ಸಿಂಧನೂರು : ತಾಯಿ ತನ್ನ ಮಗುವಿಗೆ ನಿಮ್ಮ ತಂದೆ ಇವರು ಎಂದು ಹೇಳುವುದು ಕೂಡ‌ ಹೆಣ್ಣೇ,- ಎಲ್.ಬಿ.ಕೆ ಪದವಿ ಪೂರ್ವ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮದಲ್ಲಿ ಸಾಮಜ ಚಿಂತಕಿ ಶೈಲಜಾ ಹಿರೇಮಠ ಅವರ ಅಭಿಮತ

ಪುರುಷ ಪ್ರಧಾನ ಸಮಾಜದ ಈ ಜಾಗತಿಕ ವಲಯದಲ್ಲಿ ಲಿಂಗ ಅಸಮಾನತೆ ಖಂಡನೆ ವಿಚಾರ ಈ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಕ್ಕೂ ಹೆಚ್ಚಿನ ಈ ಕಾಲಘಟ್ಟದಲ್ಲಿ 50ರಷ್ಟು ಈ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾತ್ರ ಇದೆ ಆದರೆ ಹೆಣ್ಣು ಇಂತಹ ದೇಶದಲ್ಲಿ ಹೆಣ್ಣು ಎಷ್ಟು ಸುರಕ್ಷಿತ ಎಂಬುದನ್ನ ನಾವೆಲ್ಲರೂ ಆತ್ಮಲೋಕನ ಮಾಡಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ ಪ್ರತಿ ದಿನವೂ ಹೆಣ್ಣು ಆತಂಕದಿಂದ ಬದುಕಬೇಕಾಗಿದೆ ಪ್ರತಿನಿತ್ಯವು ಹೆಣ್ಣು ಎನ್ನುವ ಕಾರಣಕ್ಕಾಗಿ ಭೂಣ ಅತ್ತೆ ವರದಕ್ಷಿಣೆ ಕಿರುಕುಳ ಬಾಲ್ಯ ವಿವಾಹ ದೇವದಾಸಿ ಪದ್ಧತಿ ಅಂತಹ ಅನಿಷ್ಠ ಪದ್ಧತಿಗಳ ನಡುವೆ ಉದ್ಯೋಗ ಸ್ಥಳದಲ್ಲಿಯೂ ಹೆಣ್ಣು ಲೈಂಗಿಕ ಕಿರುಕುಳುಗಳಂತಹ ಶೋಷಣೆಗೆ ಒಳಗಾಗುತ್ತಿರುವುದು ಖಂಡನೆಯ ಇದಕ್ಕೆ ಇದಕ್ಕೆಲ್ಲ ಕಾರಣ ಹೆಣ್ಣಿಗೆ ಕೊರತಿಯಿಂದಾಗಿ ಇಂತಹ ಅಪಾಯಗಳು ನಮ್ಮೆದುರು ದಿನನಿತ್ಯ ಕಾಣಿಸಿಕೊಳ್ಳುತ್ತದೆ 18ನೇ ಶತಮಾನದಿಂದಲೂ ಇವತ್ತಿನವರೆಗೂ ಒಂದಲ್ಲ ಒಂದು ಕಾರಣಕ್ಕಾಗಿ ಹೆಣ್ಣಿನ ಮೇಲೆ ನಡೆದ ಶೋಷಣೆಯನ್ನ ವಿರೋಧಿಸುತ್ತಾ ಬಂದರು ಪ್ರತಿಭಟಿಸುತ್ತಾ ಬಂದರು ಅದಕ್ಕೆ ಅಂತ್ಯ ಆಡಲು ಆಗುತ್ತಿರುವ ವಿಷಾದನೀಯ ಸಂಗತಿ ಎಂದು ಸಿಂಧನೂರು ನಗರದ ಎಲ್.ಬಿ.ಕೆ ಪದವಿ ಪೂರ್ವ ಮತ್ತು ನೊಬಲ್ ಪದವಿ ಮಹಾವಿದ್ಯಾಲಯ ಸಿಂಧನೂರು ಎನ್ ಎಸ್ ಎಸ್ ಮತ್ತು ಐ.ಕ್ಯೂ .ಎ.ಸಿ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮದ
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಗಂಗಾವತಿಯ ಸಮಾಜ ಚಿಂತಕರಾದ ಶ್ರೀಮತಿ ಶೈಲಜಾ ಇವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಮಹಿಳೆಯರ ಶೋಷಣೆಯ ಸ್ಥಿತಿಗತಿಗಳ ಕುರಿತು ಸವಿವರವಾಗಿ ತಿಳಿಸುತ್ತಾ , ಮಹಿಳಾ ಹಿಂದುಳಿಯುವುದಕ್ಕೆ ನೇರವಾಗಿ ಸಮಾಜವೇ ಕಾರಣ ಎಂದು ಸಮಾಜವನ್ನು ಖಂಡಿಸಿ ಮಾತಾಡಿದರು. ಅತಿ ಹೆಚ್ಚು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಜರುಗುತ್ತದೆ. ಒಂದು ವೇಳೆ ಒಬ್ಬ ದಲಿತ ಮಹಿಳೆಯ ಮೇಲೆ ಆಗುವ ದರ್ಪ ದಬ್ಬಾಳಿಕೆ ಶೋಷಣೆ ಅತ್ಯಾಚಾರ ಇವು ಯಾವಾಗ ನಿಲ್ಲುತ್ತೋ ಆಗ ಎಲ್ಲಾ ವರ್ಗದ ಮಹಿಳೆಯರು ಸಮಾಜದಲ್ಲಿ ರಕ್ಷಣೆಗೆ ಒಳಪಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಜಗತ್ತಿನ ಹಲವು ಮಹಿಳಾ ಸಾಧಕರನ್ನು ಸ್ಮರಿಸಿ, ಅವರ ಆದರ್ಶಗಳು ಇಂದಿಗೆ ಮಹಿಳೆಯರಿಗೆ ಮಾದರಿ ಎಂದು ತಿಳಿಸಿದರು

