ಕವಿತಾಳ : ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಅಗತ್ಯ ಕ್ರಮಗಳನ್ನು ವಹಿಸುವಂತೆ ಇಂದು ಕವಿತಾಳ ತಾಲೂಕು ಹೋರಾಟ ಸಮಿತಿಯು ಶ್ರೀ ಅಭಿನವ ಸಿದ್ದಿ÷್ಲಂಗ ಮಹಾಸ್ವಾಮಿ ಶ್ರೀ ಕಲ್ಮಠ ಅವರ ನೇತೃತ್ವದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರನ್ನು ರಾಯಚೂರಿನ ಅವರ ನಿವಾಸದಲದಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಕಲ್ಮಠ ಶ್ರೀ ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು ಸಚಿವರೋಂದಿಗೆ ಚರ್ಚೆ ನೆಡೆಸಿ, ಕವಿತಾಳ ಪಟ್ಟಣವನ್ನು ಶೀಘ್ರದಲ್ಲೇ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು, ಜೊತೆಗೆ ಪಟ್ಟ÷್ಣದ ಕೆರೆ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ವಿಸ್ತರಣೆ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತಂದರು.
ಸಚಿವರು ಮನವಿಯನ್ನು ಸ್ವೀಕರಿಸಿ ಸದ್ಯಕ್ಕೆ ತಾಲೂಕು ರಚೆನೆಯ ಕುರಿತಂತೆ ಸರ್ಕಾರದ ಮುಂದೆ ಯಾವುದೆ ಹೊಸ ತಾಲೂಕು ರಚನೆಯ ಶಿಫಾರಸ್ಸು ಮತ್ತು ಪ್ರಸ್ತಾವನೆಗಳು ಇಲ್ಲ, ಅಂತಹ ಸಂದರ್ಬ ಬಂದಾಗ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವೆ ಮತ್ತು ನಾನೇ ಮುಂದೆ ನಿಂತು ನಿಮ್ಮೆಲ್ಲರನ್ನು ಒಳಗೊಂಡು ಹೋರಾಟ ಮಾಡುತ್ತೆನೆಂದು ಸಕಾರಾತ್ಮಕವಾಗಿ ಸ್ಪಂಧಿಸಿದರು.
ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ, ವಿವಿಧ ಸಂಘಟನೆಗಳ ಮುಖಂಡರು,ಯುವಕರು ಹಾಗೂ ಹೋರಾಟ ಸಮಿತಿಯ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

