ಲಿಂಗಸಗೂರು : ಮಾ 15 .ಇಂದು ನಡೆದ ರಾಷ್ಟ್ರೀಯ ಲೋಕ ಅಧಾಲತ್ ನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು ಬಾಕಿ ಇದ್ದ 2399 ಪ್ರಕರಣಗಳಲ್ಲಿ 712 ಪ್ರಕರಣಗಳು ರಾಜಿಯಾಗುವ ಮೂಲಕ ಇತ್ಯಾರ್ಥವಾಗಿವೆ ಇದರ ಒಟ್ಟು ಮೊತ್ತ 2,73,44,300/- ( ಎರಡು ಕೋಟಿ ಎಪ್ಪತ್ತಮೂರು ಲಕ್ಷ ನಲ್ವತ್ತ ನಾಲ್ಕು ಸಾವಿರದ ಮುನ್ನೂರು ) ರೂ ಆಗಿದ್ದು, ಅದರಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿಗಳಿಗೆ ಹಿರಿಯ ಶ್ರೇಣಿ ನ್ಯಾಯಧೀಶರಾದ ಶ್ರೀಮತಿ ಹುಂಡಿ ಮಂಜುಳಾ ಶಿವಪ್ಪ ಇವರು ಮನಹೊಲಿಸಿ ಗಂಡ ಹೆಂಡತಿಯನ್ನು ಒಗ್ಗೂಡಿಸಿದರು . ಅಂಬಣ್ಣ ಕೆ. ಪ್ರಧಾನ ಸಿವಿಲ್ ನ್ಯಾಯಧೀಶರು ಇವರು ಪ್ರಧಾನ ಸಿವಿಲ್ ನ್ಯಾಯಾಲದಲ್ಲಿ ಒಟ್ಟು ಬಾಕಿ ಇದ್ದ 2306 ಪ್ರಕರಣಗಳಲ್ಲಿ 874 ಪ್ರಕರಣಗಳು ರಾಜಿಯಾಗುವ ಮೂಲಕ ಇತ್ಯಾರ್ಥವಾಗಿವೆ ಇದರ ಒಟ್ಟು ಮೊತ್ತ 95,82,551/- ( ತೊಂಬತ್ತ ಐದು ಲಕ್ಷದ ಎಂಬತ್ತ ಎರಡು ಸಾವಿರದ ಐದುನೂರ ಐವತೊಂದು ) ರೂ ಆಗಿದ್ದು ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲದಲ್ಲಿ ಒಟ್ಟು ಬಾಕಿ ಇದ್ದ 1077 ಪ್ರಕರಣಗಳಲ್ಲಿ 682 ಪ್ರಕರಣಗಳು ರಾಜಿಯಾಗುವ ಮೂಲಕ ಇತ್ಯಾರ್ಥವಾಗಿವೆ ಇದರ ಒಟ್ಟು ಮೊತ್ತ 3,22,183/- ( ಮೂರು ಲಕ್ಷದ ಇಪ್ಪತ್ತೆರಡು ಸಾವಿರದ ನೂರಾ ಎಂಬತ್ತಾ ಮೂರು ) ರೂ ಆಗಿದ್ದು. ಇಂದು ಒಟ್ಟು ಲಿಂಗಸಗೂರು ನ್ಯಾಯಾಲಯದಲ್ಲಿ 2268 ಪ್ರಕರಣಗಳು ರಾಜಿಯಾಗಿವೆ. ಇದರ ಒಟ್ಟು ಮೊತ್ತ 3,72,49,034/- ( ಮೂರು ಕೋಟಿ ಎಪ್ಪತ್ತ ಎರಡು ಲಕ್ಷದ ನಲವತ್ತ ಒಂಬತ್ತು ಸಾವಿರದ ಮೂವತ್ತ ನಾಲ್ಕು ) ರೂ ಆಗಿದ್ದು. ಮತ್ತು ಒಟ್ಟು ಬಾಕಿ ವ್ಯಾಜ್ಯಪೂರ್ವ ಪ್ರಕರಣಗಳು 6000 ರಲ್ಲಿ 4950 ಪ್ರಕರಣಗಳು ರಾಜಿಯಾಗುವ ಮೂಲಕ ಇತ್ಯಾರ್ಥವಾಗಿವೆ ಇದರ ಒಟ್ಟು ಮೊತ್ತ 29,65,159/- ( ಇಪ್ಪತ್ತ ಒಂಬತ್ತು ಲಕ್ಷದ ಅರವತ್ತ ಐದು ಸಾವಿರದ ಒಂದು ನೂರಾ ಐವತ್ತಾ ಒಂಬತ್ತು ) ರೂ ಆಗಿದೆ. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ
ಭೂಪನಗೌಡ ಪಾಟೀಲ್ , ಬಾಲರಾಜ , ಮಹಾಲಿಂಗಪ್ಪ , ಹಾಜಿಬಾಬ , ನಾಗರಾಜ ಗಸ್ತಿ , ಕಿರಣ ಮಸ್ಕಿ , ಶ್ರೀಮತಿ ಮಂಜುಳಾ, ವೀಣಾ ಶ್ರೀ ದೇಸಾಯಿ , ಅಮರೇಶ ಪಾಟೀಲ್, ಶಿವಕುಮಾರ, ಈಶ್ವರ ಜಾದವ, ನಾಗರತ್ನ, ಶರಣಬಸವ, ರಾಜಶೇಖರ್ ವಕೀಲರು ಸೇರಿದಂತೆ ಇತರ ವಕೀಲರು ಹಾಜರಿದ್ದರು .

