ಸ್ವಯಂ ಉದ್ಯೋಗ ಮಾಡುವ ಕೌಶಲ್ಯವನ್ನು ಬೆಳಸಿಕೊಂಡು ನೂರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಮಾಲಕರಾಗಿ ಎಂದು ನಗರದ ಎಲ್ ಬಿ.ಕೆ ಪದವಿ ಪೂರ್ವ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಉದ್ಘಾಟನೆ ಮಾಡಿ HDFC ಬ್ಯಾಂಕಿನ ಮ್ಯಾನೇಜರಾದ ಯಂಕೋಬರಡ್ಡಿ ಮಾತಾನಾಡಿದರು.
ಈ ಸಂದರ್ಭದಲ್ಲಿ SBI ಬ್ಯಾಂಕಿನ ಮ್ಯಾನೆಜರ್ ಈಗಲು ಶ್ರೀನಿವಾಸ ಮತಾನಡಿ,ಉದ್ಯೋಗ ಮಾಡಿದರೆ ಕುಟುಂಬ ನಡೆಸಬಹುದು ಉದ್ಯೋಗ ಕೋಡುವ ಕೈಗಳಾದರೆ ನೂರಾರು ಜನರ ಬದುಕಿಗೆ ಆಶ್ರಯಕೊಟ್ಟಂತಾಗುತ್ತದೆ ಎಂದರು
ಪಾಟೀಲ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ R.ಸಿ ಪಾಟೀಲ್ ಮಾತಾನಾಡುತ್ತಾ,
ಉದ್ಯೋಗಂ ಪುರಷ ಲಕ್ಷಣಂ ಎನ್ನುವ ಕಾಲ ಇಂದು ಬದಲಾಗಿದೆ .ಪ್ರಸ್ತುತ ಮಹಿಳೆಯರು ಉದ್ಯೋಗದ ಕಡೆ ಮೊರೆಯಿಡುತ್ತಿರವುದು ಆಶದಾಯಕ ಇಂದು ದೇಶದ ಪ್ರಗತಿಗೆ ಯುವ ಜನತೆಯ ಉದ್ಯೋಗ ಅವಶ್ಯ. ವೇತನ ಎಷ್ಟೇ ಇದ್ದರೂ ಇಚ್ಚಿಪಟ್ಡು ಕೆಲಸ ಮಾಡಿ ಸ್ವಾಲಂಬನೆ ಬದುಕು ಕಟ್ಟಿಕೊಳ್ಳಲು ಕರೆ ನೀಡಿದರು.ಉದ್ಯೋಗ ಮಾಡಿದರೆ ನಮ್ಮ ಕುಟುಂಬ ಬದುಕುತ್ತೆ ಆದರೆ ಕೆಲಸ ಕೊಡುವ ಮಾಲಕರಾದ ಇತರರನ್ನು ಬದುಕುಸುತ್ತೆ,ಶಿಕ್ಷಣದ ಜೊತೆಗೆ ಉದ್ಯೋಗ ಕೊಡುವ ಮಾರ್ಗದರ್ಶನ ಮಾಡಿ ಉದ್ಯೋಗದಾತರ ಕೇಲಸವಮಾಡುತ್ತಿರುವ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದರು. ಆದಿ ಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ವಿದ್ಯಾ ವಿಷಯಕ್ ಪರಿಷತ್ತಿನ ಸದಸ್ಯರಾದ
ಅನೀಲಕುಮಾರ ಮಾತಾನಾಡಿ
ಉದ್ಯೋಗದಾತರು ಸರಿಯಾದ ಸಿದ್ದತೆಯನ್ಮು ಮಾಡಿಕೊಂಡು ಸಂದರ್ಶನವನ್ನು ಕೌಶಲ್ಯ ದೊಂದಿಗೆ ಭಾಗವಹಿಸಿ .ಆರ್ಥಿಕ ಶಕ್ತಿಯಿಂದ ಕುಟುಂಬ ನೆಡಸಲು ನೆರವಾಗಿ ,ಉದ್ಯೋಗದ ಜೊತೆಗೆ ಮುಂದೊಂದು ದಿನ ನೀವೂ ಉದ್ಯೋಗದಾತರಾಗಿ ಪರಿವರ್ತನೆ ಆಗಲು ಕರೆ ನೀಡಿದರು. ಮತ್ತೊರ್ವ ಗೌರವ ಉಪಸ್ಥಿತರಾದ ಆದಿ ಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ವಿದ್ಯಾ ವಿಷಯಕ್ ಪರಿಷತ್ತಿನ ಸದಸ್ಯರಾದ