ಈ ದೇಶದಲ್ಲಿ ಹೆಣ್ಣನ್ನ ಸಹನಶೀಲಳು ಭೂಮಿ ತೂಕದವಳು ತಾಯಿ ತಂಗಿ ಮಡದಿ ಅಜ್ಜಿ ಎಂಬೆಲ್ಲ ಸಹಾನುಭೂತಿಯ ಮಾತುಗಳನ್ನಾಡಿ ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣಿಗೆ ದ್ವನಿಯನ್ನ ಕಿತ್ತಿಕೊಂಡ ಪುರುಷ ಪ್ರಧಾನ ಸಮಾಜ ತನ್ನ ಪಾರು ಪಾತ್ತ್ಯತೆಯನ್ನು ಮೆರೆಯುತ್ತಿರುವುದು ವಿಷಾದೀಯ ಸಂಗತಿ ಎಂದು ವರ್ತಮಾನದ ಘಟನೆಗಳನ್ನ ಮುಖಾಮುಖಿಯಾಗಿ ಆತ್ಮಾವಲೋಖೊಸಿದರು.

ಒಬ್ಬ ತಾಯಿ ಮಾತ್ರ ತನ್ನ ಮಗುವಿಗೆ ಇವರೇ ನಿಮ್ಮ ತಂದೆ ಎಂದು ಹೇಳುವ ನೈತಿಕತೆ ಇರುವುದು ಅದು ಹೆಣ್ಣಿಗೆ ಮಾತ್ರ ಸಾಧ್ಯ ಎಂದು ಹೆಣ್ಣಿನ ಅಸ್ಮಿತೆಯ ಕುರಿತು ಮಾತನಾಡಿ ಈ ಸಮಾಜದಲ್ಲಿ ಹೆಣ್ಣನ್ನ ಆತ್ಮಗೌರವದಿಂದ ಕಾಣುವುದಿಲ್ಲವೋ ಆ ಸಮಾಜ ಅಭಿವೃದ್ದಿ ಆಗಲು ಸಾಧ್ಯವಿಲ್ಲ ಆ ಸಮಾಜ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಸಸಿಗೆ ನೀರ್ ಯಾರದು ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಹಳೆ ವಿದ್ಯಾರ್ಥಿನಿ ಮತ್ತು ಸರಕಾರಿ ಪದವಿ ಮಹಾವಿದ್ಯಾಲಯದ ಇಂಗ್ಲೀಷ ಉಪನ್ಯಾಸಕಿ ಕುಮಾರಿ ತಜರಿನ್ ರೌಡಕುಂದಾ ಮಾತನಾಡಿ ಹೆಣ್ಣಿಗೆ ಕುಟುಂಬದಿಂದಲೇ ತಾರತಮ್ಯವಾಗುತ್ತಿದೆ. ಮೊದಲು ಕುಟುಂಬದವರನ್ನು ಪ್ರಸ್ನಿಸಿ ನಂತರ ಸಮಾಜದಲ್ಲಿನ ಶೋಷಣೆಯಿಂದ ಮುಕ್ತರಾಗಲು ಸಾಧ್ಯ ಹೆಣ್ಣಿಗೆ ಹೆಣ್ಣಿನಿಂದಲೇ ಸ್ವಾತಂತ್ರ್ಯ ಸಿಗಬೇಕಾಗಿದೆ .ಹೆಣ್ಣಿನಿಂದ ಹೆಣ್ಣಿಗೆ ಸಮಾನತೆ ಸಿಗಬೇಕಾಗಿದೆ .ಈ ನೆಲದಲ್ಲಿ ಸಮಾನತೆಗಾಗಿ ದ್ವನಿಯೆತ್ತಿದ ಎಲ್ಲಾ ಮಹನೀಯರ ಪಾತ್ರ ಅವಿಸ್ಮರಣೆ ವಾದದ್ದು .ಆದಾಗ್ಯೂ ಪ್ರಸ್ತುತ ಕಾಲಘಟ್ಟದಲ್ಲಿ ಸಮಾನತೆಗಾಗಿ ನಾವು ಯಾರನ್ನು ಅವಲಂಬಿಸಬೇಕಿಲ್ಲ ಮತ್ತು ನಮಗೆ ನಾವೇ ಲಕ್ಷ್ಮ ರೇಖೆ ಹಾಕಿಕೊಂಡು ಬದುಕುವ ಅಗತ್ಯತೆಯೂ ಇಲ್ಲ ಯಾವ ಹೆಣ್ಣು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಮುಂದೆ ಬಂದು ಸ್ವಾವಲಂಬನೆಯ ಬದುಕನ್ನ ಕಟ್ಟಿಕೊಂಡಾಗ ಮಾತ್ರ ಹೆಣ್ಣಿಗೆ ಈ ಸಮಾಜದಲ್ಲಿ ಗೌರವ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ಕಾರ್ಯಕ್ರಮದಲ್ಲಿಬಅತಿಥಿಗಳಾಗಿ ಕಾಲೇಜಿನ ಎಲ್ಲಾ ಮಹಿಳಾ ಉಪನ್ಯಾಸಕರಾದ ಕುಮಾರಿ ಜ್ಯೋತಿ, ನಂದಿನಿ, ಅಶ್ವಿನಿ,ಕಾವೇರಿ, ಕವಿತಾ,ಅನ್ನಪೂರ್ಣ ಹಾಗೂ ವಿಧ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಅಕ್ಕಮಹಾದೇವಿ, ನಿಸರ್ಗ, ಗಾಯಿತ್ರಿ, ಮಾಯಮ್ಮ ಬಿಕಾಂ ಮತ್ತು ಕಾಲೇಜಿನ ಪರಿಚಾರಕರಾದ ಶ್ರೀಮತಿ ಹುಸೇನಮ್ಮ ,ಫಾತಿಮಾ ಅಕ್ಕ ಇವರು ಉಪಸ್ತಿತರಿದ್ದರು.

