ಲಿಂಗಸಗೂರು : ಮಾ 14 .
ಮುದಗಲ್ ಪಟ್ಟಣದ ಸಂತೆ ಬಜಾರ್ ಹರಾಜು ಪ್ರಕ್ರಿಯೆ ಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮುದಗಲ್ ಪಟ್ಟಣದ ಪುರಸಭೆಯವರು ಸಂತೆ ಮೈದಾನಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ವರೆಗೆ ಹರಾಜು ಪ್ರಕ್ರಿಯೆ ನಡೆಸ ಬಾರದು, ಈಗಾಗಲೇ ತಾಲೂಕಿನ ರೈತರು ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಅನುಭವಿಸುತ್ತಿದ್ದು, ಈ ನಡುವೆ ಮುದಗಲ್ ಪುರಸಭೆ ವ್ಯಾಪ್ತಿಯಲ್ಲಿ ರೈತರು ಬೆಳೆಯುವ ತರಕಾರಿ ಹಾಗೂ ಹಣ್ಣು, ಹೂ ಹಾಗೂ ದನ ಕುರಿಗಳ ನ್ನು ಮಾರಾಟ ಹಾಗೂ ಖರೀದಿ ಮಾಡಲು ಬಂದರೆ ಅತಿ ಹೆಚ್ಚು ತೆರಿಗೆ ವಸೂಲಿ ಮಾಡುತ್ತಿದ್ದಾರೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಆರೋಪಿಸಿದರು. 10 ಕೆ.ಜಿ. ಟೋಮಾಟೊ ಪುಟ್ಟಿಗೆ 25 ರಿಂದ 30 ರೂ. ಬೆಲೆಯಾ ದರೆ ಅದರಲ್ಲಿ 10-15 ರೂ.ಗಳಷ್ಟು ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈ ರೀತಿ ಹಗಲು ದರೋಡೆ ಮಾಡಿದರೆ ರೈತನು ಎಲ್ಲಾ ಖರ್ಚುಗಳನ್ನು ತೆಗೆದು ಲಾಭಗಳಿಸುವುದು ದೂರದ ಮಾತಾಗಿದೆ. ಮುದಗಲ್ ಪಟ್ಟಣದಲ್ಲಿರುವ ಸಂತೆ ಬಜಾರಗೆ ಸುಮಾರು ವರ್ಷಗಳಿಂದ ಯಾವುದೇ ಸೌಲಭ್ಯಗಳು ಇಲ್ಲ. ಅದರಲ್ಲಿಯೂ ವಿಶೇಷವಾಗಿ ಶುದ್ಧ ಕುಡಿಯುವ ನೀರು, ನೆರಳು ಶೌಚಾಲಯ ಇಲ್ಲದೇ ಖರೀದಾರರು ಹಾಗೂ ಮಾರಾಟಗಾರರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಈ ವರ್ಷ ನಡೆಯುವ ಪರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಸಂತೆ ಬಜಾರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ನಂತರ ಹರಾಜು ಪ್ರಕ್ರಿಯೆಯನ್ನು ಮಾಡಬೇಕು ಒಂದು ವೇಳೆ ಹರಾಜು ಪ್ರಕ್ರಿಯೆ ಯನ್ನು ನಡೆಸಿದರೆ ಹರಾಜು ಮಾಡುವ ದಿನದಂದು ಮುದಗಲ್ ಪುರಸಭೆ ಕಾರ್ಯಾಲಯಕ್ಕೆ ಬೀಗ ಜಡೆದು ಪ್ರತಿಭಟನೆ ಮಾಡಬೆಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಿವುಪುತ್ರಗೌಡ, ಕಾರ್ಯಾಧ್ಯಕ್ಷ ಆನಂದ ಕುಂಬಾರ, ಲಕ್ಷ್ಮಣ ಮುಕ್ಕಣ್ಣನವರ, ಬಸವರಾ ಜ ಭಜಂತ್ರಿ ಸೇರಿದಂತೆ ಇತರರು ಇದ್ದರು .