ಸತ್ಯನಾರಾಯಣ ಶ್ರೇಷ್ಠಿ ಮಾತಾನಡಿ
ಶಿಕ್ಷಣ ಸಂಸ್ಥೆಗಳು ಉದ್ಯೋಗ ಕೊಡುವ ಕೆಲಸ ಮಾಡಲ್ಲ ಬದಲಾಗಿ ಉದ್ಯೋಗ ಪಡೆಯವ ವಿವಿಧ ಕೌಶಲ್ಯವನ್ನು ಕಲಿಸುತ್ತದೆ . ಪ್ರತಿಭಗೆತಕ್ಕಂತೆ ಉದ್ಯೋಗ ಪಡೆದುಕೊಳ್ಳಲು ಕರೆ ನೀಡಿದರು. ಸಂದರ್ಭದಲ್ಲಿ
ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಯೋಜಕರು ಮಾತನಾಡಿ
ಈ ಸಮರ್ಥನಂ ಅಂಗವಿಕಲರ ಸಂಸ್ಥೆ ಉದ್ಯೋಗದಾರತರಿಗೆ ಅವರ ಅವರ ಪ್ರತಿಬೆ ಕೌಶಲ್ಯ ಅನುಭವ ,ಸಂವಹನ ಕೌಶಲ್ಯ ಆಧಾರಿಸಿ ತಮಗೆ ಉದ್ಯೋಗ ಹರಿಸಿ ಬರುತ್ತವೆ.ಆದರೆ ಉದ್ಯೋಗಕ್ಕೆ ಆಯ್ಕೆ ಆದಂತಹ ಅಭ್ಯರ್ಥಿಗಳು ಸ್ಥಳ ಆಯ್ಕೆ ವಿಷಯದಲ್ಲಿ ದೂರ ಎಂದು ಉದ್ಯೋಗ ಕರ್ತವ್ಯಕ್ಕೆ ಹಾಜರಾಗದಿರವುದು ವಿಶಾಷದನೀಯ ಸಂಗತಿ ಎಂದರು.
ಉದ್ಯೋಗ ಮೇಳದಲ್ಲಿ ೬೦೦ ಕ್ಕೂ ಹೆಚ್ಚು ಅಬ್ಯಾರ್ಥಿಗಳು ನೊಂದಾಣಿ ಮಾಡಿಕೊಂಡು ಭಾಗವಹಿಸಿದ್ದರು.೨೫ ಕ್ಕೂ ಹೆಚ್ಚು ಕಂಪನಿಗಳು ಮುಕ್ತ ಅವಕಾಶ ನೀಡಿದ್ದವು.
ಈ ಸಂದರ್ಬದಲ್ಲಿ ಸಂಸ್ಥೆಯ ಅದ್ಯಕ್ಷರಾದ ಪರಶುರಾಮ ಮಲ್ಲಾಪುರ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ದಳವಾಯಿ ಪ್ರಾಸ್ತಾವಿಕ ಮಾತನಾಡಿದರು.ಸಂಸ್ಥೆಯ ಕಾರ್ಯದರ್ಶಿಯಾದ ಡಾ.ಅರುಣಕುಮಾರ ಬೇರ್ಗಿ ಖಾಜಾಂಚಿಗಳಾದ ಜಯಪ್ಪ ಗೊರೇಬಾಳ ,ಉಪದ್ಯಾಕ್ಷರಾದ ಶಂಕರ್ ಪತ್ತಾರ್,ಎಲ್ ಬಿ ಕೆ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಶಿವುಕುಮಾರ ಬಿಂಗಿ ,ಉದ್ಯೋಗ ಸ್ಥಳ ನೀಯೋಜನೆಯ ಸಂಚಲಕಾರದ ವೆಂಕೋಬ ಉಪಸ್ಥಿತಿರಿದ್ದರು.ಉಪನ್ಯಾಸಕಿ ಕು ಜ್ಯೋತಿ ನಿರೂಪಿಸಿದರು, ಪಂಪಾಪತಿ ಸ್ವಾಗತಿಸಿದರು ಮರಿಸ್ವಾಮಿ ನಂಜಲದಿನ್ನಿ ವಂದಿಸಿದರು.

