ಗುಡ್ಡಗಾಡು ಪ್ರದೇಶ ಮತ್ತು ಸಂಪರ್ಕ ರಹಿತ ಪ್ರದೇಶ ಗಳಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ಆರೋಗ್ಯ ಸೇವೆಯ ಜೊತೆಗೆ ಗರ್ಭಿಣಿಯರ ಶಿಶುಗಳ ಆರೋಗ್ಯದ ಕುರಿತು ಕಿಶೋರಿಯರು ಮತ್ತು ವೃದ್ಧರ ಆರೋಗ್ಯ ಪರಿಶೀಲನೆ ನಡೆಸುವುದು ಮತ್ತು ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆ, ಪೌಷ್ಟಿಕ ಆಹಾರದ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಜೊತೆಗೆ ಆರೋಗ್ಯ ಸೇವೆ ಹಾಗೂ ಆರೋಗ್ಯ ಜಾಗೃತಿ ಮೂಡಿಸುವುದು ಗಂಡಾಂತರ ಗರ್ಭಿಣಿ ಹಾಗೂ ಗರ್ಭಿಣಿಯರ ರಕ್ತ ಪರೀಕ್ಷೆ ಸೂಕ್ತ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಗೀತಾ ಹಿರೇಮಠ ಆರೋಗ್ಯ ಸಲಹೆಯನ್ನು ನೀಡಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ತಾಲೂಕು ಅರೋಗ್ಯಾಧಿಕಾರಿಗಳ ಕಾರ್ಯಲಯ ಸಿಂಧನೂರು, ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಹೊಸಳ್ಳಿ.ಕೆ, ಗ್ರಾಮದಲ್ಲಿ ಇಂದು ಆರೋಗ್ಯ ಸೇತು ಕಾರ್ಯಕ್ರಮದ ಅಡಿಯಲ್ಲಿ ಮಾತನಾಡಿದರು. ನಂತರ ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ, ಬಿಪಿ, ಶುಗರ್, ಅಸಾಂಕ್ರಾಮಿಕ ರೋಗಗಳ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಯಿತು.
ಈ ಸಂದರ್ಭದಲ್ಲಿ: ಪವಿತ್ರ ಸಿಎಚ್ಒ, ಆಂಜನೇಯ, ಆಶಾ ಕಾರ್ಯಕರ್ತೆ ಹನುಮಂತಿ, ಅಂಗನವಾಡಿ ಕಾರ್ಯಕರ್ತೆ ಮಗ್ಗೆಮ್ಮ, ಮೈಬೂಬ್ ಸಾಬ್, ಗರ್ಭಿಣಿ ತಾಯಂದಿರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

