ಲಿಂಗಸಗೂರು.ಮಾ.14 –
ತಾಲೂಕಿನ ಬಡ್ತಿ ಹೊಂದಿದ ಮುಖ್ಯ ಶಿಕ್ಷಕರಿಗೆ ಜನಗಣತಿ ಕಾರ್ಯದಿಂದ ವಿನಾಯತಿ ನೀಡಬೇಕೆಂದು ಒತ್ತಾಯಿಸಿ ಹಿರಿಯ ಮತ್ತು ಪದವೀಧರೇತರ
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಪದಾಧಿಕಾರಿಗಳು ಬಿಇಒ ಸುಜಾತಾ ಹನೂರು ಅವರಿಗೆ ಮನವಿ ಸಲ್ಲಿಸಿದರು.
6 ರಿಂದ 8 ನೇ ತರಗತಿಗಳ ಎಸ್‌ಎ-2 ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಸಿಆರ್‌ಪಿ
ಮುಖಾಂತರ ಶಾಲಾ ಮುಖ್ಯಶಿಕ್ಷಕರಿಗೆ ತಲುಪಿಸಬೇಕು ಅಥವಾ ಮೊಬೈಲ್‌ಗೆ ಕಳುಹಿಸಬೇಕು. ಮುಖ್ಯ ಶಿಕ್ಷಕರಿಗೆ ಗಣಕಯಂತ್ರ ತರಬೇತಿ ನೀಡಬೇಕು. ಪ್ರತಿ ಶಾಲೆಗೆ ಇಂಟರ್‌ನೆಟ್ ಸಹಿತ ಒಂದು ಗಣಕ ಯಂತ್ರಪೂರೈಸಬೇಕು. ಚೆಕ್ಕರ್ ಮೇಕರ್ ಕ್ಯಾಶ್ ಬುಕ್ ನಿರ್ವಹಣೆ ಮಾಡುವ ಕುರಿತು ಏಕರೂಪದ ತರಬೇತಿ ನೀಡಬೇಕು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಈವೇಳೆಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ಮುಖ್ಯೋಪಾಧ್ಯಾಯರ ಸಂಘದ ಗೌರವಾಧ್ಯಕ್ಷ ನಾಗೇಶ, ಅಧ್ಯಕ್ಷ ಅಮರಪ್ಪ ಸಾಲಿ, ಶಿವಶಂಕರ ಪಾಟೀಲ್, ಹುಲಗಪ್ಪ, ಮಾರುತಿ, ಚಂದ್ರಶೇಖರ, ಸುಭಾಷ್, ಫಕ್ರುದ್ದೀನ್ ಸೇರಿದಂತೆ ಇತರರು ಇದ್ದರು.

