15-ಎಂ ಎಸ್ ಕೆ-01
ಲಿಂಗಸಗೂರು: ಜನರಿಗೆ ನೀರಿನ ದಾಹ ನೀಗಿಸುವ ಜೊತೆಗೆ ಪರಿಸರ ಕಾಪಾಡುವಲ್ಲಿ ಹಾಗೂ ಅನ್ಯಾಯಕ್ ಕೊಳ್ಳಗಾದ ಜನರಿಗೆ ನ್ಯಾಯ ಕೊಡಿಸುವಲ್ಲಿ ಆಂಜನೇಯನವರು ಮುಂದೆ ಇರುತ್ತಾರೆ ಇಂಥ ಕಾರ್ಯಗಳನ್ನು ಇನ್ನಷ್ಟು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.
ಲಿಂಗಸಗೂರು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದ ವತಿಯಿಂದ ಆಯೋಜನೆ ಮಾಡಲಾಗಿದ್ದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಭಾನುವಾರ ಚಾಲನೆ ನೀಡಿ ನಂತರ ಮಾತನಾಡಿದ ಅವರು ಇತ್ತೀಚಿನ ದಿನಮಾನಗಳಲ್ಲಿ ಜನರಲ್ಲಿ ಮಾನವವಿಯ ಮೌಲ್ಯಗಳು ಕುಂಟಿತ ವಾಗುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅನ್ಯಾಯ ಕೊಳಗಾದವರಿಗೆ ನ್ಯಾಯ ಕೊಡಿಸಿ ಅವರ ಬೆನ್ನಿಗೆ ನಿಲ್ಲುವ ಕೆಲಸವನ್ನು ಆಂಜನೇಯ ಹಾಗೂ ಅವರ ತಂಡ ಮಾಡುತ್ತಾ ಬಂದಿದೆ. ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ ಜನರ ನೀಗಿಸುವುದು ಬಹು ಮುಖ್ಯ.ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಜನರಿಗೆ ಕುಡಿಯುವ ನೀರಿನ ದಾಹ
ನೀಗಿಸುವ ಕಾರ್ಯಕ್ಕೆ ಯುವಕರು ಮುಂದಾಗಿದ್ದು ಸಂತಸದ ವಿಷಯ, ಬೇಸಿಗೆ ಆರಂಭವಾಗಿದ್ದು ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋದರೆ ಬಾಯಾರಿಕೆ ಆಗುತ್ತದೆ. ಬೇಸಿಗೆಯಲ್ಲಿ ಜನರ ನೀರಿನ ಬವಣೆ ನೀಗಿಸಲು ಕರ್ನಾಟಕ ರಕ್ಷಣಾ ವೇದಿಕೆಯ ಆಂಜನೇಯ ಬಂಡಾರಿ ಅವರ ತಂಡದವರಿಂದ ನೀರಿನ ಅರವಟಿಗೆ ಆರಂಭಿಸಲಾಗಿದೆ. ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು. ಅಲ್ಲದೆ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ನಂತರ ಪುರಸಭೆಯ ಮಾಜಿ ಉಪಾಧ್ಯಕ್ಷ ಮಹಮ್ಮದ ರಫಿ ಮಾತನಾಡಿ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯ ಊಟ ಉಪಹಾರವಿಲ್ಲದೆ ಒಂದು ದಿನ ಬದುಕಬಲ್ಲ ಆದರೆ ನೀರಿಲ್ಲದೆ ಬದುಕಲಾರ ಆದ್ದರಿಂದ ಕುಡಿಯುವ ನೀರಿನ ಸೇವೆ ಅತ್ಯಂತ ಹಿರಿದು ಇಂತಹ ಸಮಾಜಮುಖಿ ಕಾರ್ಯಗಳನ್ನು ಆಂಜನೇಯ ಬಂಡಾರಿ ಅವರು ಪ್ರತಿದಿನವೂ ಮಾಡುತ್ತಿರುತ್ತಾರೆ. ಅಲ್ಲದೆ ಎಲ್ಲಿ ಅನ್ಯಾಯ ವಾಗಿದೆಯೋ ಅಲ್ಲಿ ನ್ಯಾಯ ಕೊಡಿಸುವುದಕ್ಕಾಗಿ ಅವರು ಮುಂದೆ ಇರುತ್ತಾರೆ. ಸಮಾಜದಲ್ಲಿ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವ ಶಕ್ತಿ ಭಗವಂತ ಅವರಿಗೆ ನೀಡಲಿ ಎಂದು ಹೇಳಿದರು. ಸಿಪಿಐ ಹೊಸಕೇರಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಲಿಂಗಸಗೂರು ತಾಲೂಕು ಅಧ್ಯಕ್ಷ ಆಂಜನೇಯ ಬಂಡಾರಿ, ಶಿವು ಪತ್ತಾರ್, ಕುರುಮೇಶ್ ನಾಯಕ್, ಮೌನೇಶ್ ಬಳ್ಳಾಪುರ, ಭೀಮೇಶ್ ನಾಯಕ, ಅಶೋಕ ನಾಯಕ, ಯಲ್ಲಪ್ಪ ದೊಡ್ಡಮನಿ, ರಮೇಶ್ ಗೊಸ್ಲಿ, ನಾಗರಾಜ್ ತುಗ್ಲಿ, ಮಂಜುನಾಥ್ ಪಾಟೀಲ್ ವಕೀಲರು, ಸಂದೀಪ್ ಪಾಟೀಲ್ ಅಂಗಡಿ, ಪ್ರಶಾಂತ್ ಹೂಗಾರ್, ಪತ್ರಕರ್ತ ಇಂದರಪಾಶ ಚಿಂಚರಕಿ,
ಸೇರಿದಂತೆ ಇನ್ನಿತರ ಯುವಕರಿದ್ದರು.
ಸನ್ಮಾನ : ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಮ್ಮದ್ ರಫಿ ಸೇರಿದಂತೆ ಇನ್ನಿತರ ಮುಖಂಡರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಆಂಜನೇಯ ಬಂಡಾರಿ ಅವರು ಸನ್ಮಾನಿಸಿ ಗೌರವಿಸಿದರು.