ವಿದ್ಯಾರ್ಥಿಗಳಾದ ಅಕ್ಕಮಹಾದೇವಿ ,ಅನಿಲ್ ಬಿಕಾಂ, ಬಸಮ್ಮ ಮತ್ತು ಜ್ಯೋತಿಯವರು ಮಹಿಳಾ ದಿನಾಚರಣೆ ಕುರಿತು ಅದರ ಇತಿಹಾಸ ಮತ್ತು ಮಹತ್ವವನ್ನು ವಿಧ್ಯಾರ್ಥಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆ ಮೇಲೆ ಇದೆಲ್ಲ ಮಹಿಳೆಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪರಶುರಾಮ ಮಲ್ಲಾಪುರ್ ಕಾರ್ಯದರ್ಶಿಯಾದ ಡಾ. ಅರುಣಕುಮಾರ್ ಬೇರಿಗೆ ಉಪಾಧ್ಯಕ್ಷರಾದ ಶಂಕರಪ್ಪ ಖಜಾಂಚಿಗಳಾದ ಜಯಪ್ಪ ಗೊರೆಬಾಳ್ ಹಾಗೂ ಐ ಕ್ಯೂ ಎ.ಎಸ್ ಸಂಯೋಜಕರಾದ ಹೊನ್ನಪ್ಪ ಬೆಳಗುರ್ಕಿ, ವೆಂಕೋಬ ಬುದಿವಾಳ, ಸುರೇಶ್ ಮುಳ್ಳೂರು ಪಂಪಾಪತಿ ,ಶರಣಬಸವ ಮೌಲಾಸಾಬ್ ವಸಂತಕುಮಾರ್ ಬೀರಪ್ಪ ಕೃಷ್ಣಪ್ಪ ಬಾಲಪ್ಪ ನಾಗರಾಜ್ ಮತ್ತು ಎಲ್ ಬಿ.ಕೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ್ ಬಿಂಗಿ ಇನ್ನಿತರರು ಉಪಸ್ಥಿತರಿದ್ದರು

ಈ ಕಾರ್ಯಕ್ರಮವನ್ನು ಕುಮಾರಿ ಶಮೀನಾ ಪಿಯುಸಿ ವಿಭಾಗ ನಿರೂಪಿಸಿದರು, ಜಾನ್, ಅಗ್ನಿ ,ಮತ್ತು ದಿನೇಶ್ ಪ್ರಾರ್ಥಿಸಿದರು ,ತಿಮ್ಮಣ್ಣ ನಾಯಕ್ ಸ್ವಾಗತಿಸಿದರು, ಬಸವರಾಜ ವಿಧ್ಯಾರ್ಥಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು, ನಾಗರಾಜ ವಂದಿಸಿದರು.

Leave a Reply

Your email address will not be published. Required fields are marked *