ಲಿಂಗಸಗೂರು : ಮಾ.17 ವಿವಿಧ ಸಮುದಾಯಗಳ ಮಠಗಳನ್ನು ಸ್ಥಾಪಿಸಿ ಸರ್ವರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟು ಮನುಕುಲದ ಉದ್ದಾರಕ್ಕಾಗಿ 18 ಮಠಗ ಳನ್ನು ಕಟ್ಟಿ ಭಾವೈಕ್ಯತೆಗೆ ಅಡಿಪಾಯ ಹಾಕಿದವರು ಶ್ರೀ ಜಗದ್ಗುರು ರೇಣುಕಾ ಚಾರ್ಯರು ಎಂದು ಶ್ರೀ ಮುರುಗೇಂದ್ರ ಶಿವಯೋಗಿಗಳು ಸಿದ್ದರಾಮೇಶ್ವರ ಗುರುಮಠ ಯರಡೋಣ ಇವರು ಹೇಳಿದರು.

ಅವರಿಂದು ಪಟ್ಟಣದ ಈಶ್ವರ ದೇವಸ್ಥಾ ನದಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಹಾಗೂ ಯುಗಮಾನೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಸ್ತ್ರೀ ಪುರುಷರಿಗೆ ಎಲ್ಲಾ ವರ್ಗ ವರ್ಣದವರಿಗೆ ದೇವರ ಪೂಜೆಗೆ ಅವಕಾಶ ಕಲ್ಪಿಸಿದವರೇ ರೇಣು ಕಾಚಾರ್ಯರು. ವಿರೋಧ ರಹಿತ ಶೈವ ಧರ್ಮವೇ ವೀರಶೈವ ಧರ್ಮ ಎಂದು ಸಾರಿದವರು.

ನಾವು ರೇಣುಕಾಚಾರ್ಯರನ್ನು ವಿಜೃಂಭಿಸುವುದಕ್ಕಿಂತ ಅವರ ಆದರ್ಶ ಗಳನ್ನ ಅನುಸರಿಸುತ್ತಾ ಅವರ ತತ್ವ ಸಿದ್ಧಾಂತಗಳನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ರಚಿಸಿದ 10 ಸಿದ್ಧಾಂತದ ಸೂತ್ರ ಗುರುವು ತನ್ನವರೇ ನಾನ ಜಗತ್ತಿನಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಬೋಧಿಸಿದ ಏಕೈಕ ಧರ್ಮ ಅದು ಜಗದ್ಗುರು ರೇಣುಕಾಚಾರ್ಯರು
ಸ್ಥಾಪಿಸಿದ ವೀರಶೈವ ಧರ್ಮ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಜಂಗಮ ಸಮಾಜದ ತಾಲೂಕ ಅಧ್ಯಕ್ಷ ಪ್ರಭು ಸ್ವಾಮಿ ಅತ್ತನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರು ಮಾಣಿಕೇಶ್ವರಿ ಮಠ ಲಿಂಗಸಗೂರು, ಶರಣಯ್ಯ ತಾತ ಹುನುಕುಂಟಿ, ಕೇಂದ್ರದ ಮಾಜಿ ಸಚಿವರಾದ ಬಸವರಾಜ ಪಾಟೀಲ್ ಅನ್ವರಿ, ಮಹದೇವಯ್ಯ ಸ್ವಾಮಿ ಗೌಡೂರ, ವೀರಭದ್ರಯ್ಯ ಸ್ವಾಮಿ ಯಲಗಲದಿನ್ನಿ, ಅಮರೇಶ್, ಕುಮಾರಸ್ವಾಮಿ ಹಿರೇಮಠ, ಅಮರೇಶ್ ವೀರಾಪುರ್, ಜಗನ್ನಾಥ್ ಚಿತಾಪುರ, ಮಲ್ಲಪ್ಪ ಹೊಗಾರ್ ಸೇರಿದಂತೆ ಇತರರಿದ್ದರು .

Leave a Reply

Your email address will not be published. Required fields are marked *