ಮುದ್ದೇಬಿಹಾಳ. ಜನಾಬ ಅಯ್ಯುಬ ಮದನ್ ಸಾಬ್ ಮನಿಯಾರ್ ರವರು ತಮ್ಮ ದಿವಂಗತ ತಂದೆ ತಾಯಿಯ ಸ್ಮರಣಾರ್ಥ ರಂಜಾನ್ ಹಬ್ಬದ ಪ್ರಯುಕ್ತ ನಗರದ ಬಡ ಕುಟುಂಬಗಳಿಗೆ ಈದ್ ಕಿಟ್ ಗಳನ್ನು ಇಂದು ಮಂಗಳವಾರ ದಿನಾಂಕ 17 ಮಾರ್ಚ್ 2026 ಸಮಯ ಬೆಳಗ್ಗೆ 10 ಗಂಟೆಗೆ. ನಗರದ ಹುಡುಕೋ ಕಾಲೋನಿಯಲ್ಲಿರುವ ತಮ್ಮ ನಿವಾಸದ ಮುಂದೆ ಈದ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನಿಯಾರ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜನಾಬ ಅಯ್ಯುಬ ಮನಿಯಾರ ರವರು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಆಲಮೇಲದ ಶ್ರೀ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು, ಶಾಸಕ ಸಿಎಸ್ ನಾಡಗೌಡ, ಉಪನ್ಯಾಸಕರಾದ ಶ್ರೀ ಲಾಲಹುಸೇನ ಕಂದಗಲ್, ತಹಸಿಲ್ದಾರ್ ಕೀರ್ತಿ ಚಾಲಕ್ , ಸಿ.ಪಿ.ಐ ಶ್ರೀ ಮೊಹಮ್ಮದ್ ಫಸಿಯುದ್ದೀನ್, ಶ್ರೀ ಬಾಬುಗೌಡ ಬಿರಾದಾರ, ಶ್ರೀ ಶಂಕರಗೌಡ ಹೊಸಮನಿ, ಶ್ರೀ ರೂಪಸಿಂಗ್ ಲೋಣಾರಿ, ಶ್ರೀಮತಿ ಸಂಗಮ್ಮ ದೇವರಹಳ್ಳಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

