ಲಿಂಗಸಗೂರ. ಮಾ.17 -ನಿರಂತರ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾಗುವದು ಮುಖ್ಯವಲ್ಲ ಪರೀಕ್ಷೆಯಲ್ಲಿ ಪಾಲ್ಗೊಳ್ಳುವುದು ಬಹು ಮುಖ್ಯ ಮಕ್ಕಳ ಭೌತಿಕ,ಮಾನಸಿಕ, ಖಿನ್ನತೆಯಿಂದ ಹೊರಬರಲು ಇಂತಹ ಪರೀಕ್ಷೆ ಬಹು ಮುಖ್ಯವಾಗಿದೆ ಎಂದು ನ್ಯೂಸ್ 18 ವರದಿಗಾರ ವಿಶ್ವನಾಥ್ ಹೂಗಾರ್ ಹೇಳಿದರು ಪಟ್ಟಣದ ಜ್ಞಾನಾಮೃತ ಪಬ್ಲಿಕ್ ಶಾಲೆಯಲ್ಲಿ ರವಿವಾರ ನಡೆದ 2025-26 ನೇ ಸಾಲಿನ ವಿದ್ಯಾರ್ಥಿಗಳಿಂದ 4 ರಿಂದ 9 ನೇ ತರಗತಿವರೆಗೆ ಟ್ಯಾಲೆಂಟ್ ಅವಾರ್ಡ್, ಹಾಗೂ ಬೇಸಿಗೆ ಶಿಬಿರ ಸೇರಿದಂತೆ ನಿರಂತರ ಕಲಿಕೆಗಾಗಿ ಮಕ್ಕಳನ್ನು ಉತ್ತೇಜಿಸುವ ಈ ಒಂದು ಸ್ಪರ್ಧಾತ್ಮಕ ಪರೀಕ್ಷೆ ಬಹು ಸರಳತೆಯಿಂದ ಈ ಪರೀಕ್ಷೆ ಬರೆದಿದ್ದು, ಟ್ಯಾಲೆಂಟ್ ಅವಾರ್ಡ್ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ ಮುರುಘಂದ್ರ ಶಿವಯೋಗಿಗಳು ಶ್ರೀ ಸಿದ್ದರಾಮೇಶ್ವರ ಗುರುಮಠ ಸುಕ್ಷೇತ್ರ ಯರಡೋಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ. ನಂತರ ಮಾತನಾಡಿದ ಅವರು ತಾಲೂಕಿನ ಇಂತಹ ಪರೀಕ್ಷೆಯನ್ನು ನಡೆಸುತ್ತಿರುವ ಜ್ಞಾನಾಮೃತ ಪಬ್ಲಿಕ್ ಶಾಲೆ , ನಿಜಕ್ಕೂ ಶ್ಲಾಘನೀಯ. ಪರೀಕ್ಷೆಯಲ್ಲಿ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗಿದ್ದು ಪಾಲಕರು ತಮ್ಮ ಮಕ್ಕಳನ್ನ ಈ ಪರೀಕ್ಷೆಯಲ್ಲಿ ತಮ್ಮ ಜ್ಞಾನಾರ್ಜನೆಗೆ ಕಳಿಸಿದ್ದು ಬಹಳ ಹೆಮ್ಮೆಯ ವಿಷಯವೆಂದು ಅವರು ಹೇಳಿದರು. ಮಕ್ಕಳ ಪ್ರವೇಶ ಪರೀಕ್ಷೆಯಲ್ಲಿ 4-ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಈ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ಸುಮಾರು 450 ಜನ ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 4 ನೇ ತರಗತಿಯಿಂದ 6 ನೇ ತರಗತಿ ವಿದ್ಯಾರ್ಥಿಗಳಲ್ಲಿ ಟಾಪ್ 10 ವಿದ್ಯಾರ್ಥಿಗಳ ಹತ್ತು ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, 7 ನೇ ತರಗತಿಯಿಂದ 9 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಟಾಪ್ ಟೆನ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು. ಅದರಲ್ಲಿ ಪ್ರಥಮ ದ್ವಿತೀಯ ತೃತೀಯ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಿದ್ದು. 5 ನೇ ತರಗತಿ ವಿದ್ಯಾರ್ಥಿಗಳಾದ ತನುಶ್ರೀ ಪವಾರ್. ಪ್ರಥಮ ಬಹುಮಾನ ಪಡೆದಿದ್ದು.
