ರಾಯಚೂರು ಮಾರ್ಚ್ 12 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಚನ ಕಲ್ಯಾಣ ಎಂಬ ಅಹೋರಾತ್ರಿ (ಒಂಬತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಇಲಾಖೆ ಉದ್ದೇಶಿಸಿದೆ. ಆ ಸಂಬಂಧ ನುರಿತ ಹಾಗೂ ಆಸಕ್ತ ಯುವಕ ಯುವತಿಯರು ಹಾಗೂ ಅನುಭವಿ ರಂಗಕಲಾವಿದರು/ಗಾಯಕರುಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ (ಅರ್ಜಿ ಲಗತ್ತಿಸಿದೆ), ವಯೋಮಿತಿ 18 ರಿಂದ 40 ವರ್ಷಗಳು ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಅದ್ಯತೆ ನೀಡಲಾಗುವುದು. ತುಂಬಿದ ಅರ್ಜಿಗಳನ್ನು ದಿನಾಂಕ 20 ಮಾರ್ಚ್ 2026ರ ಒಳಗೆ ಸದಸ್ಯ ಕಾರ್ಯದರ್ಶಿ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056. ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ತಲುಪುವಂತೆ ಅಥವಾ ಮೇಲ್ ವಿಳಾಸ: kanakaresearchcentre@gmail.com ದ ಮೂಲಕ ಸಲ್ಲಿಸಲು ಕೋರಿದೆ. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ-ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮಾಸಿಕ ಗೌರವಧನ ಮತ್ತು ಊಟ-ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಅರ್ಜಿಯ ನಮೂನೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ವೆಬ್ ಸೈಟ್ kannadasiri.karnataka.gov.in ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿ ವಿವರಗಳಿಗಾಗಿ ಶ್ರೀ ಸಿ. ಬಸವಲಿಂಗಯ್ಯ (ವಚನ ಕಲ್ಯಾಣ ನಾಟಕದ ನಿರ್ದೇಶಕರು) ಇವರಲ್ಲಿ ಮಾಹಿತಿ ಪಡೆಯಬಹುದು ಮೊಬೈಲ್ ಸಂಪರ್ಕ ಸಂಖ್ಯೆ: 9448538620. ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಇಲಾಖೆಯು ಯಾವುದೇ ಭತ್ಯೆ ನೀಡಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *