ಲಿಂಗಸಗೂರು, ಮಾ.14 –

ಕರವೇ ಕನ್ನಡ ಸೇನೆ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ಸುಕೋ ಬ್ಯಾಂಕ್ ಬಳಿ ಬೇರೆಬೇರೆ ಗ್ರಾಮಗಳಿಂದ ವ್ಯಾಪಾರ ವಹಿವಾಟಿಗಾಗಿ ಸಾವಿರಾರು ಸಾರ್ವಜನಿಕರು ಓಡಾಡುತ್ತಿದ್ದು ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ನೀರಿನ ದಾಹ ತಣಿಸಲು ಕುಡಿಯುವ ನೀರಿನ ಅರವಟಿಗೆ ಪ್ರಾರಂಭಿಸಿದ್ದೇನೆಂದು ಕರವೇ ಕನ್ನಡ ಸೇನೆಯ ತಾಲೂಕ ಅಧ್ಯಕ್ಷ ಹನುಮಂತಪ್ಪ ಗುಳ್ಳೆದಗುಡ್ಡ ಹೇಳಿದರು.

ಅವರಿಂದು ನೀರಿನ ಅರವಟಿಗೆ ಉದ್ಘಾಟಿಸಿ ನಂತರ ಮಾತನಾಡಿದ ಅವರು ಈ ವರ್ಷ ಈಗಾಗಲೆ ತಾಪಮಾನ ಹೆಚ್ಚಾಗಿದೆ. ಪಟ್ಟಣಕ್ಕೆ ವ್ಯಾಪಾರ ವಹಿವಾಟಿಗಾಗಿ ಬರುವ ಸಾವಿರಾರು ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ವಿವಿಧ ಕೆಲಸಗಳು ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ಪ್ರತಿದಿನ ಪಟ್ಟಣಕ್ಕೆ ಆಗಮಿಸುತ್ತಾರೆ. ಬೇಸಿಗೆಯ ತೀವ್ರ ಬಿಸಿಲಿನ ತಾಪದಿಂದ ಜನರು ತತ್ತರಿ ಸುತ್ತಿದ್ದು, ದಾಹವಾಗುವ ಸಂದರ್ಭದಲ್ಲಿ ಕುಡಿಯುವ ನೀರನ್ನು ಪಡೆಯುವುದು ಕಷ್ಟಕರವಾಗುತ್ತಿದೆ ಎಂದು ತಿಳಿಸಿದರು.

ಜನರು ಹಣ ಕೊಟ್ಟು ನೀರು ಖರೀದಿಸಿ ಕುಡಿಯಬೇಕಾದ ಪರಿಸ್ಥಿತಿ ಇದೆ ಎಂದರು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದಾಹ ನೀಗಿಸಿಕೊಳ್ಳಲು ಉಚಿತವಾಗಿ ಕುಡಿಯುವ ನೀರು ದೊರೆಯುವಂತೆ ಮಾಡಲು ಕರವೇ ಕನ್ನಡ ಸೇನೆ ಸಂಘಟನೆ ವತಿಯಿಂದ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸಲಾಗಿದೆ.
ಪುರಸಭೆ ಮುಖ್ಯಧಿಕಾರಿ ನಟರಾಜ್ ರವರು ನೀರಿನ ಅರವಟಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ್ ಕುಣೆಕೆಲ್ಲೂರ್ , ಕಾರ್ಯದರ್ಶಿ ಬಸವರಾಜ್ ಚೀಲಕರಾಗಿ , ಅಮರೇಶ್ ಚೀಲಕರಾಗಿ, ಕಾರ್ಯದರ್ಶಿ ಭೀಮಣ್ಣ ಆನೆಹೊಸೂರ್ , ವಿಜಯ ಮೇಟಿ ತಾಲೂಕ

Leave a Reply

Your email address will not be published. Required fields are marked *