ಸಿಂಧನೂರು ನಗರದ ಕೇಂದ್ರ ಬಸ್ ನಿಲ್ದಾಣದ ಒಳಗೆ ಬರುವ ಸ್ಥಳದಲ್ಲಿಯೇ ಒರ್ವ ಮಹಿಳೆಗೆ ಸರ್ಕಾರಿ ಬಸ್ ಡಿಕ್ಕಿ ಒಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ
ಬಸ್ಸಿನ ಗಾಲಿಗೆ ಸಿಲುಕಿ ಮಹಿಳೆ ದೇಹವು ಛಿದ್ರವಾಗಿದೆ.
ಕಾರಟಗಿ ತಾಲೂಕಿನ ಬೆವಿನಾಳ ಗ್ರಾಮದ ಈರಮ್ಮ (38 ) ಗಂ.ಬಸಣ್ಣ ಎಂದು ತಿಳಿದು ಬಂದಿದೆ.
ರಾಯಚೂರಿನಿಂದ ಬಳ್ಳಾರಿಗೆ ತೆರಳುವ ಬಸ್ ನಂ- (ಕೆ.ಎ.361415) ಡಿಕ್ಕಿ ಒಡೆದಿದೆ. ಚಾಲಕ ಹುಲುಗಪ್ಪ ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಸಂಚಾರಿ ಪಿಎಸ್‌ಐ ಚಂದ್ರಶೇಖರ ಸಿಬ್ಬಂದಿಗಳೊಂದಿಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಿ ಕೊಡಲಾಯಿತು. ಘಟನೆ ನಡೆದ ಜಾಗದ ಪಕ್ಕದಲ್ಲೇ ಒಂದು ಬದಿಯಲ್ಲಿ ಆಟೋ ರಿಕ್ಷಾಗಳು, ಇನ್ನೊಂದು ಬದಿಯಲ್ಲಿ ಬಂಡಿಗಳ ನಿಲುಗಡೆಯಿಂದಾಗಿ ಬಸ್ ಸಂಚಾರಕ್ಕೆ ಅಡ್ಡಿಯಾಗಿ ರಸ್ತೆ ಇಕ್ಕಟ್ಟಾಗಿ ಹೋಗಿದೆ ಇದರಿಂದಾಗಿ ಇಂತಹ ಅವಘಡಗಳು ಇಲ್ಲಿ ತುಂಬಾ ಆಗುತ್ತಿವೆ ಎಂಬುದು ಸಾರ್ವಜನಿಕರ ಮಾತು.
ಈ ಮುಂಚೆ ಇದೇ ಸ್ಥಳದಲ್ಲಿ ವಿರುಪಾಪುರದ ವ್ಯಕ್ತಿಯೊಬ್ಬರು ಅದೇ ರೀತಿಯಲ್ಲಿ ಸಾವನ್ನಪ್ಪಿದ್ದ, ಇಕ್ಕಟ್ಟಾದ ರಸ್ತೆ ಅಗಲು ಮಾಡಲು ಪೊಲೀಸರು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಪರೀಕ್ಷೆ ನಡೆಸಲು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ನೂಕು ನುಗ್ಗಲು ನಿಂದಾಗಿ ಸಂಚಾರವು ಕೆಲವೊತ್ತು ಅಸ್ತವ್ಯಸ್ತವಾಗಿತ್ತು.

