ಲಿಂಗಸಗೂರು : ಮಾ.16 – ಪಟ್ಟಣದ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ (ಎಪಿಎಂಸಿ)ಗೆ ಲಿಂಗ ಸಗೂರು ಪ್ರಭಾರ ತಹಶೀಲ್ದಾರ್ ಪುರುರಾಜ್ ಸೋಳಂಕಿ ಅವರು ಭೇಟಿನೀಡಿ ವಿವಿಧ ವಿಭಾಗಗಳ ಕಾರ್ಯಗಳನ್ನು ಪರಿಶೀಲಿಸಿದರು. ಮೊದಲು ಇ-ಟೆಂಡರ್ ಪ್ರಕ್ರಿಯೆ ನಡೆಯುವ ಕೊಠಡಿಗೆ ಭೇಟಿ ನೀಡಿದ ಅವರು, ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ವ್ಯವಸ್ಥೆಯಿಂದ ರೈತರಿಗೆ ಆಗುವ ಪ್ರಯೋಜನಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ರೈತರ ಆಹಾರ ಧಾನ್ಯಗಳನ್ನು ಸ್ವಚ್ಛಗೊಳಿ ಸುವ ಕ್ಲೀನಿಂಗ್ ಯಂತ್ರವನ್ನು ವೀಕ್ಷಿಸಿದರು.ನಂತರ ವ್ಯಾಪಾರ ನಡೆಯುವ ಪ್ರಾಂಗಣಕ್ಕೆ ತೆರಳಿ ವರ್ತಕರಿಂದ ಖರೀದಿ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆದುಕೊಂಡರು. ರೈತರು ಎಪಿಎಂಸಿಗೆ ಮಾರಾಟಕ್ಕೆ ತಂದಿದ್ದ ಸಜ್ಜೆ, ಕಡಲೆ, ಶೇಂಗಾ ಸೇರಿದಂತೆ ವಿವಿಧ ಆಹಾರ ಧಾನ್ಯಗಳನ್ನು ವೀಕ್ಷಿಸಿ ಅವುಗಳ ಖರೀದಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಎಪಿಎಂಸಿಯ ವಿಶಾಲವಾದ ಸ್ಥಳಾವಕಾಶವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು
ಇಂತಹ ಬೃಹತ್ ಪ್ರಾಂಗಣವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಹೆಚ್ಚಿನಗಮನ ಹರಿಸಬೇಕು ಜೊತೆಗೆ ಈ ಎಪಿಎಂಸಿಯಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ನಿಗವಹಿಸಬೇಕೆಂದು ಸ್ಥಳದಲ್ಲಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನೀಲಪ್ಪ ಅವರಿಗೆ ಸೂಚಿಸಿದರು. ಎಪಿಎಂಸಿ ಭೇಟಿ ನೀಡಿದ ತಹಶೀಲ್ದಾರ್ ಪುರುರಾಜ್ ಅವರಿಗೆ ಎಪಿಎಂಸಿ ಕಾರ್ಯದರ್ಶಿ ಸನ್ಮಾನಿ ಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸಹ ಕಾರ್ಯದರ್ಶಿ ಸಾವಿತ್ರಿ, ಸಿಬ್ಬಂ ದಿಗಳಾದ ಅಕ್ಷತಾ, ಭಾರತಿ, ಕಂಪ್ಯೂ ಟರ್ ಅಪರೇಟರ್‌ಗಳಾದ ಪಾಷಾ ಹಾಗೂ ಎಪಿಎಂಸಿ ನಿರ್ದೇಶಕರಾದ ರುದ್ರಗೌಡ ಮಾಲಿ ಪಾಟೀಲ್ ಇದ್ದರು.

