ರಾಯಚೂರು ಮಾರ್ಚ್ 12 (ಕರ್ನಾಟಕ ವಾರ್ತೆ): ಇಲ್ಲಿನ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿ ಹಳೆ ವಿದ್ಯುತ್ ಕಂಬಗಳ ಬದಲಾವಣೆ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಮಾರ್ಚ್ 14ರ ಬೆಳಿಗ್ಗೆ 11ರಿಂದ ಸಂಜೆ 4 ರವರಗೆ ನಗರದ ವಿವಿಧ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಅಂದು ಬೆಳಿಗ್ಗೆಯಿಂದ ಸಿಟಿ ಟಾಕೀಸ್ ರೋಡ್, ಮಾಂಗಳ್ಯ, ಸಿ.ಎಮ್.ಆರ್ ಶಾಪಿಂಗ್ ಮಾಲ್, ಗಾಂಧಿ ಚೌಕ್, ಮಹಾವೀರ್ ಚೌಕ್, ಮಹಾಳೇಶ್ವರ ವೃತ್ತ, ಕುಂಬಾರ್ ಓನಿ, ಮಕ್ತಲ ಪೇಟೆ, ಮದ್ದಿಪೇಟೆ, ವಡ್ಡೆಪ್ಪ ಜಿನ್ಮ, ಸುರಕ್ಷ ಆಸ್ಪತ್ರೆ, ಬ್ರೆಸ್ತವಾರ ಪೇಟೆ (ಪಿಂಜಾರ್ ವಾಡಿ), ಗೋಶಾ¯ ರಸ್ತೆ, ಅರಬ್ ಮೊಹಲ್ಲಾ, ಸಿಯಾತಲಾಬ, ಆಟೋ ನಗರ, ಶಿವಂ ಆಸ್ಪತ್ರೆ, ಜಿಲ್ಲಾ ಅಗ್ನಿ ಶಾಮಕ ಕಚೇರಿ, ಜಿಲ್ಲಾ ಪಂಚಾಯತಿ, ಗಂಜ್ ರಸ್ತೆ ಯಿಂದ ಬಸವನ ಬಾವಿ, ಜಿಲ್ಲಾ ಅರಣ್ಯ ಕಚೇರಿಯ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 24*7 ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

