ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ, ಶಿಬಿರಾರ್ಥಿಗಳು ಸ್ವಯಂ ಸೇವಕರಾಗಿ, ಸ್ವಯಂ ಸೇವಕರು ಸಮಾಜ ಸೇವಕರಾಗಿ, ಜನಾನುರಾಗಿಗಳಾಗಿ ಪ್ರಗತಿ ಪಥದಲ್ಲಿ ದೇಶ ಮುನ್ನಡೆಸಲು ಎನ್ಎಸ್ಎಸ್ ಬುನಾದಿಯಾಗಿ ನಿಲ್ಲುತ್ತದೆ ಎಂದು ತಾವರಗೇರಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಲಾಲಸಾಬ ಅಭಿಪ್ರಾಯಪಟ್ಟರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು, ತುರುವೀಹಾಳದ ಎನ್ಎಸ್ಎಸ್ ಘಟಕದ ವತಿಯಿಂದ ಕಲ್ಮಂಗಿ ಗ್ರಾಮದಲ್ಲಿ ನಡೆದ ಎನ್ಎಸ್ ಎಸ್ ವಿಶೇಷ ವಾರ್ಷಿಕ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಎನ್ ಎಸ್ ಎಸ್ ಪಾತ್ರ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ನಂತರ ಮಾತನಾಡಿದ ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಲೀಮ್ ಪಾಷಾ ಮಾತನಾಡಿ, ಎನ್ಎಸ್ಎಸ್ ಸಹಬಾಳ್ವೆ, ಸಮಾನತೆ ಹಾಗೂ ಸಾಮಾಜಿಕ ಸೂಕ್ಷ್ಮತೆಯನ್ನು ಬೆಳೆಸುವುದರೊಂದಿಗೆ ಶಿಬಿರಾರ್ಥಿಗಳನ್ನು ಸಂವೇದನಾಶೀಲ ಪ್ರಜೆಗಳನ್ನಾಗಿ ರೂಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಚನ್ನಬಸವ ಮಾತನಾಡಿ ಪ್ರತಿಯೊಬ್ಬ ಶಿಬಿರಾರ್ಥಿಯೂ ಮನುಷ್ಯತ್ವದ ಶಿಖರ ತಲುಪಿ ತನಗೂ ಸಮಾಜಕ್ಕೂ ಉಪಯುಕ್ತನಾಗಿ ಬಾಳಲು ಎನ್ಎಸ್ಎಸ್ ಅತ್ಯಂತ ಅಗತ್ಯ ವೇದಿಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಆರ್ ಪಿ.ಚಿದಾನಂದ ಪಾಟೀಲ್, ದಯಾನಂದ ಸ್ವಾಮಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆ ಕಾರ್ಯಕ್ರಮದ ನಂತರ ಎನ್ಎಸ್ಎಸ್ ಶಿಬಿರಾರ್ಥಿಗಳಿಂದ ಹಾಗೂ ಊರಿನ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.
ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಶೇಖರಯ್ಯಸ್ವಾಮಿ, ದೊಡ್ಡಬಸವ, ಭಾಷಾಸಾಬ್, ದುರುಗೇಶ, ಅಯ್ಯನಗೌಡ, ಸುಶ್ಮಿತಾ ಮಲ್ಲನಗೌಡ, ಅನುರಾಧ ಗುಡದೂರು, ಎನ್ಎಸ್ಎಸ್ ಅಧಿಕಾರಿ ರಾಜೇಶ, ಪತ್ರಕರ್ತರಾದ ಅಂಬಣ್ಣ ಸಾಸಲಮರಿ, ಸಹಾಯಕ ಪ್ರಾಧ್ಯಾಪಕರಾದ ಮೌಲಾಸಾಬ್, ಹನುಮೇಶ, ಉಪನ್ಯಾಸಕರಾದ ಮಹಾದೇವ, ನಾಗರಾಜ, ತಿಮ್ಮಯ್ಯ, ಬಸವರಾಜ, ಎನ್ಎಸ್ ಎಸ್ ಶಿಬಿರಾರ್ಥಿಗಳು, ಊರಿನ ಗಣ್ಯರು, ವಿದ್ಯಾರ್ಥಿಗಳು ಹಾಜರಿದ್ದರು. ಶ್ರೀದೇವಿ ನಿರೂಪಿಸಿದರು, ರಕ್ಷಿತಾ ಸ್ವಾಗತಿಸಿದರು, ನಾಗಲಕ್ಷ್ಮಿ ಉಪನ್ಯಾಸಕರನ್ನು ಪರಿಚಯಿಸಿದರು, ಆಂಜನೇಯ ವಂದಿಸಿದರು.