ಪ್ರದೀಪ್ ರಾಮಪ್ಪ, ದ್ವಿತೀಯ ಬಹುಮಾನ ಪಡೆದಿದ್ದು. ದ್ವಿತೀಯ ಬಹುಮಾನವನ್ನು ತನ್ವಯ ಗವಿಸಿದ್ದೇಶ್ವರ. ತೃತೀಯ ಬಹುಮಾನವನ್ನು ಪಡೆದಿದ್ದಾರೆ. 8 ನೇ ತರಗತಿ ವಿದ್ಯಾರ್ಥಿಯಾದ ಅನನ್ಯ ಚವಾಣ್ ಪ್ರಥಮ ಪ್ರವಮಾನ ಪಡೆದದ್ದು. ದ್ವಿತೀಯ ಬಹುಮಾನವನ್ನು 9 ನೇ ತರಗತಿ ವಿದ್ಯಾರ್ಥಿ ಬಸಲಿಂಗಮ್ಮ ಪಡೆದಿದ್ದು. ತೃತೀಯ ಬಹುಮಾನ ಸದಾನಂದ ಪ್ರಕಾಶ್ ಪಡೆದಿದ್ದು. ಉಳಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವನ್ನ ಶಾಲೆಯ ಆಡಳಿತ ಮಂಡಳಿ ನೀಡಿದೆ. ಮತ್ತು ನಿರಂತರ ವಿದ್ಯಾರ್ಥಿಗಳ ಪ್ರವೇಶ ರೀತಿಯಲ್ಲಿ ಟಾಪ್ ಟೆನ್ ವಿದ್ಯಾರ್ಥಿಗಳ ಶೇಕಡ 10% ವಿನಾಯಿತಿ ನೀಡಲಾಗುವುದೆಂದು ಸಂಗೀತ ಎಂ ಮಾಟೂರು ಮುಖ್ಯೋಪಾಧ್ಯಾಯರು ಜ್ಞಾನಾಮೃತ ಪಬ್ಲಿಕ್ ಶಾಲೆ ರವರು ಹೇಳಿದರು. ಪ್ರಸ್ತಾವಿಕವಾಗಿ ವೀರೇಶ್ ಗೌಡರು ಮಾತನಾಡಿ ಈ ಶಾಲೆಯ ವೈಶಿಷ್ಟತೆ ತಾಲೂಕಿನಲ್ಲಿ ಹೆಮ್ಮರವಾಗಿ ಬೆಳೆಯಲು ಸಹಕರಿಸುತ್ತಿರುವ ತಾಲೂಕಿನ ಪ್ರತಿಯೊಬ್ಬ ಪಾಲಕರ ಹಾಗೂ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ ಇದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಶರಣಪ್ಪ ಸಿ ನಿವೃತ್ತ ಪ್ರಾಚಾರ್ಯರು ಹಾಗೂ ಆಡಳಿತ ಅಧಿಕಾರಿ ವಿಸಿಬಿ ಕಾಲೇಜ್ ಲಿಂಗಸಗೂರ. ಶಾಲೆಯ ಅಧ್ಯಕ್ಷೆ ನೀಲಮ್ಮ ಸೂಗಪ್ಪ ಅಂಗಡಿ. ವಿನಯ್ ಕುಮಾರ್ ಗಣಾಚಾರಿ ಉಮಾಮಹೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಚಿದಾನಂದ ಶಿಕ್ಷಕರು ಲಿಂಗಸಗೂರ ನೆರವೇರಿಸಿದರು.

