೆ ಅರ್ಪಿಸುತ್ತಿದ್ದೇವೆ. ನಾವು ಒಮ್ಮೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿದ್ದು ನಮ್ಮ ಕಾರುಣ್ಯ ಶ್ರಮಕ್ಕೆ ಡಾ. ರಾಜಕುಮಾರ್ ಕುಟುಂಬ ಭೇಟಿ ನೀಡುವ ಸಾಧ್ಯತೆ ಇದೆ. ಸುಮಾರು ಎರಡು ಮೂರು ಕಾರ್ಯಕ್ರಮಗಳಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ನಮ್ಮನ್ನು ಗೌರವಿಸಿ ಆಶ್ರಮಕ್ಕೆ ಒಮ್ಮೆ ಕುದ್ದು ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರ ಆಗಮನಕ್ಕಾಗಿ ಕಾರುಣ್ಯ ಕುಟುಂಬ ಕಾಯುತ್ತಿದೆ. ನಮ್ಮ ಅಪ್ಪು ಅವರ ಈ ಜನ್ಮದಿನದ ಕಾರ್ಯಕ್ರಮದಲ್ಲಿ ಅವರ ಕುಟುಂಬಕ್ಕೆ ಆಯಸ್ಸು, ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಸಕಲ ದೇವಾನುದೇವತೆಗಳು ಕರುಣಿಸಲಿ ಎನ್ನುವ ವಿಶೇಷ ಪ್ರಾರ್ಥನೆಯೊಂದಿಗೆ ಅಪ್ಪು ಅವರಿಗೆ ಜನ್ಮದಿನದ ಶುಭಾಶಯಗಳು ಕೋರಿದ್ದೇವೆ ಎಂದು ಮಾತನಾಡಿ ಆಶ್ರಮದ ಆಶ್ರಯದಾತರುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಟ್ಟರಾಜ ಕೋಡಿಹಳ್ಳಿ ಸಂಸ್ಥಾಪಕರು ಕೂಡಿಹಳ್ಳಿ ಕಲಾ ಸೇವಾ ಸಂಸ್ಥೆ ತಿಳವಳ್ಳಿ. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ.ಸಿದ್ದಯ್ಯ ಸ್ವಾಮಿ. ಮರಿಯಪ್ಪ.ಮೀನಾಕ್ಷಮ್ಮ. ಲಕ್ಷ್ಮಿ. ಅನೇಕರು ಉಪಸ್ಥಿತರಿದ್ದರು


