ರಾಯಚೂರು: ಪಂಡಿತ್ ಸಿದ್ದರಾಮ ಜಂಬಲದಿನಿ ರಂಗಮಂದಿರದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ರಾಯಚೂರು ಜಿಲ್ಲಾ ಘಟಕದ ವತಿಯಿಂದ “ರೈತರಿಗೆ ಶರಣರಿಂದ ಹಿತನುಡಿ, ಕೃಷಿ ತಂತ್ರಜ್ಞರಿಂದ ಸಲಹೆ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣೆ” ಶಿಬಿರವನ್ನು ಭರ್ಜರಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವು ರಾಯಚೂರಿನ Dr. B. R. Ambedkar Circle ನಲ್ಲಿ ಶ್ರೀ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಆರಂಭವಾಯಿತು. ಸಣ್ಣ ನೀರಾವರಿ ಸಚಿವರಾದ N. S. Boseraju ಅವರು ಎತ್ತಿನ ಬಂಡಿ ಚಾಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಸಂವಿಧಾನ ಶಿಲ್ಪಿ B. R. Ambedkar ಅವರ ಪ್ರತಿಮೆಗೆ ರಾಜ್ಯ ಅಧ್ಯಕ್ಷರಾದ ಶಾಂತಗೌಡ ಚನ್ನಪಟ್ಟಣ, ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಎ. ಪಾಟೀಲ್, ಜಿಲ್ಲಾ ಅಧ್ಯಕ್ಷರಾದ ಇಂದ್ರಜೀತ್ ಯಾದವ್, ಜಿಲ್ಲಾ ಉಪಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್, ಜಿಲ್ಲಾ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ಯಾದವ್ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ರಂಗಮಂದಿರಕ್ಕೆ ತೆರಳಿ ಕಾರ್ಯಕ್ರಮವನ್ನು ಮುಂದುವರಿಸಿದರು.

ಕಾರ್ಯಕ್ರಮದಲ್ಲಿ ಶ್ರೀದೇವಿ ಆರ್. ನಾಯಕ್ ಹಾಗೂ ರೂಪ ಶ್ರೀನಿವಾಸ್ ನಾಯಕ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಪಾಟೀಲ್ ಮತ್ತು ಮಹಾದೇವಪ್ಪ ಯಾದವ್ ಅವರು ನೇಗಿಲ ಪೂಜೆ ನೆರವೇರಿಸಿದರು. ಆನಂದ ಕುಮಾರ್ ಮಡಿವಾಳ ಹಾಗೂ ಸುರೇಶ್ ಪೂಜಾರಿ ಅವರು ಭಾರತದ ಮಾಜಿ ಪ್ರಧಾನಿ Chaudhary Charan Singh ಹಾಗೂ ರೈತ ಚಳವಳಿಯ ಪ್ರಮುಖ ನಾಯಕ M. D. Nanjundaswamy ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.

ರೈತನ ಶ್ರಮವೇ ದೇಶದ ಆಧಾರ

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಇಂದ್ರಜೀತ್ ಯಾದವ್ ಅವರು,
“ರೈತರು ಶ್ರಮಪಟ್ಟು ಬೆಳೆದರೆ ಮಾತ್ರ ವಿಶ್ವಕ್ಕೆ ಅನ್ನ ಸಿಗುತ್ತದೆ. ರೈತನ ಶ್ರಮವೇ ದೇಶದ ಆಧಾರ. ರೈತನಿಗೆ ಬೆಂಬಲ ಸಿಕ್ಕಾಗ ಮಾತ್ರ ಅವನು ಸಂತೋಷದಿಂದ ಬದುಕಲು ಸಾಧ್ಯ” ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ಮಾತನಾಡಿ, ಫೆಬ್ರವರಿ 9ರಂದು ಸಂಘಟನೆಯಿಂದ “ರೈತರ ನಡೆ ಆಲಮಟ್ಟಿ ಕಡೆ” ಎಂಬ ಹೋರಾಟ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು. ಕೃಷ್ಣ ಮೇಲ್ದಂಡೆ ಯೋಜನೆ (ಯುಕೆಪಿ ಹಂತ-3) ಜಾರಿಗೆ ಬರಲು Almatti Dam ಅನ್ನು ಸುಮಾರು 17 ಅಡಿ ಎತ್ತರಿಸಬೇಕಾಗಿದೆ. ಆಗ ಮಾತ್ರ ರೈತರಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ಬಜೆಟ್‌ನಲ್ಲಿ ಆಲಮಟ್ಟಿ ಡ್ಯಾಂ ಎತ್ತರಿಕರಣದಿಂದ ಮುಳುಗಡೆಯಾಗುವ ಭೂಮಿಗೆ ಪ್ರತಿ ಎಕರೆಗೆ 30 ರಿಂದ 40 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಯೋಜನೆ ಸಂಪೂರ್ಣ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಯಚೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರಾದ ತಿಪ್ಪರಾಜ ಹವಾಲ್ದಾರ್ ವರದಿಗಾರರೊಂದಿಗೆ ಮಾತನಾಡಿ ರೈತರಿಗೂ ಎಲ್ಲಾ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂದು ಹೇಳಿದರು

ರೈತರ ಹಕ್ಕುಗಳಿಗಾಗಿ ನಿರಂತರ ಹೋರಾಟ

ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಮದ್ದರ್ಕಿ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಂಘಟನೆ ಸೋಮನಮರಡಿ ಇಂದ ಜಿಲ್ಲಾ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪಾಟೀಲ್ ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ಮಹದೇವಪ್ಪ ಯಾದವರ ನೇತೃತ್ವದಲ್ಲಿ ರೈತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ ಎಂದು ಹೇಳಿದರು. ಈ ಹಿಂದೆ ಜಾಲಹಳ್ಳಿಯಲ್ಲಿ ರೈತರು ಹಾಗೂ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು ಎಂದು ತಿಳಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆ ಪಕ್ಷಾತೀತವಾಗಿ ಹೋರಾಟ ಮಾಡುವ ಅಗತ್ಯವಿದೆ. ಕಾಲುವೆಗಳು ನಿರ್ಮಾಣವಾದರೂ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಯುಕೆಪಿ-3 ಯೋಜನೆಯಡಿ ಭೂ ಪರಿಹಾರ ನೀಡದೇ ಭೂಸ್ವಾಧೀನಗೊಂಡ ರೈತರ ಪರವಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಸಮಾಜದಲ್ಲಿ ಸೂಜಿದಾರದಂತೆ ಎಲ್ಲರನ್ನು ಜಾತಿ ಭೇದವಿಲ್ಲದೆ ಜೋಡಿಸಬೇಕು ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ರೈತರಿಗೆ ಸದಾ ಬೆಂಬಲ – ಶ್ರೀದೇವಿ ನಾಯಕ್

ಈ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಶ್ರೀದೇವಿ ಆರ್. ನಾಯಕ್ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದು ಕೃಷಿ ಚಟುವಟಿಕೆಗಳಿಂದ ನಮ್ಮ ದೇಶ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ರೈತರ ಹೋರಾಟಗಳಿಗೆ ನಾವು ಸದಾ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

ರೂಪ ಶ್ರೀನಿವಾಸ್ ನಾಯಕ್ ಅವರು ಮಾತನಾಡಿ ರೈತರು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಜಾಲಹಳ್ಳಿಯ ವರದಿಗಾರರಿಗೆ ಸನ್ಮಾನ

ಇದೇ ವೇಳೆ ಜಾಲಹಳ್ಳಿ–ದೇವದುರ್ಗ ವಿಭಾಗದ TV20 ಕನ್ನಡ ನ್ಯೂಸ್ ಚಾನೆಲ್ ವರದಿಗಾರರಾದ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ ಅವರನ್ನು ರೈತರ ಪರವಾಗಿ ನಿಂತಿರುವುದಕ್ಕಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.

ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಪ್ರಗತಿಪರ ರೈತರಿಗೆ ಕೂಡ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಮದ್ದರ್ಕಿ, ಜಿಲ್ಲಾ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ಜಿಲ್ಲಾ ಅಧ್ಯಕ್ಷರಾದ ಇಂದ್ರಜೀತ್ ಯಾದವ್, ಜಿಲ್ಲಾ ಉಪಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್, ಜಿಲ್ಲಾ ಕಾರ್ಯದರ್ಶಿಗಳಾದ ಮಹದೇವಪ್ಪ ಯಾದವ್ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *